ಮತ್ತೆ ನಿರ್ದೇಶಕನ ಕ್ಯಾಪ್ ಹಾಕಲಿದ್ದಾರೆ ಉಪ್ಪಿ – 50ನೇ ಸಿನಿಮಾಕ್ಕೆ ನಡೀತಿದೆ ಸದ್ದಿಲ್ಲದೆ ತಯಾರಿ

0
46

ಪ್ರಜಾಕಾರಣಿ ಉಪ್ಪಿ, ಮತ್ತೆ ಸಿನಿಮಾರಂಗಕ್ಕೆ ಫುಲ್ ಟೈಮ್ ಪಪ್ಪಿ ಕೊಡುವ ಮನಸು ಮಾಡಿದ್ದಾರಾ.. ಹೀಗೊಂದು, ಪ್ರಶ್ನೆ ಇದೀಗ ಉಪ್ಪಿ ಅಭಿಮಾನಿಗಳನ್ನ ಕಾಡ್ತಿದೆ. ಕಾರಣ, ರಿಯಲ್ ಸ್ಟಾರ್ ಮತ್ತೊಮ್ಮೆ ನಿರ್ದೇಶಕನ ಕುರ್ಚಿ ಮೇಲೆ ಕುಳಿತುಕೊಳ್ತಿದ್ದಾರೆ. ಇದು, ಉಪ್ಪಿನಕಾಯಿ ಮಿಸ್ ಮಾಡ್ಕೊಳ್ತಿದ್ದ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ತಂದು ಕೊಟ್ಟಿದೆ.ಹೌದು, ಕತ್ರಿಗುಪ್ಪೆ ಕಾಲನಿನಿಂದ ತೂರಿ ಬಂದ ಸುದ್ದಿಯ ಪ್ರಕಾರ, ಉಪ್ಪಿಯ ೫೦ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿಗಳೂ ನಡೆಯುತ್ತಿವೆ. ಸಿನಿಮಾಗೆ ಅಧೀರ ಅನ್ನುವ ಹೆಸರನ್ನೂ ಇಡಲಾಗಿದೆಯಂತೆ. ಬಟ್, ಅಧೀರ ಅನ್ನುವ ಶೀರ್ಷಿಕೆನೇ ಅಂತಿಮನಾ.. ಇದಕ್ಕೆ ಉತ್ತರ ಇಲ್ಲ. ಕಾರಣ,ಇದು ಬುದ್ಧಿವಂತ ನಿರ್ದೇಶಕನ ಸಿನಿಮಾ. ಹಾಗಾಗಿ ಅಧೀರ ಎಂಬ ಶೀರ್ಷಿಕೆ ಇಡಲು ಸಾಧ್ಯವಿಲ್ಲ ಅನ್ನೋದು ಅನೇಕರ ಓಪಿನಿಯನ್.ಇನ್ನೂ ಚಿತ್ರಕ್ಕೆ ಸಂತು ಕಥೆ ಇದೆ. ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಲಿದ್ದಾರೆ. ಅದು, ಐವತ್ತು ಕೋಟಿ. ಇನ್ನುಳಿದಂತೆ ಚಿತ್ರದ ಇನ್ನುಳಿದ ಮಾಹಿತಿಗಳು ಅಧಿಕೃತವಾಗಿ ಹೊರಬೀಳಬೇಕಿದೆ. ಅಲ್ಲಿವರೆಗೂ ಕಾಯಬೇಕು.

LEAVE A REPLY

Please enter your comment!
Please enter your name here