ಚಾಲೆಂಜಿಂಗ್ ಸ್ಟಾರ್ ಕಣ್ಣು ನೋವಿಗೆ ಕಾರಣವಾದ ಕುರುಕ್ಷೇತ್ರ

0
231

ಅಭಿಮಾನಿಗಳ ಅಭಿಮಾನಿ. ಕನ್ನಡ ಚಿತ್ರರಂಗದ ಚಿನ್ನದ ಗಣಿಯಾಗಿರುವ, ಸಾರಥಿ ದರ್ಶನ್.. ನರಳಾಡುತ್ತಿದ್ದಾರೆ. ಯಸ್, ದರ್ಶನ್‌ಗೆ ಇತ್ತೀಚಿಗೆ ಕಣ್ಣಿನ ಸಮಸ್ಯೆ ಎದುರಾಗಿದೆ. ಇದೇ ಸಮಸ್ಯೆ.. ಮೊನ್ನೆ ದರ್ಶನ್ ಕಣ್ಣಲ್ಲಿ ನೀರು ತರಿಸಿದೆ. ಹೀಗಂತ ನಾವ್ ಹೇಳ್ತಿಲ್ಲ. ಬದ್ಲಿಗೆ ರಾಜರಾಜೇಶ್ವರಿನಗರದಲ್ಲಿ ಕೇಳಿ ಬರ್ತಿರುವ ಮಾತಿದು. ಹೌದು, ಮೊನ್ನೆ.. ದರ್ಶನ್ ಎಡಗಣ್ಣಿನಲ್ಲಿ ನೋವು ಕಾಣಿಸಿಕೊಂಡಿದೆ. ಎಷ್ಟರ ಮಟ್ಟಿಗೆ ಅಂದ್ರೆ ನೋವಿನ ಭಾದೆ ತಾಳಲಾರದ ದಚ್ಚು, ಆಸ್ಪತ್ರೆಗೂ ಭೇಟಿ ನೀಡಿದ್ದಾರೆ. ಕಣ್ಣಿನ ಚೆಕಪ್ ಮಾಡಿಸಿದ್ದಾರೆ. ಹೀಗಂತ ಹರಡಿರುವ ಸುದ್ದಿ, ಸದ್ಯ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಅಂದ ಹಾಗೇ ಚಾಲೆಂಜಿಂಗ್ ಸ್ಟಾರ್ ಅನುಭವಿಸುತ್ತಿರುವ ಕಷ್ಟಕ್ಕೆ ಏನ್ ಕಾರಣ, ಹೀಗೊಂದು ಪ್ರಶ್ನೆಗುತ್ತರ ಹುಡುಕಲು ಮುಂದಾದಾಗ ಕಾಣುವುದೇ ಕುರುಕ್ಷೇತ್ರ. ನಿಮಗೆ ಗೊತ್ತಿದ್ದಂತೆ ಕುರುಕ್ಷೇತ್ರಕ್ಕಾಗಿ ದರ್ಶನ್ ಹಗಲು ಇರುಳು ಅನ್ನದೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಿದ್ದೆಗೆಟ್ಟಿದ್ದಾರೆ. ಧೂಳನ್ನೂ ಲೆಕ್ಕಿಸ್ದೇ ಭಾರಿ ತೂಕವಿರುವ ಕಾಸ್ಟೂಮ್‌ಗಳನ್ನ ತೊಟ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಇದೇ ದರ್ಶನ್ ಕಣ್ಣಿಗೆ ಮಾರಕವಾಗಿ ಪರಿಣಮಿಸಿದೆ ಅನ್ನುವ ಸುದ್ದಿ ಇದೀಗ ಕೇಳಿ ಬರ್ತಿದೆ. ಇದೇ ಸುದ್ದಿಗೆ ಸಾಕ್ಷಿ ಅನ್ನುವಂತೆ ಇತ್ತೀಚಿಗೆ ದರ್ಶನ್, ಚಿತ್ರರಂಗ ಹಮ್ಮಿಕೊಂಡಿದ್ದ ಸಿ.ಎಂ. ಕುಮಾರಸ್ವಾಮಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದಾಗ, ಎಡಕಣ್ಣು ಕೆಂಪಾಗಿ ಕಂಡು ಬಂದಿತ್ತು. ಹಾಗಾಗಿ, ದರ್ಶನ್ ಕಣ್ಣು ನಿಜಕ್ಕೂ ತೊಂದರೆಗೆ ಒಳಗಾಗಿದೆಯಾ ಅನ್ನುವ ಸುಧೀರ್ಘ ಚರ್ಚೆಯನ್ನ ಇದೀಗ ಅಭಿಮಾನಿಗಳು ಮಾಡ್ತಿದ್ದಾರೆ. ಅದೇನೆ ಇರ್ಲಿ, ಸದ್ಯ ಹರಿದಾಡ್ತಿರುವ ಸುದ್ದಿ ನಿಜವೇ ಆದಲ್ಲಿ, ದರ್ಶನ್‌ಗೆ ಕಾಡ್ತಿರುವ ಕಣ್ಣಿನ ಸಮಸ್ಯೆ ಆದಷ್ಟು ಬೇಗನೇ ಗುಣವಾಗಲಿ ಅನ್ನೋದೇ ನಮ್ಮ ಆಶಯ.

LEAVE A REPLY

Please enter your comment!
Please enter your name here