ಡಾಲಿ ಮನೆಗೆ ಬಂದ ಕೆಂಪು ಸುಂದರಿ – ರೆಂಜ್ ರೋವರ್ ಓಡೆಯನಾದ ಧನಂಜಯ್

0
67

ಧನಂಜಯ್ ಕನ್ನಡ ಚಿತ್ರರಂಗದ ಡಾಲಿ. ಟಗರು ಮೂಲಕ ಹೊಸದೊಂದು ಇನಿಂಗ್ಸ್ ಆರಂಭ ಮಾಡಿರುವ ಧನಂಜಯ್ ಮನೆಗೀಗ ಕೆಂಪು ಸುಂದರಿ ಬಂದಿದ್ದಾಳೆ. ಯಸ್, ಅಭಿಮಾನಿಗಳ ಪ್ರೀತಿಯ ಫಲವೆನ್ನುವಂತೆ ಧನಂಜಂii ನಯಾ ರೇಂಜ್ ರೋವರ್ ಕಾರನ್ನ ಖರೀದಿ ಮಾಡಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತಮ್ಮ ಹೊಸ ಕಾರಿನ ಪೂಜೆಯನ್ನ ಧನಂಜಯ್ ಮಾಡಿಸಿದ್ದಾರೆ. ಇನ್ನೂ ಗೆದ್ದ ಮೇಲೆ ಹಳೆಯ ದಿನಗಳು ಮರಿಬಾರದು ಅನ್ನುವದನ್ನ ಚೆನ್ನಾಗಿ ಬಲ್ಲ ಧನಂಜಯ್ ಇದೇ ವೇಳೆ ತನ್ನ ತಂದೆ ಕೊಡಿಸಿದ್ದ ಟಿವಿಎಸ್ ಎಕ್ಸೆಲ್ ಸೂಪರ್‌ಗೂ ಪೂಜೆ ಮಾಡಿಸಿದ್ದಾರೆ. ಒಂದು ನಮ್ಮಪ್ಪ ಕೊಡಿಸಿದ್ದು, ಇನ್ನೊಂದು ನೀವ್ ಕೊಡ್ಸಿದ್ದು ಅಂದಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಪ್ರೀತಿ ಹೀಗೆ ಇರಲಿ ಅನ್ನುವ ಬೇಡಿಕೆಯನ್ನೂ ಇಟ್ಟಿದ್ದಾರೆ ಧನಂಜಯ್. ಅಂದ ಹಾಗೇ ಧನಂಜಯ್, ಸದ್ಯ ಯಜಮಾನದಲ್ಲೂ ಕಾಣಸಿಗಲಿದ್ದಾರೆ. ಇನ್ನೂ ಸೂರಿಯ ಪಾಪ್‌ಕಾರ್ನ್ ಮಂಕಿ ಟೈಗರ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮೊನ್ನೆವರೆಗೂ ಗಡ್ಡಧಾರಿಯಾಗಿದ್ದ ಧನು ಇದೀಗ ಕ್ಲೀನ್ ಶೇವ್ ಮಾಡಿಸಿಕೊಂಡಿದ್ದಾರೆ. ಧನಂಜಯ್ ಅವ್ರ ಇದೇ ಲುಕ್ಕು.. ಅಭಿಮಾನಿಗಳಿಗೀಗ ಮತ್ತಷ್ಟು ಕಿಕ್ ಕೊಡ್ತಿದೆ.

LEAVE A REPLY

Please enter your comment!
Please enter your name here