ದರ್ಶನ್ ಬಗ್ಗೆ ತಪ್ಪಾಗಿ ಮಾತನಾಡಿದ ಪ್ರಥಮ್ – ಒಳ್ಳೆ ಹುಡುಗನ ವಿರುದ್ದ ಡಿಬಾಸ್ ಫ್ಯಾನ್ಸ್ ಗರಂ

0
283

ಗಾಂಧಿನಗರದಲ್ಲಿ ಬಿಲ್ಡಪ್ ಸ್ಟಾರ್ ಅಂತನೇ ಖ್ಯಾತಿಯನ್ನ ಗಳಿಸಿರುವ ಪ್ರಥಮ್, ಇತ್ತೀಚಿಗೆ ದರ್ಶನ್‌ರನ್ನ ಹೊಗಳುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಡಿ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದ್ದಾರೆ. ಹೌದು, ಇತ್ತೀಚಿಗೆ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಟ್ಟಿಗೆ ಖುಷಿಯ ವಿಚಾರ ಹಂಚಿಕೊಂಡಿದ್ದರು. ಎಂ.ಎಲ್.ಎ ಆಡಿಯೋ ಬಿಡುಗಡೆ ಮಾಡಲು ಅತಿಥಿಯಾಗಿ ಬರಲೊಪ್ಪಿದ ದರ್ಶನ್‌ಗೆ ದನ್ಯವಾದ ಹೇಳಿದ್ದರು.

ಆದ್ರೆ.. ಹೀಗೆ ಧನ್ಯವಾದ ಹೇಳುವ ಭರದಲ್ಲಿ ಪ್ರಥಮ್, ದರ್ಶನ್‌ರನ್ನ.. “ವಾರಕ್ಕೊಂದು ಫೋನ್ ನಂಬರ್ ಬದಲಿಸೋ ಸ್ಟಾರ್ ಅಂದಿದ್ದಾರೆ. ಇದು, ಡಿ ಹುಡುಗರ ಕಣ್ಣು ಕೆಂಪಾಗಿಸಿದೆ. ಹೌದು, ಸ್ಟಾರ್‌ಗಳು ಫೋನ್ ನಂಬರ್ ಬದಲಿಸೋದು ಸಹಜ. ಅದ್ರಲ್ಲೂ ದರ್ಶನ್‌ರಂತಹ ಖ್ಯಾತ ನಟರಂತೂ, ತಮ್ಮ ನಂಬರ್‌ಗಳನ್ನ ಪದೇ ಪದೇ ಬದಲಿಸುತ್ತಾರೆ. ಇದಕ್ಕೆ ಕಾರಣ.. ಅಭಿಮಾನಿಗಳು ಅಂತ ಮತ್ತೆ ಇಲ್ಲಿ ಪ್ರತೈಕವಾಗಿ ಹೇಳಬೇಕಿಲ್ಲ. ಇಂತಹ ವಾಸ್ತವದ ಅರಿವಿದ್ದರೂ ಒಬ್ಬ ನಟನಾಗಿ ಪ್ರಥಮ್ ಹೀಗೆ ಹೇಳಬಹುದಾ ಅನ್ನುವ ಪ್ರಶ್ನೆಯನ್ನ ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮಲ್ಲೇ ಕೇಳಿಕೊಳ್ತಿದ್ದಾರೆ.

ಅದೇನೆ ಇರ್ಲಿಿ.. ಭೇಟಿ ಬಳಿಕ ದರ್ಶನ್‌ರಿಂದ ಪಾಠ ಕಲಿತಿರುವದಾಗಿ ಹೇಳಿದ್ದ ಪ್ರಥಮ್, ದರ್ಶನ್‌ರಂತೆ.. ತಾನು, ಮಾತು ತಪ್ಪದ ನಟನಾಗುವ ಮಾತುಗಳನ್ನಾಡಿದ್ದರು. ಆದ್ರೆ, ಇದೀಗ ಪ್ರಥಮ್ ಮಾತುಗಳನ್ನ ಕೇಳಿಸಿಕೊಂಡಿರುವ ಅಭಿಮಾನಿಗಳು, ಮೊದಲು.. ಬಾಸ್‌ನಂತೆ ಸರಳತೆಯ ಸ್ಟಾರ್ ಆಗಿ ಅಂಥ ತರಾಟೆಗೆ ತೆಗೆದುಕೊಳ್ತಿರೋದು ಸುಳ್ಳಲ್ಲ. ಎಷ್ಟೇ ಆಗ್ಲಿ ಪ್ರಥಮ್ ನಿಜ ಜೀವನದಲ್ಲೂ ಮುಂದಿನ ದಿನಗಳಲ್ಲಿ ಎಂ.ಎಲ್.ಎ ಆಗೋ ಪ್ರಯತ್ನದಲ್ಲಿರೋರು ಅಲ್ವಾ. ಹಾಗಾಗಿ, ಹೇಗೆ ಲೈಮ್ ಲೈಟಿನಲ್ಲಿರ್ಬೇಗಕೆನ್ನೋ ಕಲೆ ಇವ್ರಿಗೆ ಚೆನ್ನಾಗೇ ಕರಗತವಾಗಿದೆ ಅಂತಿದೆ ಗಾಂಧಿನಗರ. 

LEAVE A REPLY

Please enter your comment!
Please enter your name here