ಡಿಟೆಕ್ಟಿವ್ ದಿವಾಕರ್ ಅವತಾರದಲ್ಲಿ ರಿಷಭ್ ಶೆಟ್ಟಿ – ಇವ್ನು ಬೆಲ್‌ ಬಾಟಂನ ಜೇಮ್ಸ್ ಬಾಂಡ್

0
67

ಬೆಲ್ ಬಾಟಂ.. ರಿಶಭ್ ಶೆಟ್ಟಿ ಆಸ್ ಎ ಆಕ್ಟರ್ ಕಾಣಸಿಗುವ ಸಿನಿಮಾ. ಆರಂಭದಿಂದ್ಲೂ ಒಂದು ಹಂತದ ಕೂತುಹಲಕ್ಕೆ ಕಾರಣವಾಗಿದ್ದ ಬೆಲ್ ಬಾಟಂನಲ್ಲಿ ರಿಶಭ್, ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಬಟ್, ದುರಂತ ಅಂದ್ರೆ ಇದೇ ಡಿಟೆಕ್ಟಿವ್ ದಿವಾಕರ್ ಬಳಿ ಇಲ್ಲಿ ಗನ್ನೇ ಇಲ್ಲ. ಗನ್ ಇಲ್ಲದೇ ಪೋಸ್ ಕೊಟ್ಟು, ದಿವಾಕರ್ ಜೇಮ್ಸ್ ಬಾಂಡಾ ಅಥ್ವಾ ಕುರಿ ಬಾಂಡಾ ಅನ್ನುವ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡ್ತಿದೆ. ಇದಕ್ಕೆ ಕಾರಣ ಬಿಡುಗಡೆಯಾಗಿರುವ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್. ಅಂದ ಹಾಗೇ ಬೆಲ್ ಬಾಟಂ ಚಿತ್ರದಲ್ಲಿ ಹರಿಪ್ರಿಯಾ ರಿಶಭ್‌ಗೆ ನಾಯಕಿಯಾಗಿ ಕಾಣಸಿಗಲಿದ್ದಾರೆ. ಇನ್ನೂ.. ಬ್ಯೂಟಿಫುಲ್ ಮನಸುಗಳಂಥ ಸದಭಿರುಚಿ ಸಿನಿಮಾ ಡೈರೆಕ್ಟ್ ಮಾಡಿದ್ದ ಜಯತೀರ್ಥ, ಬೆಲ್ ಬಾಟಂಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಕಥೆ ೮೦ರ ದಶಕದ ನೆರಳಿನಲ್ಲೇ ಸಾಗುತ್ತೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಬೆಲ್ ಬಾಟಂಗೆ ಸಂತೋಶ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸದ್ಯ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್‌ನಿಂದ ಸದ್ದು ಮಾಡ್ತಿರುವ ಬೆಲ್ ಬಾಟಂ ಚಿತ್ರದ ಟ್ರೇಲರ್ ಇದೇ ಡಿಸೆಂಬರ್ ೭ಕ್ಕೆ ಬಿಡುಗಡೆಯಾಗಲಿದೆ. 

https://youtu.be/lyfgU0G4zRI 

LEAVE A REPLY

Please enter your comment!
Please enter your name here