ಚುನಾವಣೆ ಪ್ರಚಾರಕ್ಕೆ ಇಳಿದ ಸೆಂಚುರಿ ಗೌಡ್ರು

0
328

ಕರ್ನಾಟಕ ವಿಧಾನಸಭಾ ಚುನಾವಣಾ ಹತ್ತಿರ ಬರ್ತಿ್ದ್ದಂತೆ, ಸಿನಿತಾರೆಯರು.. ಪ್ರಚಾರದ ಕಣದಲ್ಲಿ ಕಾಣಸಿಗ್ತಿದ್ದಾರೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಿದ್ದಾರೆ. ಇದೀಗ ಇದೇ ಸಾಲಿಗೆ ತಿಥಿ ಖ್ಯಾತಿಯ ಸೆಂಚುರಿ ಗೌಡ ಸೇರಿಕೊಂಡಿದ್ದಾರೆ. ಯಸ್, ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಸೆಂಚುರಿ ಗೌಡ ಚುನಾವಣಾ ಪ್ರಚಾರ ಮಾಡಿದ್ದಾರೆ. ಹಸಿರು ಟವೆಲ್ ಹಾಕಿ ಸೆಂಚುರಿ ಗೌಡ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ತಮ್ಮ ಬೆಂಬಲ ನೀಡಿದ್ದಾರೆ. ಅಂದಹಾಗೆ, ದರ್ಶನ್ ಪುಟ್ಟಣ್ಣಯ್ಯ ದಿವಂಗತ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರನಾಗಿದ್ದು, ಈ ಬಾರಿ ಅವರು ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಆಗಿದ್ದಾರೆ. ಮೇಲುಕೋಟೆಯ ವದೆ ಸಮುದ್ರ ಗ್ರಾಮದಲ್ಲಿ ಸೆಂಚುರಿ ಗೌಡ ”ಪುಟ್ಟಣ್ಣಯ್ಯನ ಮಗನನ್ನು ಗೆಲ್ಲಿಸಿ, ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here