ಪುಟ್ಟಗೌರಿ ಮಹೇಶನ ಮದುವೆ ಭಾವನರಾವ್ ಜೊತೆ – ಗಾಂಧಿನಗರದಲ್ಲಿ ಗಾಂಧಿಗಿರಿಯದ್ದೆ ನ್ಯೂಸ್

0
115

ಪುಟ್ಟಗೌರಿ ರಕ್ಷಿತ್‌-ಭಾವನಾರಾವ್‌ ಮದುವೆ..!!
ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷಿತ್‌ ಮತ್ತು ನಟಿ ಭಾವನಾರಾವ್‌ ಮದುವೆಯಾಗಿದ್ದಾರೆ. ಇವ್ರ ಮದುವೆಗೆ ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್, ಜೋಗಿ ಪ್ರೇಮ್‌, ರಂಗಾಯಣ ರಘು, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ. ಅಂದ್ಹಾಗೆ, ಇದು ರಿಯಲ್ಲಾಗಿ ನಡೆದಿರೋ ಮದುವೆಯಲ್ಲ. ಜೋಗಿ ಪ್ರೇಮ್‌ ಅಭಿನಯಿಸ್ತಿರೋ ರಘು ಹಾಸನ್‌ ನಿರ್ದೇಶ್ತಿರೋ ಗಾಂಧಿಗಿರಿ ಚಿತ್ರದ ಮದುವೆ ಸನ್ನಿವೇಷದ ಚಿತ್ರೀಕರಣದಲ್ಲಿ ಕ್ಲಿಕ್ಕಿಸಿರೋ ಫೋಟೋ. ನಟಿ ರಾಗಿಣಿ ದ್ವಿವೇದಿ, ಹಾಗೇ ಸುಮ್ಮನೇ ಸೆಟ್‌ನಲ್ಲಿ ತೆಗೆದುಕೊಂಡ ಫೋಟೋಗಳ ಝಲಕ್‌, ಈಗ ಎಲ್ಲೆಡೆ ವೈರಲ್‌ ಆಗ್ತಿವೆ. ರಾಗಿಣಿ ತೆಗೆದಿರೋ ಈ ಫೋಟೋಗಳಲ್ಲಿ ಭಾವನಾ ರಕ್ಷಿತ್‌ ಜೋಡಿಯ ಮದುವೆ ಸನ್ನಿವೇಷ ಹೈಲೈಟ್‌ ಆಗ್ತಿದೆ. ಅಂದ್ಹಾಗೆ ಸದ್ಯ ಗಾಂಧಿಗಿರಿ ಚಿತ್ರದ ಶೂಟಿಂಗ್‌ ಮೈಸೂರಿನಲ್ಲಿ ಭರದಿಂದ ನಡೀತಿದೆ.
ಗಾಂಧಿಗಿರಿ ಸೆಟ್‌ನಲ್ಲಿ ರಾಗಿಣಿ ‘ಸೆಲ್ಫಿ’ ತರ್ಲೆ ..!!!!


ಮೈಸೂರಿನಲ್ಲಿ ಜೋಗಿ ಪ್ರೇಮ್‌, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್‌ ಅಭಿನಯದ, ರಘು ಹಾಸನ್‌ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್‌ ಭರದಿಂದ ಸಾಗ್ತಿದೆ. ವಿಶೇಷ ಅಂದ್ರೆ, ಇವತ್ತು ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್‌ ಮತ್ತು ಭಾವನಾರಾವ್‌ಗೆ ಮದುವೆಯಾಗ್ತಾರೆ. ಈ ಸನ್ನಿವೇಷದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜೋಗಿ ಪ್ರೇಮ್‌, ರಂಗಾಯಣ ರಘು, ಕುರಿಪ್ರತಾಪ್‌, ಅರುಂದತ್ತಿನಾಗ್‌, ಭಾವನಾರಾವ್‌, ರಕ್ಷಿತ್‌ಎಲ್ಲಾರೊಟ್ಟಿಗೂ ರಾಗಿಣಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಜೊತೆಗೆ ಒಂದಷ್ಟು ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ. ಗಾಂಧಿಗಿರಿ ಚಿತ್ರದ ಶೂಟಿಂಗ್‌ ಸ್ಪಾಟ್‌ನ ಈ ಫೋಟೋಗಳೀಗ ಎಲ್ಲೆಲ್ಲೂ ವೈರಲ್‌ ಆಗಿವೆ.

LEAVE A REPLY

Please enter your comment!
Please enter your name here