ಮನೆ ಶಿಫ್ಟ್ ಮಾಡಲಿದ್ದಾರಂತೆ ಧ್ರುವಾ ಸರ್ಜಾ – ದೊಡ್ಮನೆ ಏರಿಯಕ್ಕೆ ಆ್ಯಕ್ಷನ್ ಪ್ರೀನ್ಸ್ ಎಂಟ್ರಿ

0
81

ಧ್ರುವಾ ಸರ್ಜಾ.. ಚಂದನವನದ ಬಹದ್ಧೂರ್. ಮೊನ್ನೆಯಷ್ಟೇ ಬದುಕಿಗೆ ಪ್ರೇರಣೆಯಾಗಿದ್ದ ಪ್ರೇರಣಾ ಜೊತೆ ಮದುವೆಯಾಗುವ ಮನಸು ಮಾಡಿದ್ದ ಧ್ರುವಾ, ಇದೀಗ ಶಿವ ಶಿವ ಅನ್ನುವ ಸುದ್ದಿಯನ್ನ ಅಭಿಮಾನಿಗಳಿಗೆ ನೀಡಿದ್ದಾರೆ. ಹೌದು, ಧ್ರುವಾ ಸರ್ಜಾ ಮನೆಯನ್ನ ಶಿಫ್ಟ್ ಮಾಡಲಿದ್ದಾರೆ. ಹೀಗೊಂದು ಸುದ್ದಿ ಧ್ರುವಾ ಕೆ.ಆರ್. ರಸ್ತೆಯಲ್ಲಿರುವ ನಿವಾಸದಿಂದ ಹೊರ ಬಿದ್ದಿದೆ.ಯಸ್, ಧ್ರುವಾ ಸರ್ಜಾ ಮನೆ ಛೇಂಜ್ ಮಾಡುವ ಮನಸು ಮಾಡಿದ್ದಾರೆ. ಇದಕ್ಕೆ ಕಾರಣ ಒಂದು ಫ್ರೈವೆಸಿ ಸಮಸ್ಯೆ, ಇನ್ನೊಂದಡೆ ವಾಸ್ತು ದೋಶ. ಹೌದು. ನಿಮಗೆ ಗೊತ್ತಿರಲಿ ಧ್ರುವಾಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ. ಮದುವೆಯಾದ ಬಳಿಕ ಇದೇ ಅಭಿಮಾನಿ ಬಳಗದಿಂದ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಗಳಿದಾವೆ. ಹಾಗಾಗೇ, ಕೆ.ಆರ್.ರಸ್ತೆಯ ನಿವಾಸದಿಂದ ಸೂಟ್‌ಕೇಸ್ ಪ್ಯಾಕ್ ಮಾಡಿ ಪತ್ನಿಯೊಂದಿಗೆ ಗೃಹಪ್ರವೇಶ ಮಾಡಲು ಮುಂದಾಗಿದ್ದಾರೆ.ಇನ್ನೂ. ಕೆ.ಆರ್.ರಸ್ತೆಯ ನಿವಾಸದಿಂದ ಶಿಫ್ಟ್ ಆಗುವ ಮನಸು ಮಾಡಿರುವ ಧ್ರುವಾ ನಯಾ ಮನೆ ಎಲ್ಲಿರಲಿದೆ. ಹೀಗೊಂದು ಪ್ರಶ್ನೆಗುತ್ತರವಾಗಿ ಕಾಣ್ಸೋದೇ ಹೈಪೈ ಏರಿಯಾ ಸದಾಶಿವನಗರ.

ಹೌದು, ಸದಾಶಿವನಗರ.. ದೊಡ್ಡ ದೊಡ್ಡವರೆಲ್ಲಾ ವಾಸವಾಗಿರುವ ಕಾಲನಿ. ಇನ್ನೂ ಇದೇ ಕಾಲನಿಯಲ್ಲಿ ದೊಡ್ಮನೆ ಕೂಡಾ ಇದೆ. ಹೇಳಿ ಕೇಳಿ ದೊಡ್ಮನೆಗೆ ಧ್ರುವಾ ತುಂಬಾನೇ ಹತ್ತಿರ. ಹಾಗಾಗಿ..ಮನೆನೂ ಹತ್ತಿರ, ಮನಸು ಹತ್ತಿರ ಅನ್ನುವ ತೀರ್ಮಾನಕ್ಕೆ ಬಂದಂತಿರುವ ಧ್ರುವಾ, ಸದಾಶಿವನಗರದಲ್ಲಿ ಠಿಕಾಣಿ ಹೂಡುವ ಮನಸು ಮಾಡಿದ್ದಾರೆ. ಅಂದ ಹಾಗೇ ಸದಾಶಿವನಗರಕ್ಕೆ ಶಿಫ್ಟ್ ಆಗಲಿರುವ ಧ್ರುವಾ, ಸ್ವಂತ ಮನೆ ಏನೂ ಮಾಡಿಕೊಂಡಿಲ್ಲ. ಹೌದು, ಸದ್ಯಕ್ಕೆ ಧ್ರುವಾ ಬಾಡಿಗೆ ಮನೆಯಲ್ಲಿರುವ ನಿರ್ಧಾರ ಮಾಡಿದ್ದಾರೆ. ತಿಂಗಳಿಗೆ ಎರಡು ಲಕ್ಷ ಬಾಡಿಗೆ ಕಟ್ಟಲು ಮುಂದಾಗಿದ್ದಾರೆ. ಇನ್ನೂ ಧ್ರುವಾ ಮನೆ ಶಿಫ್ಟ್ ಮಾಡುವ ಸುದ್ದಿ ಹೊರ ಬಿದ್ದೇಟಿಗೆ, ಇನ್ನೊಂದು ಚರ್ಚೆನೂ ಶುರುವಾಗಿದೆ. ಹೌದು, ಅಸಲಿಗೆ ಧ್ರುವಾ ಮನೆ ಬದಲಾವಣೆ ಹಿಂದಿರೋದು ಫ್ರೈವಸಿ ಅಲ್ಲ, ಬದ್ಲಿಗೆ ವಾಸ್ತು ದೋಶ ಅನ್ನುವ ಸುದ್ದಿ ಸದ್ದು ಮಾಡ್ತಿದೆ. ಹೌದು, ಧ್ರುವಾ ಸದ್ಯ ವಾಸ ಇರುವ ಕೆ.ಆರ್. ರಸ್ತೆಯ ಮನೆಯ ವಾಸ್ತು ಸರಿಇಲ್ವಂತೆ. ಹಾಗಾಗಿ, ವಾಸ್ತು ದೋಶದಿಂದ ಕೆಂಗೆಟ್ಟಿರುವ ಧ್ರುವಾ, ಮನೆಯನ್ನ ಖಾಲಿ ಮಾಡಿ ಸದಾಶಿವನಗರಕ್ಕೆ ಬರುವ ಮನಸು ಮಾಡಿದ್ದಾರಂತೆ ಅನ್ನುವ ಸುದ್ದಿನೂ ಇದೇ ವೇಳೆ ಕೇಳಿ ಬರ್ತಿ ದೆ. ಇನ್ನೂ ಡಿಸೆಂಬರ್ 9ರ ನಿಶ್ಚಿತಾರ್ಥದ ಬಳಿಕ.. ಧ್ರುವಾ, ಸದಾಶಿವನಗದರಲ್ಲಿ ಸೆಟ್ಲ್ ಆಗಲಿದ್ದಾರೆ.

LEAVE A REPLY

Please enter your comment!
Please enter your name here