ದರ್ಶನ್ ರಾಜ‌ ಮದಕರಿಯಾಗಲು ಫಿಕ್ಸ್ ಆಗಿದ್ದು ಕುರುಕ್ಷೇತ್ರದ ಅಂಗಳದಲ್ಲಂತೆ..!

0
378

ಸುದೀಪ ಸಿಡಿಸಿದ ನಾನು ಒಬ್ಬ ಮದಕರಿ ನಾಯಕ ಅನ್ನುವ ಬಾಂಬ್ ಸಿಡಿದ ಬಳಿಕ, ಪ್ರಚಾರಕ್ಕೆ ಪ್ರತಿಕ್ರಿಯೆ ನೀಡಿದ ರಾಕ್ ಲೈನ್ ವೆಂಕಟೇಶ್ ಇದು ನಾಲ್ಕು ವರ್ಷದ ಹಿಂದೆ ನಾನು ಕಂಡ ಕನಸು ಅಂದಿದ್ದಾರೆ. ಇಷ್ಟೇ ಅಲ್ಲ ಸಂಶೋಧನೆಯನ್ನೂ ಆಗ್ಲೇ ಮಾಡಲಾಗ್ತಿದೆ ಅನ್ನುವ ರಾಕ್ ಲೈನ್ ವೆಂಕಟೇಶ್ ಸಿನಿಮಾ ನಿಲ್ಲಿಸುವ ಮಾತೇ ಇಲ್ಲ ಅನ್ನೋದನ್ನೂ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ, ಮೊದಲು ಮಾಡಬೇಕೆನ್ನುವ ನಿರ್ಧಾರ ಮಾಡಿದಾಗ ಮದಕರಿ ನಾಯಕನ ಪಾತ್ರಕ್ಕೆ ದರ್ಶನ್ ಸೂಕ್ತವೆನ್ನುವ ಯೋಚನೆನೂ ಬಂದಿರಲಿಲ್ಲ ಅಂದಿರುವ ರಾಕ್‌ಲೈನ್ ವೆಂಕಟೇಶ್‌ಗೆ ಕುರುಕ್ಷೇತ್ರದಲ್ಲಿನ ದರ್ಶನ್ ಗೆಟಪ್ಪ್ ಕಂಡ ಬಳಿಕ, ಮದಕರಿನಾಯಕನಿಗೆ ಇವ್ರೇ ಸೂಕ್ತ ಅನಿಸಿತ್ತಂತೆ. ಹಾಗಾಗೇ, ಕುರುಕ್ಷೇತ್ರದ ಸೆಟ್‌ನಲ್ಲಿ ದರ್ಶನ್ ಬಳಿ ಇದೇ ಮದಕರಿನಾಯಕನ ವಿಚಾರ ಪ್ರಸ್ತಾಪಿಸಿದಾಗ, ಖುಷಿಯಾಗಿಯೇ ದರ್ಶನ್ ಒಪ್ಪಿಕೊಂಡಿದ್ದು ಅನ್ನುತ್ತಾರೆ ರಾಕ್ ಲೈನ್ ವೆಂಕಟೇಶ್. ಇನ್ನು ಖುದ್ದು ರಾಕ್ ಲೈನ್ ವೆಂಕಟೇಶ್ ಹೇಳುವಂತೆ ಸ್ನೇಹಿತರಾಗಿಯೂ ಇಬ್ಬರು ಮದಕರಿನಾಯಕ ಜೀವನಕಥೆಗೆ ಸಿನಿರೂಪ ಕೊಡುವ ವಿಚಾರ, ಹಿಂದೆ ಚರ್ಚೆನೇ ಮಾಡಿಲ್ಲ. ಹಾಗಂತ, ಅಭಿನಯ ಚಕ್ರವರ್ತಿ ಕಂಡ ಕನಸಿನಲ್ಲೂ ಯಾವ ತಪ್ಪಿಲ್ಲ. ಅವರು ಮಾಡಲು ಹೊರಟಿರುವ ರಾಜಾ ಮದಕರಿ ನಾಯಕ ಸಿನಿಮಾಗೂ ಓಳ್ಳೇಯದಾಗಲಿ ಅನ್ನುತ್ತಾರೆ ರಾಕ್ ಲೈನ್ ವೆಂಕಟೇಶ್.

LEAVE A REPLY

Please enter your comment!
Please enter your name here