ಪಂಚತಂತ್ರದ ಅಡ್ಡದಲ್ಲಿ ಈಗ ಶುರುವಾಗಿದೆ ಹೊಸ ವರ್ಷದ ಸಂಭ್ರಮ – ಇದು ಪಡ್ಡೆಗಳಿಗಾಗಿ ಭಟ್ಟರ ಸ್ಪೆಶಲ್ ಹಾಡು

0
40

ನ್ಯೂ ಇಯರ್ ಮುಗೀತು. ಬಟ್, ಪಂಚತಂತ್ರದ ಪ್ರಪಂಚದಲ್ಲಿ ಇನ್ನೂ ಹೊಸವರ್ಷದ ಗುಂಗು ಹಾಗೇ ಇದೆ. ಇದಕ್ಕೆ ಸಾಕ್ಷಿನೇ ಬಿಡುಗಡೆಗೊಂಡಿರುವ ನಯಾ ಸಾಂಗ್ . ಹೌದು.. ಇದು, ಪಂಚತಂತ್ರದ ಹೊಸ ಹಾಡು. ಹಾಡಿನ ಸಾಲುಗಳೂ ಕೇಳ್ತಿದ್ದರೆ.. ಇದು ಭಟ್ರ ಸಾಹಿತ್ಯ ಕೃಷಿ ಅಂಥ ಥಟ್ಟಂಥ ಅನಿಸ್ದೇ ಇರದು. ಪಕ್ಕಾ ಟಿಫಿಕಲ್ ಸ್ಟೈಲಿನಲ್ಲಿ.. ಕಲೋಕಿಯಲ್ ಪದಪುಂಜಗಳನ್ನ ಪೋಣಿಸಿ ಭಟ್ರು ಇದೀಗ ಯಬಸ್ ಅಂದಿದ್ದಾರೆ. ಅಲ್ಲಿಗೆ ಮತ್ತೊಮ್ಮೆ ಪಡ್ಡೆಗಳ ಪ್ರೀತಿಗೆ ಪಾತ್ರವಾಗಿದ್ದಾರೆ ಯೋಗರಾಜ್ ಭಟ್ರು.ಯವ್ವನ ಅನ್ನುವ ಭಗವಂತ ಕೊಟ್ಟಿರುವ ಆಫರ್‌ನ್ನ, ಇಲ್ಲಿ ಕಂಪ್ಲೀಟಾಗಿ ಗ್ರ್ಯಾಬ್ ಮಾಡಿಕೊಂಡಿರುವ ವಿಹಾನ್, ಇಪ್ಪತ್ತನಾಲ್ಕು ಘಂಟೆ ಸಾಕಾಗಲ್ಲ ಅಂಥನೇ ಸಖತ್ ಸ್ಟೇಪ್ ಹಾಕಿದ್ದಾರೆ. ಇನ್ನೂ ಗಡಿಯಾರದ ಮುಳ್ಳಿಗೆ ಮರ್ಯಾದೆ ಇಲ್ಲದಿರುವ ಕಥನ ವಿಜಯ್ ಪ್ರಕಾಶ್ ದನಿಯಲ್ಲಿ ಕೇಳೋದು ಇನ್ನೂ ಚೆಂದ. ಕೊಬ್ಬು ತುಂಬಿರುವ ಜವಾನಿಗೆ ವಿ.ಹರಿಕೃಷ್ಣ ಸಂಗೀತ ಮತ್ತೊಂದಷ್ಟು ಕೊಬ್ಬನ್ನ ಸೇರಿಸುತ್ತೆ. ಅಂದ ಹಾಗೇ ಸೈಕಲ್ ಗ್ಯಾಪಿನಲ್ಲಿ ಪ್ರೀತಿ ಮಾಡುವ ಇಂದಿನ ಪ್ರೇಮಿಗಳಾಗಿ ವಿಹಾನ್, ಸೋನಲ್, ಇಲ್ಲಿ ಹಿರಿಯರಿಗೆ ಫಿಲಾಸಫಿಯನ್ನ ಹೇಳಿದ್ದಾರೆ.

