ಬೆಂಕಿಯಷ್ಟೆ ಪವರ್ ಫುಲ್‌ ಅಗಿದೆ ಅಪ್ಪು‌ ನೆಕ್ಷ್ಟ್ ಸಿನಿಮಾ ಟೈಟಲ್ – ಇದು ಪುನೀತ್ ಹಾಗು ಪವನ್‌ ಸಿನಿಮಾ

0
383

ಪುನೀತ್ ರಾಜ್ ಕುಮಾರ್. ಅಭಿಮಾನಿಗಳ ಪ್ರೀತಿಯ ದೊಡ್ಮನೆ ಹುಡುಗ. ಅಂಜನಿಪುತ್ರನಾಗಿ ಐವತ್ತು ದಿನಗಳ ಯಶಸ್ವೀ ನಗು ಬೀರಿದ ಪುನೀತ್, ಮುಂದಿನ ಸಿನಿಮಾ ಯಾವದು. ಹೀಗೊಂದು ಅತೀವವಾದ ಕೂತುಹಲ ಅಭಿಮಾನಿಗಳಲ್ಲಿತ್ತು. ಇದಕ್ಕೆ ತಕ್ಕಂತೆ.. ಅಪ್ಪು ಸಿನಿಮಾ ಬಗ್ಗೆ ಕೆಲ ಸುದ್ದಿಗಳು ಕೇಳಿ ಬಂದಿದ್ದವು. ಆದ್ರೀಗ.. ಎಲ್ಲದಕ್ಕೂ ಉತ್ತರ ಸಿಕ್ಕಿದೆ.

ಪುನೀತ್ ಹೊಸ ಸಿನಿಮಾದ ಮುಹೂರ್ತ ಇತ್ತೀಚಿಗೆ ನಡೆದಿದೆ. ಹಿಂದೆ ರಣವಿಕ್ರಮ ಸಿನಿಮಾದಲ್ಲಿ ಪುನೀತ್‌ಗೆ ಖಾಕಿ ತೊಡಿಸಿದ್ದ ಪವನ್ ಒಡೆಯರ್, ಸಾರಥ್ಯದ ಸಿನಿಮಾ ಇದು ಅನ್ನೋದು ಇಲ್ಲಿನ ಮತ್ತೊಂದು ವಿಶೇಷ. ಇನ್ನು.. ಕನ್ನಡ ಚಿತ್ರರಂಗದ ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಆಫ್ಟರ್ ಎ ಲಾಂಗ್ ಗ್ಯಾಪ್ ರಾಕ್ ಲೈನ್ & ಪುನೀತ್ ಸಿನಿಮಾಗಾಗಿ ಒಂದಾಗಿರೋದು ಇಲ್ಲಿನ ಮತ್ತೊಂದು ಸ್ಪೆಷಲ್ ಸಂಗತಿ. ಅಂದ ಹಾಗೇ ಚಿತ್ರಕ್ಕೆ ಇನ್ನು ಪಂಜು ಎಂದು ಹೆಸರಿಡಲಾಗಿದೆಯಂತೆ , ಪಂಜು ಎಂದರೆ ಬೆಂಕಿ ಎಂದರ್ಥ. 

LEAVE A REPLY

Please enter your comment!
Please enter your name here