ಭಟ್ಟರ ತಲೆ ಹಾಡುಗಳ ಅಕ್ಷಯಪಾತ್ರೆ – ಖಾಲಿಯಾಗದಷ್ಟು ಪದಗಳಿವೆ – ಸಾಕ್ಷಿ ಮಂಕುತಿಮ್ಮ

0
44

ಪಂಚತಂತ್ರ.. ಯೋಗರಾಜ್ ಭಟ್ ಫ್ಲೇವರ್ ಇರುವ ಸಿನಿಮಾ. ಒಂದಾದ ಮೇಲೊಂದು ಹಾಡುಗಳ ಬಾಣಗಳನ್ನ ಅಭಿಮಾನಿಗಳ ಹೃದಯಕ್ಕೆ ಬಿಡ್ತಿರುವ ಭಟ್ರು, ಇದೀಗ ಮತ್ತೊಂದು ಫಿಲಾಸಫಿ ಹೇಳ್ತಿದ್ದಾರೆ. ನೀನೇ ಹೇಳು ಮಂಕುತಿಮ್ಮ ಗೆಲುವರ್ಯಾರಿಲ್ಲಿ ಅನ್ನುವ ಪ್ರಶ್ನೆ ಕೇಳ್ತಿದ್ದಾರೆ.ಹಿಂದಿನ ಹಾಗೂ ಇಂದಿನ ತಲೆಮಾರಿನ ನಡುವಿನ, ಕೈಗನ್ನಡಿ ಈ ಹಾಡು. ಬಿಸಿ ರಕ್ತದ ಪೊಗರಿನ ಗುಂಪಿನ ನಾಯಕನಾಗಿ ಇಲ್ಲಿ ವಿಹಾನ್ ಗೌಡ ಇದ್ದರೆ, ಆ ಕಡೆ ಬಿ.ಪಿ.ಶುಗರ್ ಹೊಂದಿರುವ ಗುಂಪಿನ ನಾಯಕನಾಗಿ ರಂಗಾಯಣ ರಘು ಇದ್ದಾರೆ.ಮಾರಾಮಾರಿ, ಜಿದ್ದಾಜಿದ್ದಿ.. ಲೈಫು ನಿರಂತರ ರೇಸು. ಹೀಗಿರುವಾಗ.. ಗೆಲ್ತೀನಿ ಅಂಥ ಎರಡು ಬಣ ತೊಡೆ ತಟ್ಟಿ ನಿಂತಾಗಿನ ಚಿತ್ರಣವನ್ನ ಕಟ್ಟಿಕೊಡುವ ಯತ್ನವನ್ನ ಭಟ್ರು ಇಲ್ಲಿ ಮಾಡಿದ್ದಾರೆ. ಭಟ್ರು ಮಾಡಿರುವ ಇದೇ ಪ್ರಯತ್ನಕ್ಕೆ.. ಸಿನಿಪ್ರಿಯರು ಉಘೇ ಉಘೇ ಅನ್ನುತ್ತಿದ್ದಾರೆ. ಭಟ್ರಿಗೆ ಭಟ್ರೇ ಸಾಟಿ ಅನ್ನುವ ಮಾತುಗಳನ್ನಾಡ್ತಿದ್ದಾರೆ.

