ಪಡ್ಡೆಹುಲಿ ಮೂಲಕ ದಾಖಲೆ‌ ಬರೆದ ರಾಜಹುಲಿ ನಿರ್ದೇಶಕ – ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಡಬ್ಬಿಂಗ್ ರೈಟ್ಸ್

0
248

ತೇಜಸ್ವಿನಿ ಎಂಟರ್ಪ್ರೈಸಸ್ ಬ್ಯಾನರ್ ನಡಿಯಲ್ಲಿ , ಎಮ್ ರಮೇಶ್ ರೆಡ್ಡಿ ನಿರ್ಮಾಣದಲ್ಲಿ, ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ” ಪಡ್ಡೆಹುಲಿ “ಚಿತ್ರ ಇದೇ ಏಪ್ರಿಲ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಟ್ರೈಲರ್ ಹಾಗೂ ಹಾಡುಗಳಿಂದ ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಿದ್ದ ಪಡ್ಡೆಹುಲಿ ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಿದೆ, ಅದೆ ಚಿತ್ರದ ಡಬ್ಬಿಂಗ್ ರೈಟ್ಸ್. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ರವರನ್ನು ರಾಜಹುಲಿ ಸಿನಿಮಾ ಮೂಲಕ ಸ್ಟಾರ್  ಮಾಡಿದ್ದ ನಿರ್ದೇಶನ ಗುರುದೇಶಪಾಂಡೆ ಈಗ ಪಡ್ಡೆಹುಲಿ ಮೂಲಕ ಹೊಸ ಹುಡುಗ ಶ್ರೇಯಸ್ ರವರನ್ನು‌ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ನೀಡುವ ಮೂನ್ಸೂಚನೆ ನೀಡಿದ್ದಾರೆ.

ಯಂಗ್ ಟೈಗರ್ ಶ್ರೇಯಸ್ ರವರ ಚೊಚ್ಚಲ ಸಿನಿಮಾ ಇದಾಗಿದ್ದು ,ಸಿನಿಮಂದಿಯ ಕುತೂಹಲ ಗರಿಗೆದರಿದೆ, ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ‌ ಕೆ ಮಂಜುರವರ ಮಗ ಶ್ರೇಯಸ್ ಚಿತ್ರದಲ್ಲಿ ಡ್ಯಾನ್ಸ್ ಹಾಗೂ ಫೈಟ್ಸ್ ಗಳಿಂದ ಬಾಲಿವುಡ್ ಮಂದಿಯ ಗಮನ ಸೆಳೆದು ಬರೋಬ್ಬರಿ 2.36  ಕೋಟಿ ಮೊತ್ತಕ್ಕೆ ಹಿಂದಿಯ ಡಬ್ಬಿಂಗ್ ರೈಟ್ಸ್ ಕೊಂಡುಕೊಂಡಿದ್ದಾರ. ಇದರಿಂದ ಚಿತ್ರರ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಿದ್ದು , ಸ್ಯಾಂಡಲ್ವುಡ್ ಮಂದಿ ಸಿನಿಮಾ ನೋಡಲು ಕಾತರರಾಗಿದ್ದಾರೆ.

LEAVE A REPLY

Please enter your comment!
Please enter your name here