ನಿಮ್ಮನ್ನು ಸೀಟಿನ ತುದಿಯಲ್ಲಿ ಕುರಿಸ್ತಾನೆ ಈ ಸ್ಟ್ರೈಕರ್ – ಮಿಸ್ಸ್ ಮಾಡದೇ ನೋಡಿ ಈ ಸಸ್ಪೆನ್ಸ್ ಥ್ರೀಲ್ಲರ್

0
318

ಸ್ಟ್ರೈಕರ್ ಸಿನಿಮಾ ಹೆಸರೇ ಹೇಳುವಂತೆ ಇಲ್ಲೊಂದು ಕೌತುಕವಿದೆ. ಆಕರ್ಷಣೆ ಇದೆ. ಇಂಟ್ರೆಸ್ಟಿಂಗ್ ಎನ್ನಿಸೋ ಫೀಲಿಂಗ್ ಇದೆ. ನಿಜ ಸಿನಿಮಾದಲ್ಲೂ ಅ ಫೀಲಿಂಗ್ ಜೀವಂತವಾಗಿದೆ. ಕಳೆದ ಶುಕ್ರವಾರ ರಿಲೀಸ್ ಆಗಿರೋ ಸ್ಟ್ರೈಕರ್ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ಕನ್ನಡ ಸಿನಿಪ್ರಿಯರ ಮನತಣಿಸ್ತಿದೆ. ವಿಶಿಷ್ಠವಾಗಿ ಸೆಳಿತಿದೆ. ಚಿತ್ರದ ನಾಯಕ ತನ್ನ ಸ್ನೇಹಿತನನ್ನ ಕನಸಿನಲ್ಲಿ ಕೊಂದು, ರಿಯಲ್ಲಾಗಿ ಕೊಂದಿರುವೆ ಅಂತ ಅಂದುಕೊಂಡಿರ್ತಾನೆ. ಅದು ಅವನ ಖಾಯಿಲೆ, ಆದ್ರೆ ಅದು ನಿಜವಲ್ಲ, ಯಾರು ಹೀರೋ ಫ್ರೆಂಡ್ನ ಕೊಲೆ ಮಾಡೋದು, ಯಾಕೆ ಮಾಡಿರ್ತಾರೆ, ಹೇಗೆ ಮಾಡಿರ್ತಾರೆ, ಅವ್ರನ್ನ ಹೇಗೆ ನಾಯಕ ಹುಡುಕ್ತಾನೆ, ತಾನೊಬ್ಬ ಕೊಲೆಗಾರ ಅಂತ ಅಂದುಕೊಂಡು ದೂರ ಮಾಡಿಕೊಂಡ ಪ್ರೀತಿಯನ್ನ ಹೇಗೆ ವಾಪಸ್ ಪಡೀತಾನೆ ಅನ್ನೋ ಕಥಾಹಂದರದ ಸಿನಿಮಾ ಸ್ಟ್ರೈಕರ್ ಈ ಸಿನಿಮಾದ ಕಥೆ ಅಷ್ಟೇ ಟೈಟ್ ಆದ ನಿರೂಪಣೆ ಸ್ಟ್ರೈಕರ್ ಸಿನಿಮಾದ ಚಹರೆಯನ್ನೇ ಬದಲಿಸಿದೆ.

