ಟ್ರೈಲರ್ ನಿಂದ ಸೌಂಡ್‌ ಮಾಡ್ತೀದೆ ಹೊಸಬರ ಸಿನಿಮಾ – ರಿಲೀಸ್ಗು ಮುನ್ನ ಕ್ರೇಜ್ ಸೃಷ್ಟಿಸಿದ ಗುಳ್ಟು

0
399

ಗುಳ್ಟು. ಕನ್ನಡ ಸಿನಿಮಾ ಪ್ರೇಮಿಗಳು ಕಾಯ್ತಿರುವ ಸಿನಿಮಾ. ಇದಕ್ಕೆ ಕಾರಣ ಸಿನಿಮಾದ ಟೀಸರ್ ಅಂದು ಮಾಡಿದ್ದ ಮೋಡಿ. ಅವತ್ತು ಟೀಸರ್ ನೋಡಿದ ಬಳಿಕ, ಗುಳ್ಟುನ ಎಲ್ಲರು ಎಲ್ಲೆಲ್ಲೂ ಹುಡುಕಿದವ್ರೇ ಹೆಚ್ಚು. ಇದಕ್ಕೆ ಕಾರಣ.. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ. ಹೌದು, ಟೀಸರ್‌ನಿಂದ ಒಂದು ಕೂತುಹಲ, ಕೌತುಕಕ್ಕೆ ಕಾರಣವಾಗಿದ್ದ ನಿರ್ದೇಶಕ ಜನಾರ್ಧನ್ ಸಿನಿಪ್ರೇಮಿಗಳ ತಲೆಗೆ ಹುಳ ಬಿಟ್ಟಾಗಿತ್ತು. ಹಾಗಾಗಿ, ಟ್ರೇಲರ್‌ನ ಕಾಯ್ತಿದ್ದವರ ಸಂಖ್ಯೆ ಅದೆಷ್ಟೋ. ಬಹುಶ, ಇದನ್ನ ಅರ್ಥ ಮಾಡಿಕೊಂಡೇ ಏನೋ.. ಬಿಡುಗಡೆಗೆ ಜಸ್ಟ್ ಒಂದು ವಾರ ಇರುವಾಗ ನಿರ್ದೇಶಕ ಜನಾರ್ಧನ್ ಇದೀಗ ಟ್ರೇಲರ್‌ನ ರಿವೀಲ್ ಮಾಡಿದ್ದಾರೆ

ಯಸ್, ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ಸುವ ಟ್ರೇಲರ್ ಇದು. ಇದು ನಮ್ಮ ಮಾತಲ್ಲ. ಬದ್ಲಿಗೆ ಟ್ರೇಲರ್ ನೋಡಿದ ಸಿನಿಮಾ ಆಸಕ್ತರ ಮಾತು. ಸಿನಿಮಾ ಉದ್ಯಮದವರ ಮಾತು. ಹೌದು, ಗುಳ್ಟುಗೆ ಎಲ್ಲಾ ಫಿದಾ ಆಗಿದ್ದಾರೆ. ಸಾಮಾನ್ಯರಿಂದ ಹಿಡ್ದು ಸೆಲಿಬ್ರೀಟಿಗಳೆಲ್ಲಾ ಗುಳ್ಟು ಗುಂಗಲ್ಲಿದ್ದಾರೆ. ಬಹುಶ, ಇದೇ ಕಾರಣಕ್ಕೋ ಏನೋ.. ತಮ್ಮ ಸಾಮಾಜಿಕ ಜಾಲತಾಣದ ಆಪಿಶಿಯಲ್ ಫೇಜ್‌ನಲ್ಲಿ ಚಿತ್ರದ ಟ್ರೇಲರ್ ಶೇರ್ ಮಾಡ್ತಿರುವ ಸ್ಟಾರ್ಸ್ , ಚಿತ್ರತಂಡದ ಪ್ರಯತ್ನವನ್ನ ಬಾಯ್ತುಂಬ ಹೊಗಳುತ್ತಿದ್ದಾರೆ.

