ಪೈಲ್ವಾನ್ ಅಡ್ಡದಲ್ಲಿ ಪ್ರೀತಿಯ ಗಾಳಿ – ರೊಮ್ಯಾಂಟಿಕ್ ದೃಶ್ಯದಲ್ಲಿ ಅಭಿನಯ ಚಕ್ರವರ್ತಿ

0
381

ಸುದೀಪ.. ಸಾಲು ಸಾಲು ಸಿನಿಮಾಗಳ ಸರದಾರ. ಒಂದಾದ ಮೇಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ತಿರುವ ಸುದೀಪ, ಇತ್ತೀಚಿಗಷ್ಟೇ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಕೋಟಿಗೊಬ್ಬನ ಅವತಾರವೆತ್ತಿದ್ದಾರೆ. ಹೀಗಿರುವಾಗ್ಲೇ.. ಇದೀಗ, ಪೈಲ್ವಾನ್ ತನ್ನ ಪ್ರೇಯಸಿಯೊಂದಿಗೆ ಮೋಡಿ ಮಾಡಲು ಶುರುವಿಟ್ಟುಕೊಂಡಿದ್ದಾನೆ. ಎಷ್ಟರ ಮಟ್ಟಿಗೆ ಅಂದ್ರೆ ಪೈಲ್ವಾನ್ ಜೋಡಿ ಮೇಲೆ ಯಾರ ಕಣ್ಣು ಬೀಳದಿರಲಿ ಅನ್ನುವ ಅಭಿಮಾನಿಗಳು ಪ್ರಾರ್ಥನೆ ಮಾಡುವಷ್ಟು.ಹೌದು, ಪೈಲ್ವಾನ್.. ಅಂಗಳದಿಂದ ಫೋಟೊ ಒಂದು ತೂರಿ ಬಂದಿದೆ. ಅದು, ರೊಮ್ಯಾಂಟಿಕ್ & ಕಲರ್‌ಫುಲ್ ಫೋಟೋ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲೀಗ ಯದ್ವಾ ತದ್ವಾ ವೈರಲ್ ಆಗ್ತಿದೆ. ಸುದೀಪ ತೋಳಿನಲ್ಲಿ ಆಕಾಂಕ್ಷಾ ಬಂಧಿಯಾಗಿರುವ ಪರಿ, ಅಭಿಮಾನಿಗಳಿಗೆ ಹುಚ್ಚಿಡಿಸುತ್ತಿದೆ. ಇನ್ನೂ ವೈರಲ್ ಆಗಿರುವ ಇದೇ ಫೋಟೋ, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕೂತುಹಲವನ್ನೂ ಇಮ್ಮಡಿಗೊಳಿಸಿದೆ. ಪೈಲ್ವಾನ್ ಪ್ರಪಂಚದಲ್ಲಿ ರೊಮ್ಯಾಂಟಿಕ್ ಹಾಗೂ ಕಲರ್‌ಫುಲ್ ಹಾಡನ್ನ ನಿರೀಕ್ಷಿಸಬಹುದು ಅನ್ನುವ ಸುಳಿವನ್ನೂ ಇದೇ ಫೋಟೋ ಇದೀಗ ನೀಡಿದೆ. ಪೈಲ್ವಾನ್ ಮೇಲೇ ಖುದ್ದು ನಿರ್ದೇಶಕ ಕೃಷ್ಣಗೂ ವಿಪರೀತ ನಿರೀಕ್ಷೆಗಳಿವೆ. ಪ್ರತಿಯೊಂದು ಅಂಶಗಳಿಗೂ ಅದ್ಧೂರಿತನದ ಸ್ಫರ್ಶವನ್ನ ನೀಡಲಾಗಿದೆ. ಇನ್ನು.. ಗೆಟಪ್ಪು, ಮ್ಯಾನರಿಸಂ, ಡೈಲಾಗ್ ಡಿಲಿವರಿ, ಹೀಗೆ ಎಲ್ಲ ವಿಚಾರದಲ್ಲೂ ಹಿಂದೆಂದೂ ನೀವ್ ನೋಡಿರದ ಸುದೀಪ ಇಲ್ಲಿ ಕಾಣಸಿಗಲಿದ್ದಾರೆ. ದೊಡ್ಡ ತಾರಾಗಣ, ಅದ್ಧೂರಿ ಲೊಕೇಶನ್‌ಗಳೂ ಚಿತ್ರದ ಕಳೆಯನ್ನೂ ಹೆಚ್ಚಿಸುತ್ತವೆ ಅನ್ನುವ ವಿಶ್ವಾಸದ ಮಾತುಗಳನ್ನಾಡುವ ಕೃಷ್ಣಗೆ, ಪೈಲ್ವಾನ್‌ಗೆ ಆರಂಭದಿಂದ್ಲೂ ಸಿಗ್ತಿರುವ ಪ್ರೀತಿ ಮೂಕವಿಸ್ಮಿತರನ್ನಾಗಿಸಿದೆ.

LEAVE A REPLY

Please enter your comment!
Please enter your name here