ಪ್ರವೀಣ್ ತೇಜ್, ಭಜರಂಗಿ ಲೋಕಿ, ಶಿಲ್ಪಾ ಮಂಜುನಾಥ್ ಬರೀ ಎಕ್ಸ್ ಪ್ರೆಶನ್ ನಲ್ಲೇ ಅಟ್ರ್ಯಾಕ್ಟ್ ಮಾಡ್ತಾರೆ. ಸೈಕೋಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಆಗಿರೋ ಸಿನಿಮಾದಲ್ಲಿ ಸಿನಿಮಾದ ಸ್ಕ್ರೀನ್ಪ್ಲೇನಲ್ಲಿ ನಿರ್ದೇಶಕ ಜಾಣ್ಮೆ ತೋರಿಸಿದ್ದಾರೆ, ನಟನೆಯಲ್ಲಿ ಸಿನಿಮಾದ ಎಲ್ಲಾ ಪಾತ್ರಧಾರಿಗಳು ಇಂಪ್ರೆಸೀವ್ ಮಾಡ್ತಾರೆ. ಚಿತ್ರದಲ್ಲಿ ಧರ್ಮಣ್ಣ ಭಿನ್ನವಾಗಿ ಹೈಲೈಟ್ ಆಗ್ತಾರೆ. ಅಶೋಕ್ ಚಿಕ್ಕ ಪಾತ್ರದಲ್ಲಿದ್ರು, ಸಿನಿಮಾದ ಕಥೆಯ ಸೂತ್ರಧಾರಿಯಾಗಿ ಕಾಣಸಿಗ್ತಾರೆ.
ಸ್ಟ್ರೈಕರ್ ಪ್ಲಸ್ ಪಾಯಿಂಟ್ಸ್ ಅಂದ್ರೆ, ಕಥೆ, ಬಿಜೆ ಭರತ್ ಸಂಗೀತ, ಕಲಾವಿದ್ರ ಪರ್ಫಾರ್ಮೆನ್ಸ್ ರಾಕೇಶ್ ಕ್ಯಾಮೆರಾ ವರ್ಕ್, ಇದೆಲ್ಲಾದ್ರ ಜೊತೆಗೆ ನಿರ್ದೇಶಕ ಪವನ್ ತ್ರಿವಿಕ್ರಮ್ ಅವ್ರ ಕೈಚಳಕ ಇಂಟ್ರೆಸ್ಟಿಂಗ್ ಆಗಿ ಕಾಣುತ್ತೆ. ಭಜರಂಗಿ ಲೋಕಿ ಅವ್ರ ಪಾತ್ರ ನೆಗೆಟೀವ್ ಅಲ್ಲದೇ ಹೋದ್ರು, ಹೀರೋ ಪಾತ್ರದಷ್ಟೇ ಗಟ್ಟಿಯಾಗಿ ನಿಲ್ಲುಸುವ ಪ್ರಯತ್ನ ಚೆನ್ನಾಗಿದೆ. ಇನ್ನೂ ನಾಯಕಿ ಶಿಲ್ಪಾ ಮಂಜುನಾಥ್ರ ಪಾತ್ರ ಕಾಡುತ್ತೆ.

ಕನ್ನಡದಲ್ಲಿ ಸದ್ಯ ಟ್ರೆಂಡ್ ಆಗ್ತಾ ಇರೋ ಥ್ರಿಲ್ಲರ್ ಸಿನಿಮಾಗಳಲ್ಲಿ ಸ್ಟ್ರೈಕರ್ ಕೂಡ ಒಂದು. ಸಿನಿಮಾದ ಒನ್ ಲೈನ್ ಆದ್ಭುತವಾಗಿ ಆಯ್ಕೆ ಮಾಡಿಕೊಂಡಿರೋ ನಿರ್ದೇಶಕರು ಸುಸೂತ್ರವನಾಗಿ ತಮ್ಮ ಕೆಲವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕುತೂಹಲ ಭರಿತವಾಗಿ ಸಾಗೋ ಈ ಕಥೆಯಲ್ಲಿ ಇಂಟ್ರುವಲ್ ಬ್ಲಾಕ್ ನಲ್ಲಿ ಸಿಗೋ ಟ್ವಿಸ್ಟ್ ಇಂಟ್ರೆಸ್ಟಿಂಗ್ ಎನ್ನಿಸುತ್ತೆ. ಸ್ಟ್ರೈಕರ್ ಸೂಪರ್ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್ ಶಹಬಾಸ್.  ಸ್ಟ್ರೈಕರ್ ಎಲ್ಲಾ ಆಂಗಲ್ ನಿಂದ್ಲೂ ಒಂದೊಳ್ಳೆ ಸಿನಿಮಾ. ಚಿಂತನೆಗತ್ತಿರೋ ಅಂಶಗಳಿರೋ, ರಂಜನೆಯ ಮಜಾ ಕೊಡೋ ಸಸ್ಪೆನ್ಸ್ ಇರೋ ಈ ಸಿನಿಮಾ ಎಲ್ಲಾ ವರ್ಗವನ್ನೂ ಸೆಳೆಯುತ್ತಿದೆ. ಮೊದಲ ಮೂರು ದಿನಗಳಲ್ಲಿ ಈ ಚಿತ್ರ ಹುಟ್ಟಿಸಿರೋ ಮೌತ್ ಟಾಕ್ ಸಕ್ಸಸ್ ಮೆಟ್ಟಿಲನ ಏರೋ ಸೂಚನೆ ಕೊಟ್ಟಿದೆ. ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ಅಂಗಳದ ಸೆಲೆಬ್ರಿಟೀಸ್ ಕೂಡ ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತ ಪಡಿಸ್ತಿದ್ದಾರೆ.

LEAVE A REPLY

Please enter your comment!
Please enter your name here