ಡಾಲಿಗೆ ಲಿಪ್ ಲಾಕ್ ಮಾಡಿ ದಮ್ ಹೊಡೆಸಿದ್ದ ಸುಂದರಿ ಈಕೆ – ಸಿಕ್ಕಾಪಟ್ಟೆ ಬ್ಯೂಸಿಯಾದ ಸೆಕ್ಸಿ ಭಟ್

0
1070

ಟಗರು ಅನೇಕರ ನಸೀಬು ಬದಲಿಸಿದ ಸಿನಿಮಾ. ಪುರ್ನವಸು ಮಾನ್ವಿತಾಗೆ ಆರ್.ಜಿ.ವಿ ಸಿನಿಮಾ ಆಫರ್ ಮಾಡಿದ್ದಾರೆ. ಡಾಲಿ ಧನಚಿಜಯ್‌ಗೂ ಅವಕಾಶಗಳ ಸುರಿಮಳೆನೇ ಆಗ್ತಿದೆ. ಕಾನ್ಸಟೇಬಲ್ ಸರೋಜಾನೂ ಬ್ಯುಸಿಯಾಗಿದ್ದಾರೆ. ಸ್ಥಿತಿ ಹೀಗಿರುವಾಗ ಡಾಲಿಯ ಡಾರ್ಲಿಂಗ್ ಅನಿತಾ ಭಟ್‌ಗೂ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬರ್ತೀವೆ.

ಹೌದು ಅನಿತಾ ಭಟ್ ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿ. ಹೀಗಿದ್ದೂ ಪ್ರತಿಭೆ ಇದ್ದರು ಅದ್ಯಾಕೋ ಸಣ್ಣ ಪುಟ್ಟ ಪಾತ್ರಗಳಿಗಷ್ಟೇ ಇವ್ರನ್ನ ಸೀಮಿತಗೊಳಿಸಲಾಗಿತ್ತು. ಆದ್ರೀಗ ಪರಿಸ್ಥಿತಿ ಮೊದಲಿನಂತಿಲ್ಲ. ಬದಲಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಶುರುವಾಗಿ ಅರ್ಧಕ್ಕೆ ನಿಂತಿದ್ದ ಅನಿತಾ ಭಟ್ ಅಭಿನಯದ ಸಿನಿಮಾಗಳಿಗೆ ಮರುಜೀವ ಸಿಕ್ಕಿವೆ. ಚಿತ್ರೀಕರಣನೂ ಪೂರ್ಣಗೊಂಡಿವೆ. ಬಿಡುಗಡೆಗೂ ಸಿದ್ಧವಾಗಿವೆ. ಇದು ಅನಿತಾ ಖುಷಿಗೆ ಸದ್ಯ ಕಾರಣವಾಗಿದೆ.

ಅಂದ ಹಾಗೇ ಡಾಲಿಯ ಈ ಡಾರ್ಲಿಂಗ್ ಸದ್ಯದಲ್ಲೇ ಡೇಸ್ ಆಫ್ ಬೋರಾಪುರದಲ್ಲಿ ನಿಮಗೆ ಕಾಣಸಿಗಲಿದ್ದಾರೆ. ಡೇಸ್ ಆಫ್ ಬೋರಾಪುರ ಮಹಿಳಾ ಪ್ರಧಾನ ಸಿನಿಮಾ. ಇವ್ರ ಪಾತ್ರಕ್ಕೆ ಇಲ್ಲಿ ಒತ್ತು ನೀಡಲಾಗಿದೆ. ಇನ್ನು ಪ್ರಭುತ್ವ ಸಿನಿಮಾದಲ್ಲೂ ಅನಿತಾದು ಪವರ್‌ಫುಲ್ ಪಾತ್ರ. ಇಲ್ಲಿ ಅನಿತಾ ತಹಸೀಲ್ದಾರ್ ಪಾತ್ರದಲ್ಲಿ ನಿಮ್ಮ ಮುಂದೆ ಪ್ರತ್ಯಕ್ಷವಾಗಲಿದ್ದಾರೆ. ಬರೀ ಇಷ್ಟೇ ಅಲ್ಲ ವೈಶಾಕಿನಿ ಮತ್ತು ಅಭಿರಾಮಿಯಲ್ಲೂ ಅನಿತಾನೇ ಪ್ರಮುಖ ನಾಯಕಿ. ಇಂಟ್ರೆಸ್ಟಿಂಗ್ ಅಂದ್ರೆ ಇವೆರಡು ಸಿನಿಮಾಗಳಲ್ಲಿ ಇವ್ರದ್ದು ರಾಣಿಯ ಪಾತ್ರ. ಇನ್ನು ಇದೆಲ್ಲದ್ರ ನಡುವೆ ತೆಲುಗಿನಿಂದನೂ ಸಿನಿಮಾಗಳ ಆಫರ್‌ಗಳು ಅನಿತಾಗೆ ಬರ್ತಿ್ವೆ. ಅದೇನೆ ಇರ್ಲಿತ ತುಂಬಾ ಹಿಂದೆನೇ ಮಿಂಚಬೇಕಿದ್ದ ಅನಿತಾ ಇದೀಗ ಮಿಂಚುತ್ತಿದ್ದಾರೆ. ಕೊನೆಗೂ ಇವ್ರ ಶ್ರಮಕ್ಕೆ ಪ್ರತಿಭೆಗೆ ಇಲ್ಲಿ ಮಣೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸಿಕ್ಕ ಅವಕಾಶಗಳನ್ನ ಅನಿತಾ ಭಟ್ ಹೇಗೆ ಉಪಯೋಗಿಸಿಕೊಳ್ತಾರೆ ಅನ್ನೋದು ಸದ್ಯದ ಕೂತುಹಲ. ಏನೆ ಇರ್ಲಿ ಶುಭವಾಗಲಿ ಅನಿತಾ ಭಟ್.

LEAVE A REPLY

Please enter your comment!
Please enter your name here