ನಟ‌ ನಾನಿ‌ ವಿರುದ್ದ ಕಾಸ್ಟಿಂಗ್ ಕೌಚ್ ಅರೋಪ ಮಾಡಿದ ತೆಲುಗು ನಟಿ

0
308

ಕಾಸ್ಟಿಂಗ್ ಕೌಚ್ ಎಂಬ ಕರ್ಮಕಾಂಡದ ಎಪಿಸೋಡುಗಳಿಗೆ ದಿನಕ್ಕೊಂದು ಟ್ವಿಸ್ಟ್ ಕೊಡ್ತಿರುವ ಶ್ರೀ ರೆಡ್ಡಿ, ಮತ್ತೊಮ್ಮೆ.. ನ್ಯಾಚುರಲ್ ಸ್ಟಾರ್ ನಾನಿ ಬಗ್ಗೆ ಮಾತನಾಡಿದ್ದಾರೆ. ಕಿಡಿ ಕಾರಿದ್ದಾರೆ. ನಾನಿಯ ಮರ್ಯಾದೆಯನ್ನ ಹರಾಜು ಹಾಕಿದ್ದಾರೆ. ಯಸ್, ಶ್ರೀ ರೆಡ್ಡಿ ಇತ್ತೀಚಿಗೆ ಹೇಳಿರುವಂತೆ ನಾನಿ ಒಬ್ಬ ಕಾಮುಕ. ಒಂದು ದಿನಪೂರ್ತಿ ಹುಡುಗಿಯೊಬ್ಬಳಿಗೆ ನರಕ ದರ್ಶನ ಮಾಡಿಸಿದ ಹೀನ ಮನಸ್ಥಿತಿಯ ನಟ.

ಅಷ್ಟೇ ಅಲ್ಲ ತನಗೂ ಫ್ಯಾಮಿಲಿ ಇದೆ ಅನ್ನೋದನ್ನೇ ಮರೆತಿರುವ ನಟ. ಅಂದ ಹಾಗೇ, ನಾನಿ ವಿರುದ್ಧ ಶ್ರೀ ರೆಡ್ಡಿ.. ಕೋಪ ಮಾಡಿಕೊಳ್ಳಲು, ಆಕ್ರೋಶವನ್ನ ವ್ಯಕ್ತಪಡಿಸಲು.. ಸದ್ಯ ವೇದಿಕೆ ಕಲ್ಪಿಸಿದ್ದು ಅಮೋಲಿ ಅನ್ನುವ ಕಿರುಚಿತ್ರ. ಹೌದು, ಅಮೋಲಿ.. ಬಹುಭಾಷೆಯಲ್ಲಿ ನಿರ್ಮಾಣವಾಗಿರುವ ಕಿರುಚಿತ್ರ. ಇದಕ್ಕೆ ತೆಲುಗುದಲ್ಲಿ ನಾನಿ ಧ್ವನಿ ನೀಡಿದ್ದಾರೆ. ಇದೇ ಶ್ರೀ ರೆಡ್ಡಿಯ ಸಿಟ್ಟಿಗೂ ಕಾರಣ. ಒಬ್ಬ ಕಾಮುಕನಿಂದ ಧ್ವನಿ ಯಾಕೆ ಕೊಡಿಸಿದ್ದೀರಾ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಶ್ರೀ ರೆಡ್ಡಿ, ನಾನಿ ಮುಖವಾಡ ಬಯಲು ಮಾಡ್ತೇನೆ ಅನ್ನುವ ಶಪಥವನ್ನೂ ಇದೇ ವೇಳೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here