ನಾವು ಯಾವ ಸ್ಟಾರ್‌ಗಳು ಅಲ್ಲ ಕಣ್ರೀ. ನಾವು ಅಂಬಿ ಮನೆಯ ಮಕ್ಕಳು – ಚಾಲೆಂಜಿಂಗ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಮಾತು

0
254

’ನಾವು ಯಾವ ಸ್ಟಾರ್‌ಗಳು ಅಲ್ಲ ಕಣ್ರೀ. ನಾವು ಅಂಬಿ ಮನೆಯ ಮಕ್ಕಳು.’ ಇದು ಚಾಲೆಂಜಿಂಗ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಸದ್ಯದ ಮನಸ್ಸಿನ ಮಾತುಗಳು. ಇವುಗಳೇ ಇಂದು ಸುಮಲತಾ ಅಂಬರೀಷ್ ನಡೆಸಿದ ಸುದ್ಧಿಗೋಷ್ಟಿಯ ಮೈನ್ ಹೆಡ್‌ಲೈನ್ಸ್ ಅಂದ್ರು ತಪ್ಪಾಗಲ್ಲ ನೋಡಿ. ಇಷ್ಟುದಿನ ಸುಮಲತಾ ಕೊಟ್ಟಿದ್ದ ಹೇಳಿಕೆಗೆ ಈಗ ಆನೆಬಲ ಬಂದಿದೆ. ಯಾವುದೇ ರಾಜಕೀಯ ಅನುಭವ ಹಾಗೂ ಪೊಲಿಟಿಕಲ್ ಪ್ಲಾನ್ ಇಲ್ಲದೇ ಮಂಡ್ಯ ರಾಜಕೀಯವಲಯಕ್ಕೆ ಎಂಟ್ರಿ ಕೊಟ್ಟ ಸುಮಲತಾರನ್ನ ಸ್ಯಾಂಡಲ್‌ವುಡ್ ಬಿಗಿದಪ್ಪಿಕೊಂಡಿದೆ. ಸುಮಲತಾರ ಎಡ,ಬಲದಲ್ಲಿ ಕೂತ ದರ್ಶನ್ ಹಾಗೂ ಯಶ್ ಪ್ರತ್ಯಕ್ಷವಾಗಿ ಇಂದು ಅಂಬರೀಷ್ ಕುಟುಂಬಕ್ಕೆ ಸಾಥ್ ಕೊಟ್ಟಿದಾರೆ. ಇದು ಪ್ಲಾನಿಂಗ್ ಪಾಲಿಟಿಕ್ಸ್ ಅಲ್ಲ. ದಿಸ್ ಇಸ್ ಫೈಟ್ ಫಾರ್ ಮಂಡ್ಯ ಪೀಪಲ್ ಅಂತ ಘಂಟಘೋಷವಾಗಿ ಅನೌನ್ಸ್ ಮಾಡಿಬಿಟ್ರು ಸುಮಕ್ಕಾ. ಈ ಹಿಂದೆಯೂ ಸುಮಲತಾರ ಬೆನ್ನಹಿಂದೆ ಸ್ಯಾಂಡಲ್‌ವುಡ್ ನಿಂತು ಸರ್ಪೋಟ್ ಮಾಡೋದು ಬಹುತೇಕ ಖಚಿತವಾಗಿತ್ತು. ಯಾಕಂದ್ರೆ ಸಕ್ಕರೆನಾಡಿನ ಮಂಡ್ಯದ ಗಂಡು ರೆಬೆಲ್‌ಸ್ಟಾರ್ ಅಂಬರೀಷ್ ಒಂದೇ ಕಾಲ್‌ಗೆ ಒಟ್ಟಾಗಿ ಹಾಜರಾಗುತ್ತಿದ್ದ ಸಿನಿಮಾಮಂದಿ ಇಂತಹ ಕ್ರಿಟಿಕಲ್ ಟೈಮ್‌ನಲ್ಲಿ ಯಾವ ಕಾರಣಕ್ಕೂ ಸುಮಲತಾರ ಕೈ ಬಿಡಲ್ಲ ಅಂತಾನೇ ಫಿಕ್ಸ್ ಆಗಿತ್ತು. ತಮ್ಮ ಸ್ಟಾರ್‌ಗಿರಿಯ ಹಣೆಪಟ್ಟಿಯನ್ನ ಪಕ್ಕಕಿಟ್ಟು ಅಂಬಿ ಕುಟುಂಬದ ಮೇಲಿನ ಪ್ರೀತಿಯಿಂದ ಸುಮಲತಾರಿಗೆ ಬೆಂಬಲ ಸೂಚಿಸಲು ಬಂದ ದರ್ಶನ್ ಹಾಗೂ ಯಶ್ ಈಗ ಸುಮಲತಾರ ಪ್ರೈಮರಿ ವೆಪೆನ್.

