ಪುಶ್ಪಕ ವಿಮಾನ‌ ಸೃಷ್ಟಿಕರ್ತನ ಎರಡನೇ ಸಿನಿಮಾ – ಟೈಟಲ್ನಿಂದ ಕೂತೂಹಲ ಸೃಷ್ಟಿಸಿದ ಕಂಟ್ರಿಮೇಡ್ ಚಾರಿ

0
296

ಪುಷ್ಪಕ ವಿಮಾನ, ರಮೇಶ್ ಅರವಿಂದ್ ಅಭಿನಯದಲ್ಲಿ ಬಂದಿದ್ದ ಸಿನಿಮಾ. ಅಪ್ಪ ಹಾಗೂ ಮಗಳ ಬಾಂಧವ್ಯದ ಸುತ್ತ ಸುತ್ತಿದ್ದ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಎಸ್ ರವೀಂದ್ರನಾಥ್, ಇದೀಗ.. ಚಿಕ್ಕ ಬ್ರೇಕ್ ಬಳಿಕ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. ಅದು, ಕಂಟ್ರಿಮೇಡ್ ಚಾರಿ ಜೊತೆ. ಯಸ್, ಕಂಟ್ರಿಮೇಡ್ ಚಾರಿ. ಎಸ್, ರವೀಂದ್ರನಾಥ್ ನಿರ್ದೇಶನದ ಮುಂದಿನ ಸಿನಿಮಾ. ಸದ್ಯ, ಕ್ಯಾಚಿ ಟೈಟಲ್‌ನ್ನೊತ್ತ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ರವಿಂದ್ರನಾಥ್ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ. ಇದ್ರ ನಡುವೆ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಆಗಿರುವ ಚಿತ್ರದ ನಾಯಕ ಯಾರು ಅನ್ನೋ ಕೂತುಹಲ ಗಾಂಧಿನಗರದಲ್ಲಿ ಗರಿಗೇದರಿದೆ. ಇನ್ನು ನುರಿತ ತಾಂತ್ರಿಕವರ್ಗ ಚಿತ್ರಕ್ಕೆ ಕೆಲಸ ಮಾಡ್ತಿದೆ. ನೂರೊಂದು ನೆನಪು ಖ್ಯಾತಿಯ ಎಸ್.ಕೆ. ರಾವ್ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಛಾಯಾಗ್ರಹಣ ಮಾಡ್ತಿದ್ದಾರೆ. ಟಚ್ ಬೇರ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಸುಶೀಲ್ ಸತ್ಯರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಸದ್ಯ ಫಸ್ಟ್ ಲುಕ್‌ನಿಂದ ಸದ್ದು ಮಾಡ್ತಿರುವ ಕಂಟ್ರಿಮೇಡ್ ಚಾರಿಯ ಮುಹೂರ್ತ ಸದ್ಯದಲ್ಲೇ ನೇರವೇರಲಿದೆ.

LEAVE A REPLY

Please enter your comment!
Please enter your name here