ಬಿಗ್ ಬಾಸ್ ಮುಗಿಸಿ ಮನೆಗೆ ಬಂದ ದಿವಾಕರಿಗೆ ಆಘಾತ – ಮನೆಯಲ್ಲಿ ಕಾದಿತ್ತು ಶಾಕಿಂಗ್ ನ್ಯೂಸ್

0
1084

ಮನೆಗೆ ವಾಪಸ್ ಬಂದ್ಮೇಲೆ ಪತ್ನಿಯಿಂದ ದಿವಾಕರ್ ಗೆ ಸಿಕ್ತು ಶಾಕಿಂಗ್ ನ್ಯೂಸ್

ಮೂರುವರೆ ತಿಂಗಳ ಹಿಂದೆ ಬೀದಿ ಬೀದಿ ಸುತ್ತಿ ಊರೂರು ಅಲೆದು ತೈಲ ಮಾರಾಟ ಮಾಡುತ್ತಿದ್ದ ದಿವಾಕರ್, ಸದ್ಯ ಇಡೀ ಕರ್ನಾಟಕಕ್ಕೆ ‘ಬಿಗ್ ಬಾಸ್’ ಮೂಲಕ ಚಿರಪರಿಚಿತ. ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದಲ್ಲಿ ಜನಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ದಿವಾಕರ್ ರನ್ನರ್-ಅಪ್ ಆಗಿ ಹೊರ ಆಯ್ಕೆಯಾದರು . 106 ದಿನ ‘ಬಿಗ್ ಬಾಸ್’ ಎಂಬ ಚಿನ್ನದ ಪಂಜರದಲ್ಲಿ ಇದ್ದು ಕೊನೆಗೆ ಖ್ಯಾತಿ, ಜನಪ್ರಿಯತೆ, ಕೈಯಲ್ಲಿ ಒಂದು ಲಕ್ಷ ರೂಪಾಯಿ ಬಹುಮಾನ ಹಣ, ರನ್ನರ್-ಅಪ್ ಟ್ರೋಫಿ ಹಿಡಿದು ತಮ್ಮ ಮನೆ ಕಡೆಗೆ ಹೆಜ್ಜೆ ಹಾಕಿದ ದಿವಾಕರ್ ಬಾಳಲ್ಲಿ ವಿಧಿ ಆಡಿದ ಆಟವೇ ಬೇರೆ .. ಇದು ಇಂತವರ ಕರುಳನ್ನು ಚುರುಕ್ ಅನ್ನಿಸುವಂಥ ವಿಷಯ…

ತನ್ನ ಗಂಡ ‘ಬಿಗ್ ಬಾಸ್ ವಿನ್ನರ್’ ಆಗಬೇಕು ಎಂಬುದು ಮಮತಾ ಅವರ ಆಸೆ ಆಗಿತ್ತು. ಆದ್ರೆ, ದಿವಾಕರ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇತ್ತ ದಿವಾಕರ್ ಗೆ ಹೆಣ್ಣು ಮಕ್ಕಳೆಂದರೆ ಅಚ್ಚುಮೆಚ್ಚು. ಇದೇ ವಿಚಾರದ ಕುರಿತಾಗಿ ಸಿಹಿ ಸುದ್ದಿ ನಿರೀಕ್ಷೆ ಮಾಡಿದ್ದ ದಿವಾಕರ್ ಅವರಿಗೆ ದೊಡ್ಡ ಶಾಕ್ ಕಾದಿತ್ತು.

ದಿವಾಕರ್ ಬಿಗ್ ಬಾಸ್ ಮನೆಗೆ ಹೋಗುವಾಗ ತನ್ನ ಹೆಂಡತಿ ಮಮತಾ 3 ತಿಂಗಳ ಗರ್ಭಿಣಿ , ಅದೇ ಖುಷಿಯಲ್ಲಿ ದಿವಾಕರ್ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು , ಆದ್ರೆ ದಿವಾಕರ್ ಅನುಪಸ್ಥಿತಿಯಲ್ಲಿ ಇತ್ತ ಕಡೆ ಮಮತಾ ಅನಾರೋಗ್ಯಕ್ಕೆ ತುತ್ತಾಗಿ ಗರ್ಭಪಾತವಾಗಿದೆ …

ಇಷ್ಟೆಲ್ಲಾ ಆದರೂ ಮಮತಾ ಬಿಗ್ ಬಾಸ್ ಮನೆಯೊಳಗೇ ಹೋದಾಗ ಈ ವಿಷಯ ದಿವಾಕರ್ ಗೆ ತಿಳಿಸಿಲ್ಲ , ಎಲ್ಲಿ ತನ್ನ ಗಂಡನ ಆಟಕ್ಕೆ ದಕ್ಕೆ ಉಂಟಾಗುತ್ತೆ ಅನ್ನೋ ಕಾರಣದಿಂದ ನೋವನ್ನು ತನ್ನೊಳಗೆ ಇಟ್ಟುಕೊಂಡಿದ್ದ ಮಮತಾ , ಗಂಡ ಈಗ ಬಿಗ್ ಬಾಸ್ ಮುಗಿಸಿ ಮನೆಗೆ ಬಂದಮೇಲೆ ತನ್ನೊಳಗಿದ್ದ ನೋವನ್ನು ಆಚೆ ಹಾಕಿದ್ದಾರೆ …

ಇದು ದಿವಾಕರ್ ಗೆ ಜೀರ್ಣಿಸಿಕೊಳ್ಳಲಾಗದಂತ ಆಘಾತ .. ಅತ್ತ ಕಡೆ ಬಿಗ್ ಬಾಸ್ ನಲ್ಲಿ ವಿನ್ನರ್ ಸ್ಥಾನದಿಂದ ವಂಚಿತರಾಗಲಿ ರನ್ನರ್ ಆದ್ರೂ ಇತ್ತ ಕಡೆ ತನ್ನ ಹೆಂಡತಿಯ ಗರ್ಭಪಾತ … ಆ ದೇವರು ಈ ನೋವನ್ನು ಟವೆದುಕೊಳ್ಳುವ ಶಕ್ತಿ ಆ ದಿವಾಕರ್ ಗೆ ಕೊಡಲಿ ಎಂದು ಪ್ರಾರ್ಥಿಸೋಣ ….

‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೆ, ದಿವಾಕರ್ ಅವರಿಗೆ ಸಿನಿಮಾ ಹಾಗೂ ಸೀರಿಯಲ್ ಆಫರ್ ಬರ್ತಿದ್ಯಂತೆ. ಆದ್ರೆ, ಇನ್ನೂ ಯಾವ ನಿರ್ಧಾರ ಕೂಡ ತೆಗೆದುಕೊಂಡಿಲ್ಲ ಅಂತಾರೆ ದಿವಾಕರ್.

ನಿಮಗೆ ಇದು ಇಷ್ಟವಾದಲ್ಲಿ ಪ್ರಚಾರ facebook ಹಾಗು website like ಮಾಡಿ share ಮಾಡಿ.. youtube ನಲ್ಲಿ ಪ್ರಚಾರ ಮೀಡಿಯಾ subscribe ಮಾಡಿ …

 

LEAVE A REPLY

Please enter your comment!
Please enter your name here