ಪವರ್ ಬಜಾರ್ನಲ್ಲಿ ಮೊಟ್ಟೆ ಸ್ಟಾರ್ ಮಿಂಚಿಂಗ್ – ಸದ್ದು ಮಾಡ್ತಾ ಇದೆ ಮೊಟ್ಟೆಯ ಎರಡನೇ ಸಿನಿಮಾ ಟೀಸರ್

0
1195

ಪವರ್ ಸ್ಟಾರ್ ಫಿಲಂ ಫ್ಯಾಕ್ಟರಿ ಇಂದ ಬರ್ತಾ ಇರೋ ಸಿನಿಮಾಗಳು ಫಸ್ಟ್ ಲುಕ್ನಲ್ಲೆ ಸಾಕಷ್ಟು ಕುತೂಹಲ ಶೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ … ಹೊಸ ಪ್ರತಿಭೆ ರಾಧಾ ಕೃಷ್ಣ ನಿರ್ದೇಶನದ ಮಾಯಾ ಬಜಾರ್ 2016 ತನ್ನ ಮೊದಲ ಟೈಟಲ್ ಟೀಸರ್ ಇಂದ ಯೌಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡ್ತಾಯಿದೆ …

ಪ್ರಕಾಶ್ ರಾಜ್ , ಅಚ್ಯುತ್ ಕುಮಾರ್ , ವಸಿಷ್ಠ ಸಿಂಹ , ಸುಧಾರಾಣಿ ಹೀಗೆ ಸಾಕಷ್ಟು ದೊಡ್ಡ ಕಲಾವಿದರ ನಡುವೆ ಮೊನ್ನೆ ಮೊನ್ನೆ ತಾನೇ ತನ್ನ ಮೊಟ್ಟೆ ಕಥೆಯ ಮೂಲಕ ಜನಮನ ಗೆದ್ದ ರಾಜ್ ಬಿ ಶೆಟ್ಟಿ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ …ಇದು ಇವ್ರ್ ಎರಡನೇ ಸಿನಿಮಾ …

 

ಪಿ ಆರ್ ಕೆ ಪ್ರೋಡ್ಯೂಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮಾಯಾ ಬಜಾರ್ ೨೦೧೬ ನಿರ್ಮಾಣವಾಗುತ್ತಿದೆ… ಅಶ್ವಿನಿ ಪುನೀತ್ ರಾಜಕುಮಾರ್ ಹಾಗು ಎಂ ಗೋವಿಂದ ಇದರ ನಿರ್ಮಾಪಕರು . ಈ ಹಿಂದೆ ಶುರುವಾದ ಕಾವಲುದಾರಿ ಪುನೀತ್ ಪ್ರೊಡಕ್ಷನ್ ನ ಮೊದಲ ಸಿನಿಮಾ . ಗೋದಿ ಬಣ್ಣ ಸಾದಾರಣ ಮೈಕಟ್ಟು ಚಿತ್ರದ ನಿರ್ದೇಶಕರಾದ ಹೇಮಂತ್ ಹಾಗು ಆಪರೇಷನ್ ಅಲಮೇಲುಮ್ಮ ಚಿತ್ರದ ನಟ ರಿಷಿ ಕಾಂಬಿನೇಶನ್ ನ ಸಿನಿಮಾ ಈ ಕಾವಲುದಾರಿ …

ಈ ಎರಡು ಸಿನಿಮಾಗಳು ತನ್ನ ಮೊದಲ ಲುಕ್ ಇಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಹುಟ್ಟಿ ಹಾಕಿವೆ … ಇತ್ತೀಚಿಗೆ ಕನ್ನಡ ಪ್ರೇಕ್ಷಕರು ಸಹ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುತ್ತಿರುವುದರಿಂದ ಈ ರೀತಿಯ ಹೊಸ ಪ್ರಯೋಗದ ಸಿನಿಮಾಗಳು ಹೊರಬರುತ್ತಿವೆ . ಅದರಲ್ಲೂ ಪುನೀತ್ ರಾಜಕುಮಾರ್ ಅಂತಹ ದೊಡ್ಡ ಸ್ಟಾರ್ ಗಳು ಇದನ್ನು ನಿರ್ಮಾಣ ಮಾಡಿ ಹೊಸಬರಿಗೆ ಪ್ರೋತ್ಸಾಹ ಕೊಡುತ್ತಿರುವುದು ಇನ್ನು ಹೆಮ್ಮೆಯ ವಿಷಯ …

ನಿಮಗೆ ಇದು ಇಷ್ಟವಾದಲ್ಲಿ ಪ್ರಚಾರ facebook ಹಾಗು website like ಮಾಡಿ share ಮಾಡಿ.. youtube ನಲ್ಲಿ ಪ್ರಚಾರ ಮೀಡಿಯಾ subscribe ಮಾಡಿ …

LEAVE A REPLY

Please enter your comment!
Please enter your name here