ನೋಟ್ ಬ್ಯಾನ್ ಆದಾಗ ಖುಷಿ ಪಟ್ಟವರು ಇಂದು ವಾಟ್ ಎ ಟ್ರ್ಯಾಜಿಡಿ ಅಂತಿದ್ದಾರೆ

0
93

 ಮಟಾಶ್‌, ನೋಟ್‌ ಬ್ಯಾನ್‌ ಆದಾಗ, ಆದ್ಮೇಲೆ ಆದ ನೈಜಘಟನೆಗಳನ್ನ ಸ್ಪೂರ್ತಿಗೊಂಡು ಮಾಡಿರೋ ಔಟ್‌ ಅಂಡ್ ಔಟ್ ಎಂಟ್ರಟೈನರ್‌. ಈಗಾಗ್ಲೇ ಟೀಸರ್‌ ಮತ್ತು ಚವಳಿಕಾಯಿ, ನಮೋ ವೆಂಕಟೇಶಾ ಹಾಡುಗಳಿಂದ ಸಿನಿಪ್ರಿಯರ ಗಮನ ಸೆಳೆದಿರೋ ಸಿನಿಮಾ. ಈ ಸಿನಿಮಾದ ಮತ್ತೊಂದು ವೆರೈಟಿ ವಿಚಾರವೊಂದು ಆಚೆ ಬಂದಿದೆ. ಅದೇ ವಾಟ್‌ ಎ ಟ್ರ್ಯಾಜಿಡಿ. ವಾಟ್‌ ಎ ಟ್ರ್ಯಾಜಿಡಿ, ಮಟಾಶ್‌ ಚಿತ್ರದ ಮತ್ತೊಂದು ಹಾಡು, ಸಮರ್ಥ್‌ ನರಸಿಂಹರಾಜು, ಐಶ್ವರ್ಯ ಸಿಂಧೋಗಿ ನಡುವೆ ಮೂಡಿ ಬಂದಿರೋ ವಿಶಿಷ್ಠ ಲವ್‌ ಸಾಂಗ್‌. ನಿರ್ದೇಶಕ ಎಸ್‌.ಡಿ ಅರವಿಂದ್‌ ಸಂಗೀತ ಸಂಯೋಜನೆ ಕವಿರಾಜ್‌ ಸಾಹಿತ್ಯ ಬರೆದಿರೋ ಹಾಡು, ಈ ಹಾಡನ್ನ ವಿಜಯ್‌ ಪ್ರಕಾಶ್‌ ಮತ್ತು ಉಷಾ ಪ್ರಕಾಶ್‌ ಹಾಡಿದ್ದಾರೆ. ಕೇಳೋದಕ್ಕೆ ಸಖತ್‌ ಮಜವಾಗಿರೋ ಈ ಹಾಡು ನೋಡೋದಕ್ಕೂ ಅಷ್ಟೇ ಮಜಭೂತಾಗಿ ಮೂಡಿಬಂದಿರುವಂತಿದೆ. ಯಾಕೆಂದ್ರೆ ಲಿರಿಕಲ್‌ ವಿಡಿಯೋನೇ ಅಷ್ಟು ಚೆನ್ನಾಗಿದೆ.

ಅವಿನಾಶ್‌ ನರಸಿಂಹರಾಜು ಅವ್ರ ಆರ್ಟ್‌ ವರ್ಕ್‌, ಕಲೈ ಮಾಸ್ಟರ್‌ ಅವ್ರ ನೃತ್ಯ ನಿರ್ದೇಶನವಿರೋ ಈ ಹಾಡು ಕೂಡ ಮಟಾಶ್‌ ಚಿತ್ರದ ಹೈಲೈಟ್‌ಗಳಲ್ಲೊಂದಾಗೋ ಹಾಗಿದೆ.
ಮಟಾಶ್‌ ಚಿತ್ರವನ್ನ ಗೋಲ್ಸ್‌ ಅಂಡ್‌ ಡ್ರೀಮ್ಸ್‌, ಕ್ರೋಮ್ಸ್‌ ಅಂಡ್‌ ಬಲ್ಮಾನಿ ಬ್ಯಾನರ್‌ನಡಿಯಲ್ಲಿ ಸತೀಶ್‌ ಪಾತಕ್‌, ಗಿರೀಶ್‌ ಪಟೇಲ್‌, ಚಂದ್ರಶೇಖರ್‌ ಮನೂರ್‌, ಎಸ್‌.ಡಿ ಅರವಿಂದ್‌, ಆನಂದ್‌ ಚಿಟ್ಟವಾಡಗಿ, ರೂಪಾ ಬಡಿಗೇರ್‌, ಉಮೇಶ್‌ ಸುರೇಬಾನ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರವಿಂದ್‌ ಅವರೊಟ್ಟಿಗೆ ಬಹುತೇಕ ಹೊಸ ಪ್ರತಿಭೆಗಳೇ ಕೂಡಿ ಮಾಡಿರೋ ಮಟಾಶ್‌ ಎಲ್ಲಾ ಌಂಗಲ್‌ನಿಂದ್ಲೂ ಪಾಸಿಟೀವ್‌ ಆಗಿ ಕಾಣ್ತಿದೆ. ಜೊತೆಗೆ ಸೈಲೆಂಟಾಗಿ ಬಂದು ತುಂಬಾ ದೊಡ್ಡದಾಗಿ ಸೌಂಡ್‌ ಮಾಡೋ ಭರವಸೆಯನ್ನೂ ಉದ್ಯಮದಲ್ಲಿ ಹುಟ್ಟಿಸ್ತಿದೆ. ಅಂದ್ಹಾಗೆ ಈ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ.

LEAVE A REPLY

Please enter your comment!
Please enter your name here