ಡಾಲಿ ಡವ್ ಸರೋಜಳ ಹೆಸರಲ್ಲಿ ಶುರುವಾಗಲಿದೆಯಂತೆ ಸಿನಿಮಾ – ಇದಕ್ಕೆ ಕಾರಣ ಟಗರು ಸಿನಿಮಾ

0
422

ಪ್ರಿಯಾ ವಾರಿಯರ್ ನ್ಯಾಶನಲ್ ಕ್ರಶ್ ಆಗಿದ್ದು. ರಶ್ಮಿಕಾ ಮಂದಣ್ಣಗೆ ಎಲ್ಲ ಮನ ಸೋತಿದ್ದು. ಎಲ್ಲ ಇದೀಗ ಹಳೆ ವಿಷಯ. ಈಗೇನಿದ್ರೂ ಕಾನ್ಸ್ ಟೇಬಲ್ ಸರೋಜಾದ್ದೇ ಸದ್ದು. ಸಿಂಪಲ್ಲಾಗ್ ಹೇಳಬೇಕಂದ್ರೆ ಈಗ ಶುರುವಾಗಿರೋದು ಸರೋಜಾ ಮೇನಿಯಾ. ಇದಕ್ಕೆ ಕಾರಣವಾಗಿದ್ದು ಟಗರು ಅನ್ನುವ ಅದ್ಭುತ ದುನಿಯಾ. ಹೌದು, ಸರೋಜಾ ದುನಿಯಾ ಬದಲಾಗಿದೆ. ಟಗರು ಸಿನಿಮಾ ನೋಡಿದ ಪಡ್ಡೆಗಳು ಸರೋಜಾ ಜಪವನ್ನ ಮಾಡ್ತಿದ್ದಾರೆ. ತಮ್ಮ ತಮ್ಮ ಫೇಸ್‌ಬುಕ್, ವಾಟ್ಸಾಪ್‌ಗಳನ್ನ ಸರೋಜಾಮಯವನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಕಾನ್ಸ್ ಟೇಬಲ್ ಸರೋಜಾ ಅನ್ನುವ ಹೆಸರಿನ ಸಿನಿಮಾ ಟೈಟಲ್‌ನ್ನೂ ರಿಜಿಸ್ಟರ್ ಮಾಡಿಸಲಾಗಿದೆ. ಅಲ್ಲಿಗೆ ನೀವೆ ಲೆಕ್ಕ ಹಾಕಿ ಸರೋಜಾಗೆ ಸೋತ ಮನಸುಗಳು ಎಷ್ಟಿವೆ ಅಂತ.

ಹಾಗ್ ನೋಡಿದ್ರೆ ಟಗರುದಲ್ಲಿ ಸರೋಜಾರದ್ದು ಇರೋದು ಎರಡ್ಮೂರು ಸೀನ್ & ನಾಲ್ಕೈದು ಡೈಲಾಗ್. ಹೀಗಿದ್ದೂ ಸರೋಜಾ ಜ್ವರ ಎಲ್ರನ್ನ ಆವರಿಸಿಕೊಂಡಿದೆ ಅಂದ್ರೆ ಅದು ಇವ್ರ ಪಾತ್ರಕ್ಕೆ ಇರುವ ಪ್ರಾಮುಖ್ಯತೆ ಮತ್ತು ಸೂರಿಯ ಚಾಕ್ಯಚಕ್ಯತೆ. ಅಂದ ಹಾಗೇ, ರಾತ್ರೋ ರಾತ್ರಿ ಫೇಮಸ್ ಆಗಿರುವ ಈ ಸರೋಜಾ ಯಾರು,ಹಿನ್ನೆಲೆ ಏನು ಅಂತ ಹುಡುಕಲು ಹೊರಟ್ರೆ ಇಲ್ಲಿ ಅನೇಕ ಇಂಟ್ರೆಸ್ಟಿಂಗ್ ಸಂಗತಿಗಳು ಎದುರಾಗ್ತಾವೇ. ಎಸ್, ಸರೋಜಾ ಅಂತಾನೇ ನೇಮು, ಫೇಮು ಪಡೆದ ಚೆಲುವೆಯ ಅಸಲಿ ಹೆಸರು ತ್ರಿವೇಣಿ. ತ್ರಿವೇಣಿ ಮೂಲತ ಬೆಂಗಳೂರಿನವರು. ಬೆಂಗಳೂರಿನ ಆರ್ ಆರ್ ನಗರದ ನಿವಾಸಿ. ದ್ವಾರಕಾನಾಥ್ ಮತ್ತು ಹೇಮಲತಾ ಇವ್ರ ಅಪ್ಪ ಅಮ್ಮ. ಉಜ್ವಲ್ ಮತ್ತು ರಾಮ್ ಸಹೋದರರು.

Triveni Rao Stills

ಸದ್ಯ ಟಗರು ಮೂಲಕ ಟಾಕ್ ಆಪ್ ದಿ ಟೌನ್ ಆಗಿರುವ ತ್ರಿವೇಣಿ, ಚಕ್ರವರ್ತಿಯಲ್ಲಿ ಸೃಜನ್ ಲೊಕೇಶ್‌ಗೆ ಜೊತೆಯಾಗಿದ್ದರು. ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲೂ ಚಿಕ್ಕ ಪಾತ್ರವನ್ನ ನಿರ್ವಹಿಸಿದ್ದರು. ಇಷ್ಟೇ ಅಲ್ಲ.. ಭಾರತೀಯ ಚಿತ್ರರಂಗದ ಹೆಮ್ಮೆಯ ಸಿನಿಮಾ ಅಂತನೇ ಕರೆಯಲ್ಪಡುವ ರಾಜ್ ಮೌಳಿಯ ದೃಶ್ಯಕಾವ್ಯ ಬಾಹುಬಲಿಯಲ್ಲೂ ತ್ರಿವೇಣಿ ನಟಿಸಿದ್ದಾರೆ ಅಂದ್ರೆ ನೀವ್ ನಂಬ್ಲೇಬೇಕು. ರಮ್ಯ ಕೃಷ್ಣ ಜೊತೆ ಬಾಹುಬಲಿಯಲ್ಲಿ ಆಕ್ಟ್ ಮಾಡಿರುವ ಈ ಚೆಲುವೆ, ಚಿತ್ರದಲ್ಲಿ ಯುದ್ಧದ ಸನ್ನಿವೇಶವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಒಂದು ಯುದ್ಧದ ಸನ್ನಿವೇಶ ಇವ್ರಿಗೆ ತಮಿಳು ಮತ್ತು ತೆಲುಗುದಲ್ಲಿ ಅವಕಾಶಗಳ ಬಾಗಿಲು ತೆರೆಸಿದೆ. ಸದ್ಯ ಟಗರು ಮೂಲಕ ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದಿರುವ ತ್ರಿವೇಣಿಗೆ, ಸರೋಜಾದಂತಹ ತೂಕವಿರುವ ಪಾತ್ರಗಳನ್ನ ಮಾಡುವ ಆಸೆ. ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುವ ಬಯಕೆ. ಇವ್ರ ಈ ಬಯಕೆ, ಕನಸು, ಆಸೆಗಳು ಮುಂದಿನ ದಿನಗಳಲ್ಲಿ ಈಡೇರಲಿ ಅನ್ನೋದೆ ನಮ್ಮ ಆಶಯ

LEAVE A REPLY

Please enter your comment!
Please enter your name here