ಸಿಂಪಲ್ಲಾಗ್ ಹೇಳಬೇಕಂದ್ರೆ ಹಿರಿಯರು ಹಾಗೂ ಕಿರಿಯರ ನಡುವಿನ ಜನರೇಶನ್ ಗ್ಯಾಪಿನ ಕಥೆ, ಹಾಡಿನ ಮೂಲಕ ಹೇಳುವ ಪ್ರಯತ್ನವನ್ನ ಇಲ್ಲಿ ಭಟ್ರು ಮಾಡಿದ್ದಾರೆ. ಪುಟಗೋಸಿ ಸೂರ್ಯನ ಹಿಡಿಯಲು ಹೊರಟ ಯುವಸಮೂಹಕ್ಕೆ, ಇಮ್ರಾನ್ ಸರ್ದಾರಿಯಾ.. ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಇನ್ನೂ ಹೊಸ್ಮನೆ ಮೂರ್ತಿ.. ಕಲಾ ನಿರ್ದೇಶನದ ಚಳಕದಿಂದ ಗ್ಯಾರೇಜ್ ಸೆಟ್ ಸೃಷ್ಠಿಯಾಗಿದೆ. ಇನ್ನೂ ಇಷ್ಟವಾಗುವ, ಆಲ್ ರೆಡಿ ಕನ್ನಡ ಕಲಾಭಿಮಾನಿಗಳೂ ಗುನುಗಲು ಶುರುಮಾಡಿರುವ ಹಾಡು, ಸೆರೆ ಹಿಡಿಯಲು.. ಭಟ್ರ ಬಳಗ ತುಂಬಾನೇ ಶ್ರಮ ಪಟ್ಟಿದೆ. ಇದು, ಹಾಡಿನ ಮೇಕಿಂಗ್ ಅನಾವರಣ ಮಾಡಿದೆ.ಯಸ್, ಇದು.. ಪಂಚತಂತ್ರ ಹಾಡಿನ ಮೇಕಿಂಗ್ ಝಲಕ್. ಹಾಡಿಗಾಗಿ ಸಿಕ್ಕಾಪಟ್ಟೆ ಸರ್ಕಸ್ ಇಲ್ಲಿ ಮಾಡಲಾಗಿದೆ. ಪ್ರತಿಯೊಂದು ಸಾಲುಗಳಿಗೂ ತಲೆ ಕೆಡಿಸಿಕೊಂಡು ನೃತ್ಯ ಸಂಯೋಜನೆ ಮಾಡಲಾಗಿದೆ.

ಇನ್ನೂ ಛಾಯಾಗ್ರಾಹಕ ಸುಜ್ಞಾನ ಹಾಡಿಗೊಂದು ಜೀವ ಕೊಡಲು, ಸುಂದರವಾಗಿ ಸೆರೆ ಹಿಡಿಯಲು ಕ್ಯಾಮರಾವನ್ನ ಅನೇಕ ಕಡೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡೇ ತಿರುಗಿದ್ದಾರೆ. ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಚಿತ್ರದ ನಿರ್ಮಾಪಕರು. ರೊಮ್ಯಾಂಟಿಕ್ ಹಾಡಿಗೆ ಬೇಕಿರುವ ಅಗತ್ಯತೆಗಳನ್ನೆಲ್ಲಾ ಪೂರೈಸಿರುವ ನಿರ್ಮಾಪಕರು, ಚಿತ್ರದ ಕ್ವಾಲಿಟಿ ವಿಚಾರದಲ್ಲೂ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಅದೇನೆ ಇರ್ಲಿ್ ಸದ್ಯ ಇಪ್ಪತ್ತನಾಲ್ಕು ಘಂಟೆ ಸಾಕಾಗಲ್ಲ ಅನ್ನುತ್ತಾನೇ, ಪಂಚತಂತ್ರ ಮತ್ತೆ ಸದ್ದು ಮಾಡಲು ಶುರುವಿಟ್ಟುಕೊಂಡಿದೆ. ನಿರೀಕ್ಷೆಗಳೂ ಹೆಚ್ಚಾಗುವಂತೆ ಮಾಡಿದೆ. ಬಿಡುಗಡೆಯಾದ ಎರಡು ಹಾಡುಗಳೂ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾದ ಬೆನ್ನಲ್ಲೇ, ಮೂರನೇ ಹಾಡು ಹೇಗಿರಬಹುದು ಅನ್ನುವ ಕೂತುಹಲನೂ ಗರಿಗೇದರಿದೆ. ಇದೇ ಕೂತುಹಲಕ್ಕೆ ಸದ್ಯದಲ್ಲೇ ಬ್ರೇಕ್ ಕೂಡಾ ಬೀಳಲಿದೆ. ಅಲ್ಲಿವರೆಗೂ ನೀವ್ ಹಾಡು ಕೇಳ್ತಾ.. ಯಬಸ್ ಅಂಥ ಒಮ್ಮೆ ಅಂದು ಬಿಡಿ.

LEAVE A REPLY

Please enter your comment!
Please enter your name here