ದುನಿಯ ವಿಜಯ್ ಮಗನ ಆರ್ಭಟಕ್ಕೆ ಶಹಬ್ಬಾಸ್ ಅಂದ ಸ್ಯಾಂಡಲ್ವುಡ್

0
730

ದುನಿಯಾ ವಿಜಯ್ ಪುತ್ರ ಸಾಮ್ರಾಟ್ ತಮ್ಮ ಕುಸ್ತಿನಿಂದ ಎಲ್ಲರನ್ನೂ ನಿಬ್ಬೇರಗಾಗಿಸಿದ್ದಾನೆ. ಹೌದು, ಕೆಲ ದಿನಗಳ ಹಿಂದೆ ವರ್ಕ್‌ಔಟ್ ಸೆಷನ್ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸಾಮ್ರಾಟ್, ಇದೀಗ.. ಕುಸ್ತಿಯ ಫಸ್ಟ್ ಲುಕ್ ಟೀಸರ್ ಮೂಲಕ ಪ್ರತ್ಯಕ್ಷವಾಗಿದ್ದಾನೆ. ತನ್ನ ಕುಸ್ತಿಯ ಕಲೆಯನ್ನ ತೋರಸ್ತಾನೇ ಉದ್ದುದ್ದ ಡೈಲಾಗ್ ಹೊಡೆಯುವ ಸಾಮ್ರಾಟ್, ಫಸ್ಟ್ ಅಟೆಂಫ್ಟ್‌ನಲ್ಲೇ ಅಭಿಮಾನಿಗಳ ಮನ ಗೆದ್ದಿದ್ದಾನೆ. ಬರೀ ದುನಿಯಾ ಫ್ಯಾನ್ಸ್ ಅಷ್ಟೇ ಅಲ್ಲ ಸಿನಿದುನಿಯಾದವರು ಸಾಮ್ರಾಟ್ ಸಾಮರ್ಥ್ಯಕ್ಕೆ ಸಲಾಂ ಅಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಕುಸ್ತಿಯ ಫಸ್ಟ್ ಲುಕ್ ಟೀಸರ್, ಸಾಮ್ರಾಟ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಅಂದ ಹಾಗೇ ಕುಸ್ತಿಗೆ ರಘು ಶಿವಮೊಗ್ಗ ನಿರ್ದೇಶನವಿದೆ. ಹಿಂದೆ ಚೂರಿಕಟ್ಟೆ ನಂತಹ ಒಂದೊಳ್ಳೇ ಪ್ರಯತ್ನವನ್ನ ಮಾಡಿದ್ದ ರಘುಗೇ, ಅದೇ ಚೂರಿಕಟ್ಟೆನೇ ಕುಸ್ತಿಯವರೆಗೂ ಕರೆತಂದಿದೆ. ಇನ್ನು ಚಿತ್ರಕ್ಕೆ ಖುದ್ದು ದುನಿಯಾ ವಿಜಯ್ ಬಂಡವಾಳ ಹೂಡುತ್ತಿದ್ದು, ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.

LEAVE A REPLY

Please enter your comment!
Please enter your name here