ಜುಲೈ 29ಕ್ಕೆ ಫಿಕ್ಸ್ ಆಗಿದೆ ಕುರುಕ್ಷೇತ್ರದ ಆಡಿಯೋ ರಿಲೀಸ್ ಡೇಟ್

0
156

ಕುರುಕ್ಷೇತ್ರ.. ದರ್ಶನ್ ಅಭಿನಯದ ಮಹತ್ವಕಾಂಕ್ಷೆಯ ಸಿನಿಮಾ. ಆರಂಭದಿಂದ್ಲೂ ಕೂತುಹಲ, ಕೌತುಕವನ್ನ ಇಮ್ಮಡಿಗೊಳಿಸುತ್ತಾನೇ ಬರ್ತಿ ರುವ ಕುರುಕ್ಷೇತ್ರದ ಹಾಡುಗಳ ಹಬ್ಬ ಯಾವಾಗ.. ಹೀಗೊಂದು ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಾನೇ ಇತ್ತು. ಇದಕ್ಕೆ ತಕ್ಕಂತೆ.. ಚಿತ್ರತಂಡ, ಆಡಿಯೋ ಬಿಡುಗಡೆಯ ದಿನವನ್ನ ಫಿಕ್ಸ್ ಮಾಡಿ ಮತ್ತೇ ಮುಂದೂಡ್ತಾನೇ ಬರ್ತಾ ಇತ್ತು. ಈ ಮೂಲಕ.. ಡಿ ಬಳಗದಲ್ಲೊಂದು ಸಣ್ಣ ಅಸಮಾಧಾನಕ್ಕೂ ಕಾರಣವಾಗಿತ್ತು. ಬಟ್, ಇದೀಗ ಇದೇ ಅಸಮಾಧಾನ ಸಮಾಧಾನ ರೂಪದಲ್ಲಿ ಬದಲಾಗುತ್ತಿದೆ. ಸಂಭ್ರಮಕ್ಕೂ ಕಾರಣವಾಗ್ತಿದೆ. ಕಾರಣ.. ಕುರುಕ್ಷೇತ್ರದ ಹಾಡುಗಳನ್ನ ಕೊನೆಗೂ ಕನ್ನಡ ಕಲಾಭಿಮಾನಿಗಳ ಮಡಿಲಿಗೆ ಹಾಕಲು ಚಿತ್ರತಂಡ ನಿರ್ಧರಿಸಿದೆ. ಯಸ್, ಕುರುಕ್ಷೇತ್ರದ ಆಡಿಯೋ ಡೇಟ್ ಫೈನಲಿ ಫಿಕ್ಸಾಗಿದೆ.

ಖುದ್ದು ಚಿತ್ರತಂಡವೇ ಹಾಡುಗಳ ಹಬ್ಬದ ದಿನದ ಬಗ್ಗೆ ಮಾಹಿತಿ ನೀಡಿದೆ. ಆಡಿಯೋವನ್ನ.. ಇದೇ ಜುಲೈ ೨೯ಕ್ಕೆ ಬಿಡುಗಡೆ ಮಾಡುವ ಮನಸು ಮಾಡಿದೆ. ಅಂದ ಹಾಗೇ ಕುರುಕ್ಷೇತ್ರದ ಹಾಡುಗಳನ್ನ ಬಿಡುಗಡೆ ಮಾಡಲು ಮುಂದಾಗಿರುವ ಕುರುಕ್ಷೇತ್ರದ ಬಳಗ, ಆಡಿಯೋವನ್ನ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಾ, ಹೀಗೊಂದು ಪ್ರಶ್ನೆಗುತ್ತರ ಸದ್ಯಕ್ಕಿಲ್ಲ. ಹೌದು, ನಿಮಗೆ ಗೊತ್ತಿರಲಿ ಹಿಂದೆ ಸುದ್ದಿಯಾದಂತೆ ಸದ್ದು ಮಾಡಿದಂತೆ ಕುರುಕ್ಷೇತ್ರದ ಆಡಿಯೋವನ್ನ ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಜನೆ ಹಾಗೂ ಯೋಚನೆ ಮುನಿರತ್ನ & ಟೀಮ್‌ಗಿತ್ತು. ಹಾಗಾಗಿ, ಕುರುಕ್ಷೇತ್ರದ ಆಡಿಯೋ ಬಿಡುಗಡೆ ಸಮಾರಂಭದ ಬಗ್ಗೆ ಸಣ್ಣದೊಂದು ಕೂತುಹಲ ಗಾಂಧಿನಗರಕ್ಕಿದೆ. ಅಭಿಮಾನಿಗಳಿಗೂ ಇದೆ.

LEAVE A REPLY

Please enter your comment!
Please enter your name here