ಟೀಸರ್ ಮೂಲಕ ದಾಖಲೆ ಬರೆದ ದಿ ವಿಲನ್ – ಇದು ಪ್ರೇಮ್‌ ಕೈಚಳಕ

0
801

ಟೀಸರ್ ಯಾವಾಗ..? ಟೀಸರ್ ಯಾವಾಗ.. ? ಅಂತ ಕಂಡಲ್ಲಿ ಗುಂಡು ಅನ್ನುವಂತೆ, ಪ್ರೇಮ್ ಕಂಡಲ್ಲೆಲ್ಲಾ ಪ್ರಶ್ನೆ ಕೇಳ್ತಿದ್ದ ಫ್ಯಾನ್ಸ್ ಮುಂದೆ ಪ್ರೇಮ್, ದಿ ವಿಲನ್ ಟೀಸರ್ ಇಟ್ಟಿದ್ದಾರೆ. ಅದು. ಒಂದಲ್ಲ.. ಎರಡೆರಡು. ಹೌದು, ಎರಡೆರಡು ಟೀಸರ್ ಪ್ರೇಕ್ಷಕರ ಮಡಿಲಿಗೆ ಹಾಕಿರುವ ಪ್ರೇಮ್, ಅಭಿಮಾನಿಗಳ ಅಭಿಮಾನ ದುಪ್ಪಟ್ಟುಗೊಳಿಸಿದ್ದಾರೆ. ಚಿತ್ರರಂಗದ ಹೆಮ್ಮೆಯನ್ನೂ ಹೆಚ್ಚಿಸಿದ್ದಾರೆ. ಯಸ್. ದಿ ವಿಲನ್ ಟೀಸರ್ ಬರೀ ಕನ್ನಡ ಕಲಾಭಿಮಾನಿಗಳ ಮನಸನ್ನಷ್ಟೇ ಕ್ಲೀನ್ ಬೋಲ್ಡ್ ಮಾಡಿಲ್ಲ. ಬದ್ಲಿಗೆ ಗಾಂಧಿನಗರದವ್ರ ಮನಸನ್ನೂ ಕೊಳ್ಳೆ ಹೊಡೆದಿದೆ.