ಇದರ ಗುರಿ ನೇರವಾಗಿ ತಲುಪೋದು ಮಾತ್ರ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಅನ್ನೋದು ನಮ್ಮ ಕಣ್ಣ ಮುಂದಿರುವ ಕ್ಲಿಯರ್ ಟ್ರೂಥ್. ಮಂಡ್ಯದಲ್ಲಿ ಸ್ವತ್ರಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧಾರಿಸಿರುವ ಸುಮಲತಾಗೆ ರಾಜಕೀಯ ಪ್ರವೇಶ ರೆಡ್‌ಕಾರ್ಪೆಟ್‌ನಂತೆ ಈಸಿಯಾಗಿರಲಿಲ್ಲ. ಕಾಂಗ್ರೆಸ್ ಟಿಕೆಟ್ ಆಕ್ಷಾಂಕ್ಷಿಯಾಗಿದ್ದ ಸುಮಲತಾಗೆ ಅಲ್ಲಿಂದ ಸರಿಯಾದ ರೆಸ್ಪಾನ್ಸ್ ಬರಲೇಇಲ್ಲ. ಇತ್ತ ಬಿಜೆಪಿಯ ಬುಲಾವ್‌ಗೂ ಸುಮಲತಾ ಓಕೆ ಎನ್ನಲಿಲ್ಲ. ಏನೂ ಮಾಡಿದ್ರೂ ರೆಬೆಲ್ ಆಗೇ ಮಾಡಬೇಕು ಎನ್ನುವ ಅಂಬಿ ಲೈಫ್ ಪಾಲಿಸಿಯಂತೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆ ಮಾಡುವ ಹಿಂದೆ ಇದ್ದ ನಂಬಿಕೆಯೇ ಬೇರೆ. ಈಗ ಆ ನಂಬಿಕೆಗೆ ದರ್ಶನ್ ಹಾಗೂ ಯಶ್ ಆಧಾರಸ್ತಂಭಗಳಾಗಿ ನಿಂತಿದಾರೆ. ಸುಮಲತಾ ಮಂಡ್ಯದಲ್ಲಿ ಗೆಲ್ತಾರೋ ಬಿಡ್ತಾರೋ .ಆದರೆ ಈಗ ಅಲ್‌ರೆಡಿ ಸುಮಲತಾ ಗೆಲುವಿನ ದಾರಿಗೆ ಮೊದಲಹೆಜ್ಜೆ ಇಟ್ಟಿರೋದಂತೂ ಸುಳ್ಳಲ್ಲ. ಸಿನಿಮಾಲೋಕದಲ್ಲಿ ಅಂಬರೀಷ್ ಗೆಳೆಯರ ಬಳಗ ಆಕಾಶದಂತೆ ವಿಸ್ತಾರವಾಗಿರೋದು ಸುಮಲತಾಗೆ ಒದಗಿಬಂದ ಪ್ಲಸ್‌ಪಾಯಿಂಟ್ ಅಂತಾನೇ ಹೇಳಬಹುದು. ಇದು ಕೇವಲ ನಮ್ಮ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ಚಿತ್ರರಂಗದಲ್ಲಿ ಅಂಬಿ ಸಂಪಾದಿಸಿರೋ ಫ್ರೆಂಡ್ಸ್ ಲಿಸ್ಟ್ ತುಂಬಾ ದೊಡ್ಡದಾಗಿದೆ. ರಜನಿಕಾಂತ್, ಕಮಲ್‌ಹಾಸನ್, ಚಿರಂಜೀವಿ, ಅಮಿತಾಭ್ ಬಚ್ಚನ್, ಮೋಹನ್‌ಲಾಲ್ ಸೇರಿದಂತೆ ಚಿತ್ರರಂಗದ ಘಟನುಘಟಿಗಳು ಸುಮಲತಾರ ಪರವಾಗಿ ತಮ್ಮ ದನಿಗೂಡಿಸುವ ಚಾನ್ಸ್ ಹೆಚ್ಚಾಗಿದೆ. ನೇರವಾಗಿ ಸುಮಲತಾ ಮತಪ್ರಚಾರಕ್ಕೆ ಬಾರದೇ ಹೋದ್ರು ಸುಮಲತಾರ ಕುರಿತು ಈ ದೊಡ್ಡ ಸ್ಟಾರ್‌ನಟರು ಪಾಸಿಟಿವ್ ಆಗಿ ಹೇಳಿಕೆ ಕೊಡುವ ಮೂಲಕ ಬೆಂಬಲ ಸೂಚಿಸಿದ್ರೆ ಸುಮಲತಾಗೆ ಸಹಜವಾಗಿಯೇ ಧೈರ್ಯ ಹೆಚ್ಚುತ್ತೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಚಾರ.

