ಬೆಂಕಿಗೆ ಆಹುತಿಯಾದ ಬಿಗ್ ಬಾಸ್ ಮನೆ – ಸುಟ್ಟು ಭಸ್ಮವಾದ ಕಿಚ್ಚನ ಅರಮನೆ

0
505

ಬೆಂಗಳೂರು ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಮೀಪದಲ್ಲೇ ಇದ್ದ ಬಿಗ್ ಬಾಸ್ ಮನೆ ಕೂಡ ಬೆಂಕಿಗಾಹುತಿಯಾಗಿದೆ.

ರಾಮನಗರ ಜಿಲ್ಲೆಯ ಬಿಡದಿ ಬಳಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯ ಆವರಣದಲ್ಲಿರುವ ಮೇಣದ ಮ್ಯೂಸಿಯಂನಲ್ಲಿ ಮೊದಲಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಇದಕ್ಕೆ  ಹೊಂದಿಕೊಂಡಿರುವ ಕನ್ನಡದ ಬಿಗ್ ಬಾಸ್ ಮನೆಗೂ ಬೆಂಕಿ ಹೊತ್ತಿದೆ. ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿ ಮೇಣದ ಮ್ಯೂಸಿಯಂ ಅನ್ನು ಅವರಿಸಿತ್ತು. ಬಳಿಕ ಕಲವೇ ಕ್ಷಣದಲ್ಲಿ ಬಿಗ್ ಬಾಸ್ ಮನೆಗೂ ಬೆಂಕಿ ಆವರಿಸಿದೆ. 

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ನಡೆಸಿದ್ದು, 10ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಮೇಲ್ನೋಟಕ್ಕೆ ಶಾರ್ಟ್  ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here