ಪಡ್ಡೆಹುಲಿ.. ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ. ಮೊನ್ನೆಯಷ್ಟೇ ನಾ ತುಂಬಾ ಹೊಸಬ ಬಾಸು ಅಂದಿದ್ದ ಶ್ರೇಯಸ್ಗೆ, ಕನ್ನಡ ಚಿತ್ರರಂಗ ಬೆನ್ನು ತಟ್ಟಿತ್ತು. ನಾಲ್ಕೊಳ್ಳೇ ಮಾತುಗಳನ್ನ ಹಾಡಿನ ಬಗ್ಗೆಯಾಡಿತ್ತು. ಇನ್ನೂ ವಿಷ್ಣು ಅಭಿಮಾನಿಗಳೂ ಹಾಡನ್ನ ಮೆಚ್ಚಿಕೊಂಡಿದ್ದರು. ಇದೆಲ್ಲದ್ರ ಫಲವೆನ್ನುವಂತೆ ಶ್ರೇಯಸ್ ಅಭಿನಯದ ಪಡ್ಡೆಹುಲಿ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ಇದೀಗ, ಇದೇ ಸದ್ದು ಮಾಡಿದ ಹಾಡಿನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದಾರೆ. ಹಾಡನ್ನ ಮೆಚ್ಚಿಕೊಂಡಿದ್ದಾರೆ. ಫಿದಾ ಆಗಿದ್ದಾರೆ. ನಾ ತುಂಬಾ ಹೊಸಬ ಬಾಸು ಹಾಡನ್ನು ಎಷ್ಟು ಪ್ರೀತಿಯಿಂದ ನಿರ್ಮಾಣ ಮಾಡಿದ್ದಾರೆಂಬುದು ಯಾರಿಗಾದರೂ ತಿಳಿಯುತ್ತೆ. ಚಿತ್ರರಂಗಕ್ಕೆ ಹತ್ತಾರು ಜನ ಬರ್ತಾರೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡು ಬರುವವರು ವಿರಳ. ಶ್ರೇಯಸ್ ಅಂಥಾ ತಯಾರಿ ಮಾಡಿಕೊಂಡೇ ಬಂದಿರೋದು ಮೆಚ್ಚಿಕೊಳ್ಳೋ ವಿಚಾರ. ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಒಳಿತಾಗಲಿ. ಪಡ್ಡೆಹುಲಿ ಸಿನಿಮಾ ಭರ್ಜರಿ ಸಕ್ಸಸ್ ಕಾಣಲಿ ಅನ್ನೋ ಹಾರೈಕೆಯನ್ನೂ ದರ್ಶನ್ ಮಾಡಿದ್ದಾರೆ