ಪ್ರೇಮ್‌ ಬಿಟ್ಟ ಈ‌ ಭಾಣಕ್ಕೆ ತಲೆಕೆಡಿಸಿಕೊಂಡಿರುವ ಶಿವಣ್ಣ ಸುದೀಪ್ ಫ್ಯಾನ್ಸ್

0
168

ದಿ ವಿಲನ್ ಚಿತ್ರದ ಘಟನಾವಳಿಗಳನ್ನ ಹಾಗೇ ನೆನಪಿಸಿಕೊಳ್ಳಿ. ಇಲ್ಲಿವರೆಗೂ ಪ್ರೇಮ್ ಶಿವಣ್ಣ & ಸುದೀಪ ಇಬ್ಬರು ಒಟ್ಟಿಗೆ ಇರುವ ಒಂದೇ ಒಂದು ಸನ್ನಿವೇಶವನ್ನೂ ರಿವೀಲ್ ಮಾಡಿಲ್ಲ. ಹೌದು, ಅಸಲಿಗೆ ಇಬ್ಬರನ್ನೂ ಒಟ್ಟಿಗೆ ನೋಡುವ ಬಯಕೆ ಅಭಿಮಾನಿಗಳಲ್ಲಿತ್ತು. ಟೀಸರ್ ಇದೇ ಬಯಕೆಗೆ ತಣ್ಣೀರು ಎರಚಿತ್ತು. ಹಾಗಾಗಿ, ಹಾಡಿನಲ್ಲಾದ್ರೂ ಒಟ್ಟಿಗೆ ದರ್ಶನವಾಗುತ್ತೆ ಅಂತ ಅಭಿಮಾನಿಗಳು ಅನ್ಕೊಂಡಿದ್ದರು. ಬಟ್ ಇದಕ್ಕೂ ಪ್ರೇಮ್ ಕಲ್ಲು ಹಾಕಿದ್ರು. ಇದಕ್ಕೆ ಕಾರಣವೇನು.. ಹೀಗೊಂದು ಪ್ರಶ್ನೆಗುತ್ತರವಾಗಿ ಗಾಂಧಿನಗರ ಹೇಳೋದು ಅದೇ ಪ್ರೇಮ್ ಐಡಿಯಾ & ಗಿಮಿಕ್ ಅಂತ. ಹೌದು,ಇಂದು ಬಿಡುಗಡೆಯಾದ ಹಾಡಿನಲ್ಲೂ ಶಿವಣ್ಣ ಹಾಗೂ ಸುದೀಪ ಜೊತೆಯಾಗಿ ಇರುವ ಒಂದೇ ಒಂದು ಫ್ರೇಮ್ ರಿವೀಲ್ ಮಾಡದ ಪ್ರೇಮ್, ಕೊನೆವರೆಗೂ ಇದೇ ಗೌಪ್ಯತೆಯನ್ನ ಕಾಪಾಡಿಕೊಳ್ಳಲಿದ್ದಾರೆ. ಈ ಮೂಲಕ ಅಭಿಮಾನಿಗಳ ನಿರೀಕ್ಷೆ ಹಾಗೂ ಚಿತ್ರದ ಮೇಲಿನ ನಿರೀಕ್ಷೆಯನ್ನ ಇಮ್ಮಡಿಗೊಳಿಸುವ ಇರಾದೆ ಪ್ರೇಮ್‌ಗೆ ಇದ್ದಹಾಗಿದೆ. ಹಾಗಾಗೇ, ಚಕ್ರವರ್ತಿದ್ವಯರನ್ನ ಒಟ್ಟಿಗೆ ದರ್್ಶನ ಮಾಡಿಸದ ಪ್ರೇಮ್, ಈ ಮೂಲಕ.. ಪ್ರಚಾರ ಮಾಡುವದ್ರಲ್ಲಿ ನನ್ನ ಮೀರಿಸುವರು ಯಾರಿಲ್ಲ ಅನ್ನೋದನ್ನ ಸಾರಿ ಸಾರಿ ಹೇಳ್ತಿದ್ದಾರೆ.

LEAVE A REPLY

Please enter your comment!
Please enter your name here