ಜಾನಿ ಜಾನಿ ಯೆಸ್ ಪಪ್ಪನಿಗೆ ಪವರ್ ಫುಲ್ ವಾಯ್ಸ್ – ನಿರೀಕ್ಷೆ ಹೆಚ್ಚಿಸುತ್ತಿದೆ ಪ್ರೀತಂ ಸಿನಿಮಾ

0
430

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ರೆ ಆ ಸಾಂಗ್ ಕೂಡ ಸೂಪರ್ ಹಿಟ್ ಆಗುತ್ತೆ ಎನ್ನೋದು ಟ್ರೆಂಡ್. ಹೌದು, ಅಪ್ಪು ಧ್ವನಿಯಲ್ಲಿ ಹಾಡೊಂದು ಬಂದ್ರೆ, ಆ ಹಾಡು ಸೂಪರ್ ಹಿಟ್ ಆಗುತ್ತೆ ಎಂಬುದು ಪಕ್ಕಾ. ಈಗಾಗಲೇ ಸುಮಾರು 50ಕ್ಕೂ ಅಧಿಕ ಹಾಡುಗಳನ್ನ ಹಾಡಿರುವ ಅಪ್ಪು ಬತ್ತಳಿಕೆಯಿಂದ ಇನ್ನೊಂದು ಹೊಸ ಸಾಂಗ್ ಹೊರಬಂದಿದೆ. ದುನಿಯಾ ವಿಜಯ್ ಅಭಿನಯದ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಟೈಟಲ್ ಹಾಡಿಗೆ ಪುನೀತ್ ಧ್ವನಿಯಾಗಿದ್ದು, ಈ ಹಾಡು ಈಗ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದೆ.

ಪುನೀತ್ ಹಾಗೂ ದುನಿಯಾ ವಿಜಿ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದರು. ಅಪ್ಪು ಇದೇ ಮೊದಲ ಬಾರಿಗೆ ವಿಜಿ ಅವರ ಸಿನಿಮಾ ಹಾಡನ್ನ ಹಾಡಿದ್ದಾರೆ. ‘ಜಾನಿ’ ಚಿತ್ರದಲ್ಲಿ ಟೈಟಲ್ ಹಾಡು ಹಿಟ್ ಆದಂತೇ, ಈ ಚಿತ್ರದ ಟೈಟಲ್ ಹಾಡು ಕೂಡ ಹಿಟ್ ಆಗುವ ಎಲ್ಲ ಲಕ್ಷಣವೂ ಇದೆ.
‘ಅಂಜೋದಿಲ್ಲ ಗಿಂಜೋದಲ್ಲಿ ಮುಖ ಮೂತಿ ಮುಕಬಿಲ್ಲಾ’ ಎಂದು ಆರಂಭವಾಗುವ ಈ ಹಾಡಿಗೆ ‘ಕಿರಿಕ್ ಪಾರ್ಟಿ’ ಖ್ಯಾತಿಯ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಿದ್ದಾರೆ. ಕಲರ್ ಸೆಟ್ ನಲ್ಲಿ ಈ ಟೈಟಲ್ ಹಾಡನ್ನ ಚಿತ್ರೀಕರಿಸಿದ್ದು, ಅಷ್ಟೇ ಕಲರ್ ಫುಲ್ಲಾಗಿ ಮೂಡಿ ಬಂದಿದೆ.

ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿದ್ದು, ದುನಿಯಾ ವಿಜಯ್, ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಈಗ ಆಡಿಯೋ ಅಬ್ಬರ ಮಾಡುತ್ತಿದೆ.

LEAVE A REPLY

Please enter your comment!
Please enter your name here