ಬಾಕ್ಸ್ ಆಫೀಸ್ನಲ್ಲಿ ನಟಸಾರ್ವಭೌಮನ ರುದ್ರ ನರ್ತನ – ಪವರ್ ಸ್ಟಾರ್ ಕಿಂಗ್ ಆಫ್ ಕಲೆಕ್ಷನ್

0
68

ನಟಸಾರ್ವಭೌಮ.. ನಿನ್ನೆಯಷ್ಟೇ ರಾಜ್ಯದಲ್ಲಿ ತೆರೆಗೆ ಬಂದ ಸಿನಿಮಾ. ನಿರೀಕ್ಷೆಯ ಬೆಟ್ಟವನ್ನೇ ಹೊತ್ತುಕೊಂಡು ಬಂದ ನಟಸಾರ್ವಭೌಮ ಇದೀಗ ನಿರೀಕ್ಷೆಯಂತೆ ಕೋಟಿ ಕೋಟಿ ಲೂಟಿ ಮಾಡಿದ್ದಾನೆ. ಹೌದು, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪಾಲಿಗೆ ಗುರುವಾರ ಲಕ್ಕಿ ಡೇ ಅಂತ ಮತ್ತೊಮ್ಮೆ ಸಾಬೀತಾಗಿದೆ. ನಿಮಗೆ ಗೊತ್ತಿರಲಿ ಬೆಂಗಳೂರಿನ 8 ಚಿತ್ರಮಂದಿರಗಳಲ್ಲಿ ನಡುರಾತ್ರಿ ಹನ್ನೆರಡಕ್ಕೆ ನಟಸಾರ್ವಭೌಮನ ಉತ್ಸವ ಆರಂಭವಾಗಿತ್ತು. ಒಂದು ಕಡೆ ಹಿಂದಿನ ದಿನವೇ ನಟಸಾರ್ವಭೌಮ ತೆರೆಗೆ ಬಂದಿದ್ದ. ಬರೀ ಬೆಂಗಳೂರಿನಲ್ಲೇ 78ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್‌ಗಳು ನಟಸಾರ್ವಭೌಮನಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡಿದ್ವು. ಇನ್ನೂ ಮಲ್ಟಿಪ್ಲೆಕ್ಸ್‌ ನಲ್ಲಿ ನಟಸಾರ್ವಭೌಮ ಕೆ.ಜಿ.ಎಫ್ ಚಿತ್ರವನ್ನೂ ಹಿಂದಿಕ್ಕಿ, ಬರೋಬ್ಬರಿ 628 ಪ್ರದರ್ಶನವನ್ನ ಕಂಡಿದ್ದ. ಒಟ್ಟಾರೆಯಾಗಿ ರಾಜ್ಯದ 350ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ನಿನ್ನೆ ನಡೆದಿದ್ದು ಅಕ್ಷರಶ ನಟಸಾರ್ವಭೌಮನ ದಂಡಯಾತ್ರೆ. ಹೀಗೆ.. ರಾಜ್ಯದ ಮೂಲೆ ಮೂಲೆಯಲ್ಲೂ ತನ್ನ ಪರಾಕ್ರಮ ತೋರಿಸಿದ್ದ ನಟಸಾರ್ವಭೌಮ, ಬರೀ ಕಿಂಗ್ ಆಫ್ ಸಿನಿಮಾ ಅಷ್ಟೇ ಅಲ್ಲ.. ಕಿಂಗ್ ಆಫ್ ಕಲೆಕ್ಷನ್ ಆಗುವತ್ತನೂ ಇದೀಗ ದಾಪುಗಾಲು ಇಡ್ತಿದ್ದಾನೆ.

ಯಸ್.. ಗಾಂಧಿನಗರದ ಗಲ್ಲಿಗಳಲ್ಲಿ ಕುಂತ ಪಂಡಿತರು ಕೊಡುವ ಲೆಕ್ಕಾಚಾರದ ಪ್ರಕಾರ ನಟಸಾರ್ವಭೌಮನ ಮೊದಲ ದಿನದ ಗಳಿಕೆ ಭರ್ತಿ 10 ಕೋಟಿ. ಹೌದು, ಕಿವಿಗೊಟ್ಟು ನೀವ್ ಕೇಳಿದ ಇದೇ ಸುದ್ದಿ ನಿಜ ಅನ್ನುತ್ತೆ ಗಾಂಧಿನಗರ. ಮೊದಲ ದಿನ ಭರ್ತಿ ಹತ್ತು ಕೋಟಿಗೂ ಅಧಿಕ ಹಣ ಲೂಟಿ ಮಾಡಿದ ನಟಸಾರ್ವಭೌಮನ ಎರಡನೇ ಹಾಗೂ ಮೂರನೇ ದಿನದ ಗಳಿಕೆ ಹೆಚ್ಚಾದ್ರೆ ಹೌಹಾರುವಂಗಿಲ್ಲ. ಕಾರಣ, ಚಿತ್ರಕ್ಕೆ.. ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ವಿಮರ್ಷಕರ ಪ್ರೀತಿಯೂ ಸಿಕ್ಕಿದೆ. ಹಾಗಾಗಿ, ನಿನ್ನೆಗಿಂತ ಇಂದು ನಟಸಾರ್ವಭೌಮ ನೋಡಲು ನೂಕು ನುಗ್ಗಲು ಹೆಚ್ಚಾಗಿದೆ. ಇದ್ರ ಪರಿಣಾಮ ಗಲ್ಲಾಪೆಟ್ಟಿಗೆಯಲ್ಲೂ ಗೋಚರವಾಗಲಿದೆ. ಹಾಗಾಗಿ, ವಾರಾಂತ್ಯ ಮುಗಿಯುವಷ್ಟರಲ್ಲಿ ನಟಸಾರ್ವಭೌಮ ಅನಾಯಾಸವಾಗಿ 30 ಕೋಟಿಯ ಗಡಿ ದಾಟ್ತಾನೇ ಅನ್ನುವ ಲೆಕ್ಕಾಚಾರವನ್ನ ಗಾಂಧಿನಗರದ ಮಂದಿ ನೀಡ್ತಿದ್ದಾರೆ, ಹಾಗಿದ್ದರೆ, ಗಾಂಧಿನಗರದಲ್ಲಿ ಕೇಳಿ ಬರ್ತಿಿರುವ ಸುದ್ದಿಯಂತೆ ನಟಸಾರ್ವಭೌಮ, ಇಷ್ಟೊಂದು ಗಳಿಸಿದ್ದು, ಗಳಿಸಲು ಸಾಧ್ಯವಾಗೋದು ನಿಜವಾ..ಹೀಗೊಂದು ಪ್ರಶ್ನೆಗುತ್ತರ ಅನ್ನುವಂತೆ ಚಿತ್ರದ ವಿತರಣೆ ಸಂಸ್ಥೆ ಧೀರಜ್ ಎಂಟರ್‌ಪ್ರೈಸಿಸ್..ಇನ್ನೊಂದು ಎರಡು ದಿನ ಪೂರ್ತಿ ಲೆಕ್ಕಾಚಾರದ ಪತ್ರದೊಂದಿಗೆ ನಿಮ್ಮ ಮುಂದೆ ಬರ್ತೀದನಿ ಅನ್ನುವ ಮಾತುಗಳನ್ನಾಡುತ್ತೆ.

LEAVE A REPLY

Please enter your comment!
Please enter your name here