ಇನ್ ಫ್ಯಾಕ್ಟ್ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ ಅನ್ಯ ಭಾಷೆಯ ಚಿತ್ರರಂಗದವರು ದಿ ವಿಲನ್‌ಗೆ ಧೀರ್ಘ ದಂಡ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಹೌದು. ದಿ ವಿಲನ್ ಮೋಡಿಯಲ್ಲಿ ಚಿತ್ರರಂಗ ಸಿಲುಕಿದೆ. ಒಂಧರ್ಥದಲ್ಲಿ ದಿ ವಿಲನ್ ಜ್ವರದಿಂದ ನರಳುತ್ತಿದೆ ಚಿತ್ರರಂಗ ಅಂದ್ರೆ ಅದು ಅತಿಶಯೋಕ್ತಿಯಲ್ಲ. ಕೆಚ್ಚದೆಯ ಕಿಚ್ಚನ ತಾಖತ್ತು.. ಶಿವಣ್ಣ ಗತ್ತು.. ಎರಡಕ್ಕೂ ಮನ ಸೋತಿರುವ ಸಿನಿರಂಗ ಸಾಲು ಸಾಲಾಗಿ ಚಿತ್ರತಂಡಕ್ಕೆ ಶುಭ ಕೋರುತ್ತಿದೆ. ತಮಗಾದ ಖುಷಿಯನ್ನ ಹಂಚಿಕೊಳ್ಳುತ್ತಿದೆ. ದಿ ವಿಲನ್ ಕಿಕ್ಕಿಗೆ ನೀನಾಸಂ ಸತೀಶ್, ತೇಲುತ್ತಿದ್ದಾರೆ. ಇದು. ಸತೀಶ್ ಟ್ವಿಟ್ ನೋಡಿದ್ರೆ ಗೊತ್ತಾಗುತ್ತೆ. ಚಿತ್ರದ ಮೇಲಿನ ತಮಗಿರುವ ನಿರೀಕ್ಷೆಯನ್ನ ಇಲ್ಲಿ ವ್ಯಕ್ತಪಡಿಸಿರುವವ್ರಲ್ಲಿ ಬರೀ ಸತೀಶ್ ಅಷ್ಟೇ ಅಲ್ಲ ಪವನ್ ಒಡೆಯರ್ ಕೂಡಾ ಇದ್ದಾರೆ. ಕಿರಿಕ್ ಪಾರ್ಟಿಯ ಡೈರೆಕ್ಟರ್ ರಿಶಭ್ ಕೂಡಾ, ದಿ ವಿಲನ್‌ಗಳಿಗೆ ಮನಸೋತಿದ್ದಾರೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇನ್ನು ಪೈಲ್ವಾನ್ ಕೃಷ್ಣ.. ದಿ ವಿಲನ್ ಸುನಾಮಿನಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ. ಬರೀ ಇವ್ರಷ್ಟೇ ಅಲ್ಲ.. ಹರಿಪ್ರಿಯಾ. ಪ್ರಿಯಾಮಣಿ. ಆಶಿಕಾ ರಂಗನಾಥ್ ಹೀಗೆ ಎಲ್ಲರದ್ದೂ ಒಂದೇ ಕನವರಿಕೆ ಅದೇ ದಿ ವಿಲನ್. ಅಂದ ಹಾಗೇ ದಿ ವಿಲನ್ ಜಪ ಮಾಡ್ತಿರೋದು ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಹಿಂದಿ ಉದ್ಯಮನೂ ದಿ ವಿಲನ್ ನೋಡಿ ಕಕ್ಕಾಬಿಕ್ಕಿಯಾಗಿದೆ. ಯಸ್, ದಿ ವಿಲನ್ ಚಿತ್ರದ ಸುದೀಪ ಟೀಸರ್‌ಗೆ.. ಕಿಚ್ಚನ ಖಾಸ್ ದೋಸ್ತ್ & ಕೋಟಿಗೊಬ್ಬ 3ಯ ಕೋ ಆಕ್ಟರ್ ಅಫ್ತಾಭ್ ಶಿವದಾಸಿನಿನೂ ಮನಸೋತಿದ್ದಾರೆ.

ಟ್ವಿಟರ್‌ನಲ್ಲಿ ಸಿನಿಮಾ ಬೇಗ ತೋರಿಸುವಂತೆ ಮನವಿ ಮಾಡಿದ್ದಾರೆ. ಇನ್ನು. ಸುದೀಪರನ್ನ ಹಿಂದಿ ರಂಗಕ್ಕೆ ಕರೆದೊಯ್ದ ರಾಮ್ ಗೋಪಾಲ್ ವರ್ಮಾ ಕೂಡಾ.. ದಿ ವಿಲನ್ ಹಾವಳಿ ಕಂಡು ಉಘೇ ಉಘೇ ಅಂದಿದ್ದಾರೆ. ಟೀಸರ್‌ನ್ನ ಭಿನ್ನವಾಗಿ ತೋರಿಸಿದ ಐಡಿಯಾವನ್ನ ಮೆಚ್ಚಿಕೊಂಡಿದ್ದಾರೆ. ಬರೀ ಇವ್ರಷ್ಟೇ ಅಲ್ಲ.. ಹೆಬ್ಬುಲಿಯ ಖಳನಾಯಕ, ಪೈಲ್ವಾನ್ ಸಹನಟ ಕಬೀರ್ ದುಹಾನ್ ಸಿಂಗ್ ಕೂಡಾ ದಿ ವಿಲನ್‌ಗೆ ಬಹುಪರಾಕ್ ಹಾಕಿದ್ದಾರೆ.

LEAVE A REPLY

Please enter your comment!
Please enter your name here