ಪ್ರಚಾರದ ನಡುವೆ ದರ್ಶನ್ಗೆ ಶಾಕಿಂಗ್ ನ್ಯೂಸ್ – ಬಹುಕಾಲದ ಸ್ನೇಹಿತ ಕಲಾವಿದ ಅನಿಲ್ ಸಾವು

0
90

ದರ್ಶನ್ ಕನ್ನಡ ಚಿತ್ರರಂಗದ ಸಾರಥಿ. ಸಿನಿಮಾಗಳಾಚೆಯೂ ಸುದ್ದಿಯಾಗುವ.. ಸದ್ದು ಮಾಡುವ.. ದರ್ಶನ್, ಸ್ನೇಹಿತರ ಪಾಲಿನ ಕಲ್ಪವೃಕ್ಷನೂ ಹೌದು. ಕಷ್ಟದಲ್ಲಿರುವ ಸ್ನೇಹಿತರಿಗೆ ಸದಾ ಮಿಡಿಯುವ.. ಚಿತ್ರರಂಗದಲ್ಲಿನ ಸ್ನೇಹಿತರಿಗೆ ಸದಾ ನೆರವಾಗುವ ದರ್ಶನ್ ಸದ್ಯ ಚುನಾವಣಾ ರಣರಂಗದಲ್ಲಿದ್ದಾರೆ. ಮದರ್ ಇಂಡಿಯಾ ಸುಮಲತಾ ಪರ ಅಬ್ಬರದ ಪ್ರಚಾರನೂ ಮಾಡುತ್ತಿದ್ದಾರೆ. ಇದ್ರ ನಡುವೆ.. ದರ್ಶನ್‌ಗೆ ಆಘಾತವಾಗುವಂಥ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಹೌದು, ಅತ್ತ.. ದರ್ಶನ್ ಚುನಾವಣೆ ಅಂಥ ಮಂಡ್ಯದಲ್ಲಿ ಬ್ಯುಸಿಯಾಗಿರುವ ಹೊತ್ತಿನಲ್ಲೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಪಾಠಿ, ರಂಗಭೂಮಿಯ ನಟನೆಯನ್ನೇ ಕಸುವಾಗಿಸಿಕೊಂಡು, ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾಗಲೂ ರಂಗದ ನಂಟು ಮರೆಯದ ರಂಗಪ್ರೇಮಿ ಅನಿಲ್ ಕುಮಾರ್ ಉಸಿರು ಚೆಲ್ಲಿದ್ದಾರೆ. ಸಾವು ಬದುಕಿನ ಹೋರಾಟದ ನಡುವೆ ಸೋತು ಬಾರದ ಲೋಕಕ್ಕೆ ಎದ್ದು ಹೋಗಿದ್ದಾರೆ. ಅನಿಲ್, ಕಳೆದ ಹದಿನೈದು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಮಾತೂ ಆಡಲಾಗದ ಸ್ಥಿತಿಯಲ್ಲಿದ್ದ ಅನಿಲ್ ಚಿಕೆತ್ಸೆಯ ವೆಚ್ಚ ಸೇರಿದಂತೆ ಯಾವುದನ್ನು ಭರಿಸಲಾಗದ ಸ್ಥಿತಿ ತಲುಪಿದ್ದರು. ಯಾವುದಕ್ಕೂ ಸ್ಪಂದಿಸದಂಥಾ ಸ್ಥಿತಿ ತಲುಪಿಕೊಂಡಿದ್ದರು. ಇದ್ರ ನಡುವೆ ಚಿಕಿತ್ಸೆಗಾಗಿ ದಿನಕ್ಕೆ ನಲವತ್ತೈದು ಸಾವಿರಕ್ಕೂ ಅಧಿಕ ಹಣದ ಭರಿಸಲೇಬೇಕಾದ ಅನಿವಾರ್ಯತೆ, ಅನಿಲ್ ಹಾಗೂ ಕುಟುಂಬ ವರ್ಗವನ್ನ ಇನ್ನಷ್ಟು ಹೈರಾಣಾಗಿಸಿತ್ತು.

ಹೀಗಿದ್ದೂ ಸ್ವಾಭಿಮಾನಿ ಅನಿಲ್ ಚಿತ್ರರಂಗದಿಂದಾಗಲಿ, ಕಿರುತೆರೆಯಿಂದಾಗಲಿ, ಅಥ್ವಾ ದರ್ಶನ್‌ರಿಂದ ಯಾವ್ದೇ ಸಹಾಯವನ್ನ ನಿರೀಕ್ಷೆ ಮಾಡ್ದೇ, ತಮ್ಮ ಹೋರಾಟವನ್ನೂ ಮುಂದುವರೆಸಿದ್ದರು. ಇನ್ನೂ ಅದ್ಯಾವಾಗ ಅನಿಲ್ ಕುಮಾರ್ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿರುವ ಸುದ್ದಿ, ಎಲ್ಲರ ಕಿವಿಗೆ ತಲುಪಿತೋ.. ಆಗ, ದರ್ಶನ್ ಸಹಾಯ ಹಸ್ತ ಚಾಚುವ ಮಾತುಗಳನ್ನಾಡಿದ್ದರು. ಆಡಿದ ಮಾತಿನಂತೆ ದರ್ಶನ್ ಸಹಾಯನೂ ಮಾಡಿದ್ದರು. ಹೀಗೆ ದರ್ಶನ್ ಸೇರಿದಂತೆ ಕೆಲವರು ಮಾಡಿದ ಸಹಾಯದಿಂದ ಅನಿಲ್ ಅವರಿಗೆ ಸರಾಗವಾಗಿಯೇ ಚಿಕಿತ್ಸೆಯೂ ನಡೆಯುತ್ತಿತ್ತು. ಆದರೆ ನಿನ್ನೆ ಪರಿಸ್ಥಿತಿ ಕೈ ಮೀರಿ ಅನಿಲ್ ಸಾವನ್ನಪ್ಪಿದ್ದಾರೆ. ನಟರಾಜ್ ಹೊನ್ನವಳ್ಳಿ ಸೇರಿದಂತೆ ಅನೇಕ ರಂಗತಜ್ಞರ ನಾಟಕಗಳಲ್ಲಿ ಅಭಿನಯಿಸಿದ್ದ ಅನಿಲ್, ಪೃಥ್ವಿ, ಕರಿಯ ಕಣ್ ಬಿಟ್ಟ, ಪಲ್ಲಟ ಸೇರಿದಂತೆ ಹತ್ತಾರು ಸಿನಿಮಾಗಳಲ್ಲೂ ನಟಿಸಿದ್ದರು. ಮೂಡಲಮನೆ ಧಾರಾವಾಹಿ ಇವ್ರಿಗೆ ಸಾಕಷ್ಟು ಜನಪ್ರಿಯತೆಯನ್ನೂ ತಂದು ಕೊಟ್ಟಿತ್ತು. ಇಂಥಾ ಅನಿಲ್ ಇದೀಗ.. ಅನೇಕರ ಹರಕೆ ಹಾಗೂ ಹಾರೈಕೆಗಳನ್ನೂ ಮೀರಿ ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಇನ್ನು, ಚುನಾವಣಾ ಬಿಸಿಯಲ್ಲಿರುವ ದರ್ಶನ್‌ಗೆ ತನ್ನ ಸಹಪಾಠಿ ಗೆಳೆಯನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೇ ಇರೋದು ಇಲ್ಲಿನ ಇನ್ನೊಂದು ದುಖದ ಸಂಗತಿ.

LEAVE A REPLY

Please enter your comment!
Please enter your name here