ತಮಿಳಿಗೆ ಕಾಲಿಟ್ಟ ಮಂಡ್ಯ ಹೈದ – ಅಭಿನಯ ಚತುರನ ಯೋಗ್ಯತೆಗೆ ಸಿಕ್ಕ ಸಿನಿಮಾ

0
103

ನೀನಾಸಂ ಸತೀಶ್.. ಅಯೋಗ್ಯ ಮೂಲಕ ಯೋಗ್ಯ ಗೆಲುವನ್ನ ಕಂಡ ನಟ. ಅಯೋಗ್ಯ ಮೂಲಕ ತನ್ನ ಬದುಕಿನ ದಿಕ್ಕನ್ನ ತಾನೇ ಬದಲಿಸಿಕೊಂಡ ಸತೀಶ್, ಇದೀಗ.. ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯಸ್, ಸತೀಶ್.. ಇದೀಗ ಸೌಥ್ ಇಂಡಿಯಾ ಸ್ಟಾರ್ ಆಗುವತ್ತ ದಾಪುಗಾಲು ಇಡುತ್ತಿದ್ದಾರೆ. ಇದ್ರ ಮೊದಲ ಮೆಟ್ಟಿಲು ಅನ್ನುವಂತೆ ಸತೀಶ್ ಅಭಿನಯದ ಮೊದಲ ತಮಿಳು ಸಿನಿಮಾ ಪಗೈವಾನುಕು ಅರುಲ್ವೈದ ಟೈಟಲ್ ಸಪ್ತಸಾಗರದಾಚೆ ಅಂದ್ರೆ ಸ್ವೀಜರ್‌ಲ್ಯಾಂಡಿನಲ್ಲಿ ಇದೇ ಡಿಸೆಂಬರ್ 8ಕ್ಕೆ ಅದ್ಧೂರಿಯಾಗಿ ಲಾಂಚ್ ಆಗಲಿದೆ. ಪಗೈವಾನುಕು ಅರುಲ್ವೈ ಅನೀಶ್ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಿಮಗೆ ಗೊತ್ತಿರಲಿ ಲೂಸಿಯಾ ಸಿನಿಮಾದಲ್ಲಿ ಸತೀಶ್ ಅಭಿನಯ ಕಂಡು ಅನೀಶ್ ಮಾರು ಹೋಗಿದ್ದರು. ಇದೇ ಇಬ್ಬರ ಸ್ನೇಹಕ್ಕೂ ಕಾರಣವಾಗಿತ್ತು. ಅಂದಿನಿಂದ ಇಂದಿನವರೆಗೂ ಸಿನಿಮಾ ಮಾಡಬೇಕೆನ್ನುವ ಆಲೋಚನೆ ಇಬ್ಬರಲ್ಲೂ ಇತ್ತು. ಬಟ್ ಕಾಲ ಕೂಡಿ ಬಂದಿರಲಿಲ್ಲ. ಆದ್ರೀಗ ಕಾಲ ಕೂಡಿ ಬಂದಿದೆ. ಸಿನಿಮಾ ಸೆಟ್ಟೇರುತ್ತಿದೆ.

ಅಂದ ಹಾಗೇ ಸತೀಶ್ ಅಭಿನಯದ ತಮಿಳು ಸಿನಿಮಾ, ಸತೀಶ್ ವೃತ್ತಿಯ ಓನ್ ಆಫ್ ದಿ ಬಿಗ್ ಬಜೆಟ್ ಸಿನಿಮಾ. ಮ್ಯೂಸಿಕ್ ಡೈರೆಕ್ಟರ್ ಮೊಹಮ್ಮದ್ ಗೀಬ್ರಾನ್, ಸಿನಿಮ್ಯಾಟೋಗ್ರಾಫರ್ ಷಣುಗ್ಮಂರಂಥ ತಮಿಳಿನ ಸ್ಟಾರ್ ತಂತ್ರಜ್ಞರು ಚಿತ್ರಕ್ಕೆ ದುಡಿಯುತ್ತಿದ್ದಾರೆ. ಹಾಗಾಗಿ, ಸಿನಿಮಾ ಮೇಲಿನ ನಿರೀಕ್ಷೆಗಳೂ ಆಗ್ಲೇ ಗರಿಗೇದರಿವೆ. ಇನ್ನೂ ಸತೀಶ್ ಮೊದಲ ತಮಿಳು ಕನವರಿಕೆಯ ಟೈಟಲ್ ಲಾಂಚ್ ಸಮಾರಂಭಕ್ಕೆ ಹತ್ತು ಸಾವಿರ ಮಂದಿ ಸಾಕ್ಷಿಯಾಗಲಿದ್ದಾರೆ. ಇದು, ಸತೀಶ್ ಖುಷಿಯನ್ನೂ ಇಮ್ಮಡಿಗೊಳಿಸಿದೆ. ಅದೇನೆ ಇರ್ಲಿು.. ಕನ್ನಡದ ಪ್ರತಿಭಾವಂತ ನಟ ಅಭಿನಯ ಚತುರ ನೀನಾಸಂ ಸತೀಶ್ ಇದೀಗ ತಮಿಳಿನತ್ತ ಹೊರಟಿದ್ದಾರೆ. ತಮಿಳುನಾಡಿನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲು ಸಿದ್ಧರಾಗಿದ್ದಾರೆ. ಇವ್ರ ಇದೇ ಪ್ರಯತ್ನಕ್ಕೆ ಶುಭವಾಗಲಿ ಅನ್ನೋದೇ ನಮ್ಮ ಆಶಯ.

LEAVE A REPLY

Please enter your comment!
Please enter your name here