ದಾಖಲೆ‌ ಮೊತ್ತಕ್ಕೆ ದಿ ವಿಲನ್ ವಿತರಣೆ ಹಕ್ಕು ಮಾರಾಟ – ಇದು ಗಿಮಿಕ್ಕಲ್ಲ ರಿಯಲ್

0
413

ಚಂದನವನದಲ್ಲೊಂದು ಮಾತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿ.. ಕೋಟಿ ಲೂಟಿ ಮಾಡುವ ಕಲೆಗಾರ ಅಂದ್ರೆ ಅದು ಪ್ರೇಮ್ ಮಾತ್ರ ಅನ್ನೋದು. ಇದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಪ್ರೇಮ್ ನಿರ್ದೇಶನದ ದಿ ವಿಲನ್ ಇದೀಗ ಬಿಡುಗಡೆಗೂ ಮುನ್ನವೇ ಕೋಟಿ ಲೂಟಿ ಮಾಡಿ ದಾಖಲೆ ಬರೆದಿದೆ. ಹೌದು.. ದಿ ವಿಲನ್ ಚಿತ್ರದ ವಿತರಣಾ ಹಕ್ಕು ನ ಭೂತೋ ನ ಭವಿಷ್ಯತಿ ಅನ್ನುವಂತೆ ಮಾರಾಟವಾಗಿದೆ. ಭರ್ತಿ 15ಕೋಟಿಗೆ ದಿ ವಿಲನ್ ಚಿತ್ರದ ಬಿ.ಕೆ.ಟಿ ವಿತರಣಾ ಹಕ್ಕು ಮಾರಾಟವಾಗಿದೆ. ಕೆ.ಎಸ್.ಕೆ ಶೋ ರೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿತರಕ ಜಾಕ್ ಮಂಜು, ದಿ ವಿಲನ್ ಚಿತ್ರದ ಬೆಂಗಳೂರು.ಕೋಲಾರ ಹಾಗೂ ತುಮಕೂರು ಭಾಗದ ವಿತರಣೆಯನ್ನ ಖರೀದಿ ಮಾಡಿದ್ದಾರೆ.

ಸದ್ಯ ಬಿಕೆಟಿ ಏರಿಯಾ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದ್ದು, ಇನ್ನುಳಿದ ಏರಿಯಾಗಳ ಬಗ್ಗೆಯೂ ಮಾತುಕಥೆ ನಡೆಯುತ್ತಿದೆ. ಅದು ಕೋಟಿ ಲೆಕ್ಕದಲ್ಲೇ. ಹಾಗಾಗಿ ತುಸು ಹೆಚ್ಚಿನ ಖುಷಿಯಲ್ಲಿರುವ ನಿರ್ದೇಶಕ ಪ್ರೇಮ್, ದಿ ವಿಲನ್ ಹುಟ್ಟು ಹಾಕಿದ ಹೊಸ ದಾಖಲೆ ಬಗ್ಗೆ ಪ್ರಚಾರ ತಂಡದೊಂದಿಗೆ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ. ಅಂದ ಹಾಗೇ, ಇಲ್ಲಿವರೆಗೂ ಯಾವುದೇ ಸಿನಿಮಾ ಬಂದ್ರೂ ಕೆಲ ಏರಿಯಾಗಳಿಗೆ ಲಕ್ಷ ಮಟ್ಟದಲ್ಲಷ್ಟೇ ವ್ಯಾಪಾರ ಆಗ್ತಿದ್ವು. ಬಟ್. ದಿ ವಿಲನ್ 15 ಕೋಟಿ ಕೊಳ್ಳೆ ಹೊಡೆದಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಅದೇನೆ ಇರ್ಲಿೇ. ಚಿತ್ರಕ್ಕೆ ಡಿಮ್ಯಾಂಡ್ ಕ್ರಿಯೇಟ್ ಮಾಡಿ, ಬಿಡುಗಡೆಗೂ ಮೊದಲೇ ಕೋಟಿ ಲೂಟಿ ಮಾಡುವ ಪ್ರೇಮ್ ಕಲೆಯನ್ನ ನಿಜಕ್ಕೂ ಮೆಚ್ಚಲೇಬೇಕು.

LEAVE A REPLY

Please enter your comment!
Please enter your name here