ಮತ್ತೆ ಪ್ರೀತಿಯಲ್ಲಿ‌ ಬಿದ್ದಿದ್ದಾರ ರಶ್ಮಿಕಾ ? ಆ ಒಂದು ಟ್ವೀಟ್ನಲ್ಲಿದೆ ಎಲ್ಲದಕ್ಕೂ ಉತ್ತರ !

0
331

ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಅದು, ಓನ್ಸ್ ಅಗೈನ್ ರಕ್ಷಿತ್ ಶೆಟ್ಟಿ & ವಿಜಯ್ ದೇವರಕೊಂಡ ಕಾರಣದಿಂದ. ಹೌದು, ಕೊಡಗಿನ ಕಿನ್ನರಿ.. ಇದೀಗ, ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದ್ರ ಕೈಗನ್ನಡಿ ಅನ್ನುವಂತೆ ಕನ್ನಡ ಚಿತ್ರರಂಗದಿಂದ ಬಹುತೇಕ ಕಾಣೆಯಾಗಿರುವ ರಶ್ಮಿಕಾರ ಡಿಯರ್ ಕಾಮ್ರೇಡ್ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸ್ಥಿತಿ ಹೀಗಿರುವಾಗ್ಲೇ.. ರಶ್ಮಿಕಾ ಮೇಲೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಮತ್ತೆ ಕೆಂಡ ಕಾರುತ್ತಿದ್ದಾರೆ. ಯಸ್, ರಶ್ಮಿಕಾ ಮಂದಣ್ಣ ಮೇಲೀಗ ರಕ್ಷಿತ್ ಶೆಟ್ಟಿ ಭಕ್ತಗಣ ಮುನಿಸಿಕೊಂಡಿದೆ. ಇದಕ್ಕೆ ಕಾರಣ.. ರಶ್ಮಿಕಾ ಮಾಡಿದ ಅದೊಂದು ಟ್ವೀಟ್. ಹೌದು, ನಿಮಗೆ ಗೊತ್ತಿರಲಿ ರಶ್ಮಿಕಾ ಮಂದಣ್ಣ.. ಇತ್ತೀಚಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾಲ್ಕು ಸಾಲುಗಳನ್ನ ಗೀಚಿಕೊಂಡಿದ್ದಾರೆ. ಅದು, ಮಾಮೂಲಿ ಸಾಲುಗಳಲ್ಲ.. ಚಿತ್ರಕ್ಕೆ ಸಂಬಂಧಪಟ್ಟ ಸಾಲುಗಳೂ ಅಲ್ಲ. ಅದು, ಪ್ರೀತಿಯ ಅಮಲಿನ ಸಾಲುಗಳು.

ಇದು ನಾನು ಪ್ರೀತಿಸುವ ಸಮಯ. ನಿಜವಾದ ಪ್ರೀತಿಯನ್ನು ಪರೀಕ್ಷಿಸುವುದು ಇಲ್ಲಿ. ಮತ್ತು ಈ ಬಾರಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಯಾರೆಂಬುದುನ್ನು ತಿಳಿದುಕೊಳ್ಳುವ ಸಮಯವಿದು. ಅವರು ಈ ಜಗತ್ತಿನಲ್ಲಿ ನಿಜವಾಗಿಯೂ ನಿಮ್ಮ ಎಲ್ಲಾ ಪ್ರೀತಿ ಮತ್ತು ಆರೈಕೆಗೆ ಅರ್ಹರು. ಹಾಗೆಯೇ ಯಾರು ನಿಮ್ಮನ್ನು ಪ್ರೀತಿಸುವುದಿಲ್ಲವೂ ಇರಲಿ ಬಿಡಿ. ಅವರಿಗೂ ಒಳ್ಳೆಯದಾಗಲಿ ಎಂದು ಹರಿಸಿ ಬಿಡಿ” ಎಂದಿದ್ದಾರೆ ರಶ್ಮಿಕಾ. ರಶ್ಮಿಕಾ ಬರೆದ ಸಾಲುಗಳು. ಇದೇ ಸಾಲುಗಳು ಇದೀಗ ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನ ಕೆರಳಿಸಿದೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡ ಮೇಲೆ ರಶ್ಮಿಕಾಗೇನಾದ್ರೂ ನಿಜಕ್ಕೂ ಪ್ರೀತಿಯಾಯ್ತಾ ಅನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here