ದರ್ಶನ್ ಸುದೀಪ್ ಬಗ್ಗೆ ಯಶ್ ಅಭಿಮಾನಿ ಹೀಗೆ ಹೇಳಿದ್ದು ಸರಿನಾ? ಕಲಾವಿದರನ್ನು ದಯವಿಟ್ಟು ಗೌರವಿಸಿ

0
1118

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ಸ್ ಗಳು ಅನೋನ್ಯವಾಗಿದ್ದಾರೆ. ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾರೆ. ಕನ್ನಡ ಚಿತ್ರರಂಗದ ಒಗ್ಗಟ್ಟಿಗೆ ಇತ್ತೀಚಿನ ಕೆಸಿಸಿ ಬೆಸ್ಟ್ ಎಕ್ಸಾಂಪಲ್. ಹೀಗಿದ್ದೂ ಕೆಲ ಅಂಧಾಭಿಮಾನಿಗಳು ಕನ್ನಡ ಚಿತ್ರರಂಗದಲ್ಲಿ ಎಲ್ಲ ಸರಿ ಇರೋದನ್ನ ಒಪ್ಪಿಕೊಳ್ತಿಲ್ಲ. ಸಹಿಸಿಕೊಳ್ತಿಲ್ಲ. ಸುಖಾಸುಮ್ಮನೆ.. ತಮ್ಮಿಷ್ಟದ ನಟನನ್ನ ಮೆಚ್ಚಿಸುವದಕ್ಕೋಸ್ಕರನೋ.. ಅಥ್ವಾ ಇನ್ನೊಂದ್ ಯಾವ್ದೋ ಹುಚ್ಚು ಉಮೇದಿಗೂ, ಬೇರೆ ನಟರ ಕಾಲ್ ಎಳಿತಾನೇ ಬರ್ತಿ್ದ್ದಾರೆ.

ಇತ್ತೀಚಿಗಷ್ಟೇ ಕೆಲ ಅಭಿಮಾನಿಗಳು ಸುದೀಪ, ಪುನೀತ್ ಫೋಟೊಗಳನ್ನ ತೀರಾ ಕೆಳಮಟ್ಟದಲ್ಲಿ ಉಪಯೋಗಿಸಿದ್ದರು. ತಮ್ಮ ವಿಕೃತಿಯ ಪ್ರದರ್ಶನ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಅಭಿಮಾನಿಗಳು ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ್ದರು. ಇಷ್ಟಾದ್ರೂ ಇದು ನಿಂತಿಲ್ಲ. ಇದೀಗ ತಮ್ಮನ್ನ ತಾವೇ ಯಶ್ ಹುಡುಗರು ಅಂತ ಕರೆದುಕೊಳ್ಳುವ ಇಲ್ಲೊಂದು ತಂಡ, ಅಭಿಮಾನಿಗಳಲ್ಲಿ ಹುಳಿ ಹಿಂಡುವ ಕೆಲ್ಸವನ್ನ ಮಾಡಿದೆ. ಹೌದು, ರಬಕವಿಯಲ್ಲಿ ಯಶ್ ಕಟೌಟ್ ಹಾಕಿ ತಮ್ಮ ಅಭಿಮಾನ ಪ್ರದರ್ಶಿಸಿರುವ ಈ ಅಂಧಾಭಿಮಾನಿಗಳು, ಕೆಳಗೆ ಬರೆದಿರುವ ಸಾಲುಗಳನ್ನ ಗಮನಿಸಿ.

ತೀರಾ.. ಕೆಳ ಮಟ್ಟದ ಬುದ್ದಿಯನ್ನ ಪ್ರದರ್ಶಿಸಿರುವ ಈ ಹುಡುಗರು, ಯಶ್ ಹೊಗಳುವ ಭರದಲ್ಲಿ ದರ್ಶನ್ ಮತ್ತು ಸುದೀಪಗೆ ಅವಮಾನ ಮಾಡಿದ್ದಾರೆ. ಕಾಲ್ ಎಳೆದಿದ್ದಾರೆ. ಬ್ಯಾಂಕ್ ದರೋಡೆ ಮಾಡೋಕೆ ಕೋಟಿಗೊಬ್ಬ 2 ಅಲ್ಲ, ಗಲ್ಲಿ ಗಲ್ಲಿ ಸುತ್ತಿ ಹೆಣ್ಣು ಕೇಳೋಕೆ ಜಗ್ಗುದಾದಾ ಅಲ್ಲ, 40 ಕೆ,ಜಿ. ಆಭರಣ ತೊಟ್ಟು 30 ಕೆ.ಜಿ ಗಧೆ ಹೋರೋಕೆ ಕುರುಕ್ಷೇತ್ರ ಅಲ್ಲ ಅಂದಿರುವ ಇವರು ನಿಜಕ್ಕೂ ಯಶ್ ಅಭಿಮಾನಿಗಳೇ ನಾ ಅನ್ನುವ ಪ್ರಶ್ನೆ ಇದನ್ನ ನೋಡಿದ ಎಲ್ಲರಲ್ಲೂ ಇದೀಗ ಕಾಡ್ತಿದೆ.

ಯಾಕಂದ್ರೆ ಯಶ್.. ಮೊದಲಿಂದನೂ ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ ಮಾತನ್ನ ನಂಬಿದವರು. ಚಿತ್ರರಂಗದ ಸಹನಟರನ್ನ ಪ್ರೀತಿಯಿಂದ ಕಾಣುವವರು. ಎಲ್ಲ ನಟರ ಸಿನಿಮಾಗಳನ್ನ ನೋಡಿ ಮೆಚ್ಚಿಕೊಳ್ಳುವವರು. ಇಂತಹ ಯಶ್ ಹೆಸರಿಗೆ ಮಸಿ ಬಳಿಯಲು ಮುಂದಾಗಿರುವ ಈ ಅಂಧಾಭಿಮಾನಿಗಳು ಮುಂದೊಂದು ದಿನ ಕನ್ನಡ ಚಿತ್ರರಂಗಕ್ಕೂ ಮಾರಕ. ಇನ್ಮುಂದೆಯಾದ್ರೂ.. ಕನ್ನಡ ಚಿತ್ರರಂಗ ಮತ್ತು ನಟರು ಇಂಥ ಮಾನಗೇಡಿ ಅಭಿಮಾನಿಗಳನ್ನ ದೂರವಿಡ್ಲೇಬೇಕಿದೆ. ಇಲ್ಲವಾದಲ್ಲಿ. ಕನ್ನಡ ಚಿತ್ರರಂಗಕ್ಕೆ ಇವರು ನಿಜಕ್ಕೂ ಕಳಂಕವಾಗುವ ಭೀತಿ ಇದೆ.

LEAVE A REPLY

Please enter your comment!
Please enter your name here