ಬಾಲಿವುಡ್ನಲ್ಲಿ ಮತ್ತೆ ಶುರುವಾಗಲಿದೆ ಕಿಚ್ಚನ ಆರ್ಭಟ – ಸಲ್ಮಾನ್ಗೆ ವಿಲನ್ ಆದ ಪೈಲ್ವಾನ್

0
242

ಸುದೀಪ.. ಕನ್ನಡ ಚಿತ್ರರಂಗದ ಆರಡಿ ಕಟೌಟ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ, ಇದೀಗ.. ಸಲ್ಮಾನ್ ಖಾನ್‌ಗೆ ಸವಾಲು ಹಾಕಲು ಸಿದ್ಧರಾಗಿದ್ದಾರೆ. ಯಸ್, ಸುದೀಪ.. ಸಲ್ಮಾನ್ ವಿರುದ್ಧ ಅಖಾಡಕ್ಕಿಳಿಯುತ್ತಿದ್ದಾರೆ. ಇಂಥಹದ್ದೊಂದು ಶುಭಘಳಿಗೆಗೆ ಮುಹೂರ್ತ ಕೂಡಿ ಬಂದಿದೆ. ನಿಮಗೆ ಗೊತ್ತಿರಲಿ, ಸಲ್ಮಾನ್ ಅದ್ಯಾವಾಗ ದಬಂಗ್ 3 ಅನೌನ್ಸ್ ಮಾಡಿದ್ರೋ, ಅಂದಿನಿಂದನೇ.. ದಬಂಗ್‌ನಲ್ಲಿ ಸುದೀಪ ಧಮಾಕಾ ಇರಲಿದೆ ಅನ್ನುವ ಸುದ್ದಿ ಸದ್ದು ಮಾಡಿತ್ತು. ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಸುದೀಪ ಕಾಣಸಿಗಲಿದ್ದಾರೆ ಅನ್ನುವ ಸುದ್ದಿ, ಅಭಿಮಾನಿಗಳನ್ನ ಹುಚ್ಚೆಬ್ಬಿಸಿತ್ತು. ಇದಕ್ಕೆ ತಕ್ಕಂತೆ ಸುದೀಪ ಕೂಡಾ ಮಾತುಕಥೆ ನಡೆಯುತ್ತಿದೆ ಅನ್ನುವ ಮಾತುಗಳನ್ನಾಡಿದ್ದರು. ಇದು, ಇನ್ನಿಲ್ಲದ ಕೂತುಹಲಕ್ಕೂ ಕಾರಣವಾಗಿತ್ತು. ಇದೀಗ, ಎಲ್ಲದಕ್ಕೂ ಬ್ರೇಕ್ ಬೀಳಲಿದೆ. ಕಾರಣ ಸುದೀಪ.. ಸಲ್ಮಾನ್ ಖಾನ್ ದಬಂಗ್ 3ಯ ಚಿತ್ರೀಕರಣದಲ್ಲಿ ಭಾಗಿಯಾಗಲು ಸಿದ್ಧರಾಗಿದ್ದಾರೆ. ಹೌದು, ಸಲ್ಮಾನ್ ಖಾನ್ ಅಭಿನಯದ ದಬಂಗ್ 3 ಚಿತ್ರದ ಮುಹೂರ್ತ ಇತ್ತೀಚಿಗೆ ಸದ್ದಿಲ್ಲದೇ ನಡೆದಿದೆ. ಪ್ರಭುದೇವಾ ನಿರ್ದೇಶನದಲ್ಲಿ ಬರಲಿರುವ ಇದೇ ದಬಂಗ್ 3 ಚಿತ್ರೀಕರಣನೂ ಶುರುವಾಗಿದೆ. ಭರ್ತಿ 500ಜನ ನೃತ್ಯಗಾರರೊಂದಿಗೆ ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣನೂ ಭರದಿಂದ ಸಾಗುತ್ತಿದೆ. ಹೀಗಿರುವಾಗ್ಲೇ ಸುದೀಪ ಮೇ ಮೊದಲ ವಾರದಲ್ಲಿ ದಬಂಗ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ, ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಅನ್ನುವ ಸುದ್ದಿ ಮುಂಬೈನಿಂದ ತೂರಿಬಂದಿದೆ. ಸದ್ಯ ಸುದೀಪ, ಪೈಲ್ವಾನ್ ಚಿತ್ರೀಕರಣ ಮುಗಿಸಿದ್ದಾರೆ. ಕೋಟಿಗೊಬ್ಬನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದ್ರ ನಡುವೆ.. ಚುನಾವಣೆಯ ಬಿಸಿ ಬೇರೆ. ಸುಮಲತಾ ಅವ್ರ ಪರ ಪ್ರಚಾರನೂ ಮಾಡಬೇಕಿದೆ. ಇದೆಲ್ಲ ಕಾರಣದಿಂದ ಏಪ್ರಿಲ್‌ನಲ್ಲಿ ಕಂಪ್ಲೀಟಾಗಿ ಬ್ಯುಸಿ ಇರುವ ಸುದೀಪ, ಮೇ ಮೊದಲ ವಾರ ದಬಂಗ್ 3 ಚಿತ್ರೀಕರಣದಲ್ಲಿ ಭಾಗಿಯಾಗುವ ಎಲ್ಲ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here