ಪಂಚತಂತ್ರ ಬೆಸಿಕಲಿ ಕಾರ್ ರೇಸಿನ ಬ್ಯಾಕ್ ಡ್ರಾಫ್‌ನಲ್ಲಿ ತಯಾರಾದ ಸಿನಿಮಾ. ಇಂಥಹ ಥೀಮ್ ಹೊಂದಿರುವ ಸಿನಿಮಾದಲ್ಲಿ, ಇದೇ ಹಾಡು.. ತುಂಬಾನೇ ಮಹತ್ವದ್ದು. ಹಾಗಾಗಿ, ತಲೆ ಕೆಡಿಸಿಕೊಂಡು.. ಸಾಹಿತ್ಯ ಬರೆದಿರುವ ಭಟ್ರಿಗೆ, ನೃತ್ಯ ನಿರ್ದೇಶಕರಾಗಿ ಇಮ್ರಾನ್ ಸರ್ದಾರಿಯಾ ಸಾಥ್ ನೀಡಿದ್ದಾರೆ. ಭಟ್ರ ಸಾಹಿತ್ಯಕ್ಕೆ ಅನುಗುಣವಾಗಿ ಹಾಡನ್ನ ತೆರೆ ಮೇಲೆ ಕಟ್ಟಿಕೊಡುವ ಪ್ರಾಮಾಣಿಕ ಯತ್ನ ಮಾಡಿದ್ದಾರೆ. ಇನ್ನೂ ಹಿರಿಯ ನಾಗರೀಕರು, ಹಾಗೂ ಇಂದಿನ ಯುವಕರ ನಡುವಿನ ಇದೇ ಗುದ್ಧಾಟದ ಕಥನಕ್ಕೆ, ರಘು ದೀಕ್ಷಿತ್ ಮತ್ತೊಂದಷ್ಟು ಕಳೆ ತುಂಬಿದ್ದಾರೆ. ಹಾಡಿಗೆ ಧ್ವನಿಯಾಗಿದ್ದಾರೆ. ಅಂದ ಹಾಗೇ ಇದೇ ಮೊದಲ ಬಾರಿ ಯೋಗರಾಜ್ ಭಟ್ ನಿರ್ದೇಶನದ ಚಿತ್ರದ ಹಾಡನ್ನ, ರಘು ದೀಕ್ಷಿತ್ ಹಾಡಿರೋದು ಇಲ್ಲಿನ ಇನ್ನೊಂದು ವಿಶೇಷ.

ಮಂಕುತಿಮ್ಮ ಹಾಡು.. ಒಂದರ್ಥದಲ್ಲಿ ರಘು ದೀಕ್ಷಿತ್‌ಗೂ ಸವಾಲಾಗಿದ್ದು ಸುಳ್ಳಲ್ಲ. ಕಾರಣ, ಇಲ್ಲಿ ಧ್ವನಿಯ ಅನೇಕ ಏರಿಳಿತಗಳೂ ಮಾಡಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ, ಸ್ವಲ್ಪ.. ಕಷ್ಟಪಟ್ಟು, ಇಷ್ಟವಾಗುವಂತೆ ರಘು ದೀಕ್ಷಿತ್ ಹಾಡು ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಬಗ್ಗೆಯಂತೂ ಮಾತನಾಡುವಂಗಿಲ್ಲ. ಬಹುಶ, ಹರಿಯನ್ನ ಭಟ್ರು ಅರ್ಥ ಮಾಡ್ಕೊಂಡಷ್ಟು ಇನ್ಯಾರು ಮಾಡಿಕೊಂಡಿಲ್ಲ. ಇದೇ ಕಾರಣಕ್ಕೋ ಜೋಡಿ ಒಂದಾದಗೆಲ್ಲ ಇಂಥ ಹಾಡುಗಳೂ ಹುಟ್ಟಲು ಸಾಧ್ಯವಾಗೋದು ಅನ್ಸುತ್ತೆ. ಇದು, ನಮ್ಮ ಮಾತಲ್ಲ.. ಹಾಡು ಕೇಳಿದವ್ರ ಮನದಾಳದ ಮಾತು. ಪಂಚತಂತ್ರಕ್ಕೆ ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಬಂಡವಾಳ ಹೂಡಿದ್ದಾರೆ. ಚಿತ್ರದ ಕ್ವಾಲಿಟಿ ವಿಚಾರದಲ್ಲೂ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಇನ್ನೂ ನಾಯಕಿಯಾಗಿ ಇಲ್ಲಿರೋದು ಸೋನಲ್.

LEAVE A REPLY

Please enter your comment!
Please enter your name here