ಪವರ್ ಸ್ಟಾರ್‌ ನಿರ್ಮಾಣದ ಮೂರನೇ ಸಿನಿಮಾ – ಇದಕ್ಕೆ ಹಂಬಲ್ ನೋಗರಾಜ್ ನಾಯಕ

0
32

ಪುನೀತ್ ರಾಜ್ ಕುಮಾರ್. ಕನ್ನಡದ ಪವರ್ ಸ್ಟಾರ್. ಆಕ್ಟರ್, ಸಿಂಗರ್ ಆಗಿರುವ ಪುನೀತ್, ಇದೀಗ ಪ್ರೊಡ್ಯೂಸರ್ ಕೂಡಾ ಹೌದು. ಆಗ್ಲೇ ತಮ್ಮ ಪಿ.ಆರ್.ಕೆ ಸಂಸ್ಥೆ ಅಡಿ ಮಾಯಾಬಜಾರ್ & ಕವಲು ದಾರಿ ಸಿನಿಮಾಗೆ ಬಂಡವಾಳ ಹೂಡಿರುವ ಪುನೀತ್, ಇದೀಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪವರ್‌ಫುಲ್ ಬ್ಯಾನರ್‌ನಿಂದ ನಿರ್ಮಾಣಗೊಳ್ಳಲಿರುುವ ನಯಾ ಸಿನಿಮಾದ ಮುಹೂರ್ತ, ಇತ್ತೀಚಿಗೆ ನಡೆದಿದೆ. ಇನ್ನೂ ಹೆಸರಿಡದ ಚಿತ್ರಕ್ಕೆ ನಾಗಾಭರಣ ಅವ್ರ ಪುತ್ರ ಪನ್ನಗಾ ಭರಣ ಸೂತ್ರಧಾರ. ಇನ್ನೂ ಹಂಬಲ್ ಪೊಲಿಟಿಶಿಯನ್ ನೋಗರಾಜ್ ಡ್ಯಾನಿ ಚಿತ್ರದ ನಾಯಕ ನಟ. ಇನ್ನುಳಿದ ಡಿಟೈಲ್ಸ್ ಇನ್ನೂ ರಿವೀಲಾಗಬೇಕಷ್ಟೇ. ಒಟ್ನಲ್ಲಿ ಹೊಸತನಕ್ಕೆ.. ಹೊಸ ಪ್ರತಿಭೆಗಳಿಗೆ.. ಸದಾ ಮನ್ನಣೆಯನ್ನ, ಈ ಮೂಲಕ ನೀಡ್ತಿರುವ ಪುನೀತ್, ಸಿನಿಮಾ ಕನಸೊತ್ತಿರುವ ಪ್ರತಿಭಾವಂತರ ಪಾಲಿಗೆ ಸದ್ಯದ ಆಶಾಕಿರಣನೂ ಹೌದು ಅಂದ್ರೆ ಅದು ಅತಿಶಯೋಕ್ತಿಯಲ್ಲ.

LEAVE A REPLY

Please enter your comment!
Please enter your name here