ಬನ್ನಿ ಜೊತೆ ರೋಮ್ಯಾನ್ಸ್ ಮಾಡಲು ರಶ್ಮಿಕಾ ರೆಡಿ – ಕಿರಿಕ್ ಬೆಡಗಿಗೆ ಸಿಕ್ತು ಬಂಪರ್ ಆಫರ್

0
117

ರಶ್ಮಿಕಾ ಮಂದಣ್ಣ.. ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕನ್ನಡತಿ. ಮೊನ್ನೆಯಷ್ಟೇ ತಮಿಳುನಾಡಿಗೂ ಲಗ್ಗೆ ಇಟ್ಟಿದ್ದ ರಶ್ಮಿಕಾ, ಇದೀಗ.. ಇನ್ನೊಂದು ಬಂಪರ್ ಲಾಟರಿ ಹೊಡೆದಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಇದೀಗ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಂಥಹದ್ದೊಂದು ಸಂಭ್ರಮದ ಸುದ್ದಿಯನ್ನ ಖುದ್ದು ರಶ್ಮಿಕಾ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಅಸಲಿಗೆ ಇವತ್ತು ಅಲ್ಲು ಅರ್ಜುನ್‌ಗೆ ಹುಟ್ಟುಹಬ್ಬದ ಸಡಗರ. ಇದೇ ಸಡಗರ ಪ್ರಯುಕ್ತ ಇಂದು ಅಲ್ಲು ಅರ್ಜುನ್ ಅಭಿನಯದ ಮುಂದಿನ ಮೂರು ಚಿತ್ರಗಳನ್ನ ಅಧಿಕೃತವಾಗಿ ಘೋಶಿಸಲಾಗಿದೆ. ಹೀಗೆ ಘೋಶಣೆಯಾದ ಮೂರು ಚಿತ್ರಗಳಲ್ಲಿ ಸುಕುಮಾರ್ ನಿರ್ದೇಶನದ ಚಿತ್ರವೂ ಒಂದು. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿರುವ ಚಿತ್ರಕ್ಕೀಗ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಘೋಷಣೆ ಮಾಡಿದೆ. ಟ್ವಿಟರ್ ಮೂಲಕ ರಶ್ಮಿಕಾ ಈ ವಿಷಯ ಹಂಚಿಕೊಂಡಿದ್ದು ಸಖತ್ ಎಕ್ಸಾಯಟ್ ಆಗಿರೋದಾಗಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಆಗಿರುವ ಚಿತ್ರದ ಇನ್ನೊಂದಷ್ಟು ಡಿಟೈಲ್ಸ್ ಸದ್ಯದಲ್ಲೇ ಹೊರಬೀಳಲಿದೆ.

LEAVE A REPLY

Please enter your comment!
Please enter your name here