ಚಾರ್ಲಿ ಶಿವು ಇನ್ನಿಲ್ಲ – ಸಣ್ಣ ವಯಸ್ಸಿನಲ್ಲೆ ಆರಿಹೋಯಿತು ಬೆಳಗಬೇಕಾಗಿದ್ದ ದೀಪ

0
376

ಕನ್ನಡ ಚಿತ್ರರಂಗದ ಪ್ರತಿಭಾವಂತ, ಖ್ಯಾತಿಯ ಉತ್ತುಂಗಕ್ಕೇರಬೇಕಿದ್ದ ಶಿವ ಇನ್ನಿಲ್ಲ. ಹೌದು, ಚಾರ್ಲಿ ಮೂಲಕ ಚಿತ್ರರಂಗದಲ್ಲಿ ಚಾಪು ಮೂಡಿಸಿದ ಶಿವ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಶಿವ ದಾಖಲಾಗಿದ್ದರು. ಇಂದು ಬೆಳ್ಳಗೆ ವಿಧಿಯಾಟ ಬೇರೆಯದ್ದಾಗಿತ್ತು. ಲೀವರ್ ಡ್ಯಾಮೇಜ್ ಮತ್ತು ಹಾರ್ಟ್ ಅಟ್ಯಾಕ್ ಶಿವ ಪ್ರಾಣ ಪಕ್ಷಿಯನ್ನ ಕಸಿಯಿತು. ಶಿವ, ಯೋಗರಾಜ್ ಭಟ್ ಮತ್ತು ಸೂರಿ ಗಡಿಯಲ್ಲಿ ಪಳಗಿದ್ದವರಾಗಿದ್ದರು. ಇಂತಿ ನಿನ್ನ ಪ್ರೀತಿಯ, ಜಂಗ್ಲಿ, ಜಾಕಿ ಸೇರಿ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲ್ಸ ಮಾಡಿದ್ದರು. ಚಾರ್ಲಿ ಮೂಲಕ ನಿರ್ದೇಶಕರೂ ಆಗಿದ್ದರು. ಮಾಲ್ಗುಡಿ ಸ್ಟೇಶನ್ ಅನ್ನುವ ಸಿನಿಮಾ ನಿರ್ದೇಶನನೂ ಮಾಡ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕು. ಹೆಸರು ಮಾಡಬೇಕು ಎಂದು ಕನಸು ಕಂಡಿದ್ದ ಬೆಳಗಾವಿ ಮೂಲದ ಶಿವ ಕನಸು ನನಸಾಗಲೇ ಇಲ್ಲ.

LEAVE A REPLY

Please enter your comment!
Please enter your name here