ಡಕಾಯಿತರ ಮೇಲೆ ಅಯೋಗ್ಯನಿಗಿದೆ ಭಾರಿ ನಂಬಿಕೆ – ಮತ್ತೊಂದು ಸಕ್ಸಸ್ ಎದುರು‌ ನೋಡುತ್ತಿರುವ ಅಭಿನಯ ಚತುರ

0
170

 

 

ಅಯೋಗ್ಯ ಸಕ್ಸಸ್ನಲ್ಲಿ ತೇಲುತ್ತಿರುವ ನೀನಾಸಂ ಸತೀಶ್ ತಮ್ನ ಮುಂದಿ ಚಿತ್ರದ ಬಗ್ಗೆ ಅಭಿಮಾನಿಗಳಿಗಾಗಿ ಬತೆದಿರುವ ಲೆಟರ್ ಇದು.                                                     ಅಯೋಗ್ಯ ನೂರುದಿನಗಳಾಯಿತು ಮುಂದೇನು ಎಂಬ ಪ್ರಶ್ನೆಗೆ ಉತ್ತರ ಚಂಬಲ್ .ಒಂದು ವರ್ಷದ ಹಿಂದೆ ಸವಾರಿ,ಪೃಥ್ವಿ, ಸಿನಿಮಾಗಳಂತ ಸೂಕ್ಷ್ಮಕಥೆಯುಳ್ಳ ಸಿನಿಮಾಗಳನ್ನ ಮಾಡಿದ್ದ ಜೇಕಬ್ ಅವರು ಕಥೆ ಹೇಳಿದಾಗ ಮರುಮಾತಿಲ್ಲದೇ ಒಪ್ಪಿದೆ ಕಥೆಯ ಕಾರಣಕ್ಕೆ.ನಾನು ಪ್ರತಿ ಬಾರಿ ಕಥೆಗೆ ಪ್ರಾಮುಖ್ಯತೆ ಕೊಡುತ್ತಾ ಬಂದಿರುವೆ ವಿಭಿನ್ನವಾಗಿ ಒಂದಷ್ಟು ಪ್ರಯತ್ನ ಮಾಡುವ ಉದ್ದೇಶದಿಂದ, ಇದು ಹಾಗೆ ನನ್ನ ವೃತ್ತಿ ಜೀವನವನ್ನ ವಿಸ್ತಾರ ಮಾಡುವ ಶಕ್ತಿಯುಳ್ಳ ಸಿನಿಮಾ ಇದು.ಜೇಕಬ್ ಅವರಲ್ಲಿ ಒಮ್ಮೆ ಪ್ರಶ್ನೆ ಮಾಡಿದೆ “ಹೇಗಿದೆ ಚಂಬಲ್ ” ಎಂದು ಯಾವಾಗಲು ತನ್ನ ಸಿನಿಮಾ ಬಗ್ಗೆ ಹೆಚ್ಚು ಮಾತನಾಡದ ಜೇಕಬ್ ಅವರು ಪದೇ ಪದೇ ನಾನು ಕೇಳುವ ಈ ಪ್ರಶ್ನೆಗೆ ” ನಾನು ಮಾಡಿರುವ ಸಿನಿಮಾಗಳಲ್ಲೇ ಬೆಷ್ಟ್ ಎಂದರು “ಸಮಾಧಾನವಾಯಿತು.

ಈ ಸಿನಿಮಾ ಬರೀ ಹಣ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ ಸಿನಿಮಾ ಪ್ರೀತಿಸುವ ಎಲ್ಲ ಮನಸ್ಥಿತಿಗಳು ವ್ಯವಹಾರವನ್ನ ಮೀರಿ ಒಂದಾಗಿದ್ದೇವೆ.ನೆಟ್ ಫ್ಲಿಕ್ಸ್ ಕೊಟ್ಟ ಆಫರ್ ತಿರಸ್ಕರಿಸಲು ಸಕಾರಣವಿದೆ .ಬಿಡುಗಡೆಯ ನಂತರ ಎಲ್ಲ ತಿಳಿಯಲಿದೆ .ಈಗ ಇದರ ಮೊದಲ ಒಂದಷ್ಟು ಮುಖಗಳು ಕಾಣುವಂತ ವಿನ್ಯಾಸ ನಿಮ್ಮ ಮುಂದಿದೆ .ಸಿನಿಮಾದೊಳಗೆ ನಗರದ ಡಕಾಯಿತರ ಕಥೆಯೊಂದನ್ನು ಗಾಢವಾಗಿ ಬಿಂಬಿಸುವ ಪ್ರಯತ್ನ ಇದಾಗಿದೆ.ನೀವು ಯೋಚಿಸುವ ಹಾಗೆ ಮಾಡುವ ಒಂದು ಪ್ರಯತ್ನ”” ಚಂಬಲ್””
ಸದ್ಯದಲ್ಲೇ ಟೀಸರ್ ಬಿಡುಗಡೆ……

LEAVE A REPLY

Please enter your comment!
Please enter your name here