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ರಾಜ್ ಬಿ ಶೆಟ್ಟಿ, ಹೇಮಂತ್ ರಾವ್, ನಿರೂಪ್ ಭಂಡಾರಿ, ಡಾಲಿ ಧನಂಜಯ್, ಹೀಗೆ ಒಬ್ಬರಾ ಇಬ್ಬರಾ.. ಎಲ್ಲರಿಗೂ ಹಿಡಿದಿರುವದು ಒಂದೇ ಜ್ವರ್. ಅದೇ ಗುಳ್ಟು ಜ್ವರ. ಅಂದ ಹಾಗೇ, ಗುಳ್ಟು.. ಸೈಬರ್ ಕ್ರೈಮ್ ಆಧಾರಿತ ಚಿತ್ರ. ಸಿಂಪಲ್ಲಾಗ್ ಹೇಳಬೇಕಂದ್ರೆ ಟೆಕ್ನಾಲಜಿಯನ್ನ ಹೇಗೆಲ್ಲಾ ದುರ್ಬಳಕೆ ಮಾಡಲಾಗುತ್ತೆ ಅನ್ನುವದ್ರ ಮೇಲೆ ಬೆಳಕು ಚೆಲ್ಲುವ ಯತ್ನ ಇಲ್ಲಾಗಿದೆ. ಈ ಅರ್ಥದಲ್ಲಿ ಇದು ತುಂಬಾನೇ ವಿಭಿನ್ನವಾದ ಕಥಾಹಂದರ ಹೊಂದಿರುವ ವಿನೂತನ ಪ್ರಯತ್ನ. ಇನ್ನು, ಸಿನಿಮಾದ ನಾಯಕನಾಗಿ ಇಲ್ಲಿ ನವೀನ್ ಶಂಕರ್ ಕಾಣಿಸಿಕೊಂಡಿದ್ದಾರೆ. ಮುಗ್ದ, ಅಮಾಯಕ, ಪ್ರೇಮಿ ಮತ್ತು ಬುದ್ದಿವಂತನಂತೆ ಇಲ್ಲಿ ಕಾಣಸಿಗುವ ನವೀನ್, ಮುಂದಿನ ದಿನಗಳ ಭರವಸೆಯ ನಟನಾಗುವದ್ರಲ್ಲಿ ನೋ ಡೌಟ್. ನವೀನ್‌ಗೆ ನಾಯಕಿಯಾಗಿ ಸೋನು ಗೌಡ ಸಾಥ್ ನೀಡಿದ್ದಾರೆ.

ಗುಳ್ಟು ಚಿತ್ರದ ಮತ್ತೊಂದು ಸ್ಪೆಷಲ್ ಸಂಗತಿ ಅಂದ್ರೆ ಅದು ನಿರ್ದೇಶಕ ಪವನ್ ಕುಮಾರ್. ಹೌದು ಲೂಸಿಯಾ ಡೈರೆಕ್ಟರ್ ಪವನ್ ಗುಳ್ಟುಗೆ ಆಸ್ ಎ ಆಕ್ಟರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲೊಂದು ಇಂಟ್ರೆಸ್ಟಿಂಗ್ ಪಾತ್ರವನ್ನ ನಿರ್ವಹಿಸಿದ್ದಾರೆ. ಅವಿನಾಶ್ ಪೊಲೀಸ್ ಆಫೀಸರ್ ಪಾತ್ರದಲ್ಲ್ಲಿ ಇದ್ದರೆ, ರಂಗಾಯಣ್ ರಘು ಪೊಲಿಟಿಶಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಅಮಿತ್ ಆನಂದ್ ಮ್ಯೂಸಿಕ್ ಸಿನಿಮಾದ ಮತ್ತೊಂದು ಹೈಲೆಟ್ ಆಗುವ ಎಲ್ಲ ಲಕ್ಷಣಗಳು, ಟ್ರೇಲರ್‌ನಲ್ಲಿ ಕಂಡು ಬರ್ತಿ ದೆ. ಗ್ರಾಫಿಕ್ಸ್ ತಂತ್ರಜ್ಞಾನವನ್ನೂ ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳಲಾಗಿದೆ.

ಇನ್ನು, ಶಾಂತಿ ಸಾಗರ್ ಚಿತ್ರದ ಛಾಯಾಗ್ರಾಹಕನಾದ್ರೆ, ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಚಿತ್ರದ ಪ್ರೊಡ್ಯೂಸರ್ಸ್ದ. ಅದೇನೆ ಇರ್ಲಿತ.. ಸದ್ಯ ಸಿಕ್ಕಾಪಟ್ಟೆ ಕೂತುಹಲವನ್ನ ಹೆಚ್ಚಿಸಿರುವ, ನಿರೀಕ್ಷೆಯನ್ನ ಜಾಸ್ತಿಯನ್ನಾಗಿಸಿರುವ, ಭರವಸೆ ಮೂಡಿಸಿರುವ ಗುಳ್ಟು ನೋಡಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ. ಯಾಕಂದ್ರೆ ಯಾವ್ದೇ ಕಟ್ ಇಲ್ಲದೇ ಸೆನ್ಸಾರ್ ಅಂಗಳದಲ್ಲಿ ಯು/ಎ ಪ್ರಮಾಣ ಪತ್ರವನ್ನ ಪಡೆದುಕೊಂಡಿರುವ ಗುಳ್ಟು ಇದೇ ಮಾರ್ಚ್ ೩೦ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here