ಇನ್ನು ದರ್ಶನ್ ಹಾಗೂ ಯಶ್ ಅಬ್ಬರದ ಮುಂದೆ ನಿಖಿಲ್ ಆಟ ನಡೆಯುತ್ತಾ ಎನ್ನುವುದು ಈಗ ಜೆಡಿಎಸ್‌ಗೆ ನಡುಕ ಹುಟ್ಟಿಸಿಬಿಟ್ಟಿದೆ. ಇದೇ ಕಾರಣಕೊಸ್ಕರವೇ ಈ ಹಿಂದೆ ದರ್ಶನ್ ಹಾಗೂ ಯಶ್ ಸುಮಲತಾರ ಪರ ಪ್ರಚಾರ ಮಾಡಿದ್ರೆ ನಾವು ಗೋಬ್ಯಾಕ್ ಚಳುವಳಿ ಮಾಡಬೇಕಾಗುತ್ತೆ ಅಂತ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಬೆದರಿಸಿಬಿಟ್ಟಿದ್ರು. ಆದರೆ ಸ್ಟೋರಿಯಲ್ಲಿ ಈಗ ಎದುರಾಗಿರೋ ಟ್ವೀಸ್ಟ್ ಜೆಡಿಎಸ್ ಪಕ್ಷದ ನಿದ್ರೆ ಕೆಡಿಸಿಬಿಟ್ಟಿದೆ. ಸುಮಲತಾರ ವಿರುದ್ಧ ನಾನು ಪಕ್ಕಾ ಗೆದ್ದೆಗೆಲ್ತೀನಿ ಎಂದಿದ್ದ ನಿಖಿಲ್‌ಗೆ ಈಗ ಹೊಸ ಭಯ ಶುರುವಾಗಿದೆ. ಇಬ್ಬರು ಸ್ಟಾರ್‌ಗಳ ಇನ್‌ವಾಲ್ವ್ಮೆಂಟ್ ನಿಖಿಲ್-ಸುಮಲತಾ ವಾರ್‌ಗೆ ಹೊಸ ತಿರುವು ಕೊಡುವ ಮಾತನ್ನಾಂತೂ ತಳ್ಳಿಹಾಕೋಹಾಗಿಲ್ಲ.ಇನ್ನು ಇದೇ 20 ರಂದು ನಾಮಿನೇಷನ್ ಫೈಲ್ ಮಾಡಲು ನಿರ್ಧರಿಸಿರುವ ಸುಮಲತಾಗೆ ದರ್ಶನ್ ಹಾಗೂ ಯಶ್ ಪ್ರತಿಕ್ಷಣದಲ್ಲೂ ತಮ್ಮ ಅಭಯಹಸ್ತ ತೋರಿಸಲಿದ್ದಾರೆ. ನಾನು ರಾಜಕರಣಿ ಅಲ್ಲ. ನನಗೆ ರಾಜಕೀಯ ಆಳರಿವು ಗೊತ್ತಿಲ್ಲ ಎನ್ನುತ್ತಲೇ ಅಂಬೇಗಾಲಿಟ್ಟು ಬಂದ ಸುಮಲತಾರಿಗೆ ಸ್ಯಾಂಡಲ್‌ವುಡ್ ಈ ರೀತಿ ಪರಿಪೂರ್ಣ ಬೆಂಬಲ ಕೊಡುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ. ಹಾಗೇ ನೋಡಿದ್ರೆ ಮೂರು ಪಕ್ಷಗಳಲ್ಲಿ ಅಂಬಿ ಸ್ನೇಹಿತರಿದ್ದಾರೆ. ಪಕ್ಷವನ್ನ ಮರೆತು ಅಭ್ಯರ್ಥಿಯನ್ನ ಗಮನದಲ್ಲಿಟ್ಟು ವೋಟ್ ಮಾಡಿದ್ರೆ ಸುಮಲತಾರ ಗೆಲುವು ಖಚಿತ ಅನ್ನೋದು ಅಂಬಿ ಅಭಿಮಾನಿಗಳ ಓಪಿನಿಯನ್. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಮಣ್ಣಿನ ಮಗ ಎನ್ನುವ ಇಮೇಜ್ ಜೊತೆ ಏನೋ ಮ್ಯಾಜಿಕ್ ಮಾಡ್ತೀನಿ ಅಂತ ಗಟ್ಟಿ ಮನಸ್ಸು ಮಾಡಿದಾರೆ. ಸುಮಲತಾ ವರ್ಸಸ್ ನಿಖಿಲ್ ಪೊಲಿಟಿಕಲ್ ವಾರ್‌ನಲ್ಲಿ ಯಾರು ಗೆದ್ದು ಬೀಗ್ತಾರೆ? ಯಾರನ್ನ ಮತದಾರ ಪ್ರಭು ಸೋಲಿಸಿ ಮನೆಗೆ ಕಳುಹಿಸ್ತಾನೆ? ಎನ್ನುವ ಬಿಗ್ ಕ್ಯೂರ್ಯ್ಸಿಟಿಗೆ ಸದ್ಯಕಂತೂ ನಿಖರವಾದ ಉತ್ತರವಿಲ್ಲ. ಅಂತೂ ಇಂದಿನ ಬೆಳವಣಿಗೆ ನೋಡಿದ್ರೆ ಅಂಬಿ ಹೆಸರೇ ಸುಮಲತಾರ ಶ್ರೀರಕ್ಷೆ ಎನ್ನುವುದು ಅಲಿಖಿತ ಸತ್ಯ.

LEAVE A REPLY

Please enter your comment!
Please enter your name here