ಚಂಬಲ್ ಕಣಿವೆಯ ಹಾಡಿಗೆ ಶ್ರೀಮುರಳಿಯ ಸಾಥ್ – ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಅಭಿನಯ ಚತುರ

0
27

ಚಂಬಲ್.. ನೀನಾಸಂ ಸತೀಶ್ ಅಭಿನಯದ ಸಿನಿಮಾ. ಆಲ್ ರೆಡಿ ಸಿಕ್ಕಾಪಟ್ಟೆ ಭರವಸೆಯನ್ನ ಹುಟ್ಟು ಹಾಕಿರುವ ಚಂಬಲ್, ಶ್ರೀಮುರಳಿಗೂ ಇಷ್ಟವಾಗಿದೆ. ಹಾಗಾಗೇ, ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಲು ಮನಪೂರ್ವಕವಾಗಿ ಒಪ್ಪಿಗೆ ನೀಡಿದ್ದ ಶ್ರೀಮುರಳಿ, ಹಾಡು ಬಿಡುಗಡೆಗೊಳಿಸಿದ್ರು. ಚಿತ್ರತಂಡಕ್ಕೆ ಶುಭ ಕೋರಿದ್ರು. ಸಿನಿಮಾ ಗೆಲ್ಲುವಂತಾಗಲಿ ಅಂಥ ಹರಿಸಿದ್ರು. ಅಂದ ಹಾಗೇ ಚಂಬಲ್ ಹಾಡನ್ನ, ಶ್ರೀಮುರಳಿನಿಂದನೇ ಬಿಡುಗಡೆಗೊಳಿಸಲು ಇನ್ನೊಂದು ಕಾರಣನೂ ಇದೆ. ಅದುವೇ, ಶ್ರೀಮುರಳಿಯ ಕೈಗುಣ. ಹೌದು, ಅಸಲಿಗೆ ಅಯೋಗ್ಯ ಸಿನಿಮಾದ ಹಾಡನ್ನ, ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಹಾಡು ಬಹುದೊಡ್ಡ ಹಿಟ್ ಕೂಡಾ ಆಯ್ತು. ಸಿನಿಮಾನೂ ಗೆಲ್ತು. ಇದೇ ಚಂಬಲ್ ಚಿತ್ರದ ಹಾಡನ್ನ ಶ್ರೀಮುರಳಿ ಬಿಡುಗಡೆ ಮಾಡಲು ಇನ್ನೊಂದು ಕಾರಣ.ಇನ್ನೂ ನೀನಾಸಂ ಸತೀಶ್‌ಗೆ ಚಂಬಲ್ ತುಂಬಾನೇ ಸ್ಪೆಷಲ್ ಸಿನಿಮಾ. ಹಿಂದೆಂದೂ ಕಾಣದ ಅವತಾರದಲ್ಲಿ ಸತೀಶ್ ಇಲ್ಲಿ ಕಾಣಸಿಗಲಿದ್ದಾರೆ. ಕಳೆದ ವರ್ಷ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಸತೀಶ್, ಚಂಬಲ್ ಚಮತ್ಕಾರ ಮಾಡಿಯೇ ಮಾಡುತ್ತೆ ಅನ್ನುವ ವಿಶ್ವಾಸದಲ್ಲಿದ್ದಾರೆ. ಜೇಕಬ್ ವರ್ಗಿಸ್ ಚಿತ್ರದ ನಿರ್ದೇಶಕ.

ಪೃಥ್ವಿ, ಸವಾರಿದಂಥ ಸದಭಿರುಚಿ ಸಿನಿಮಾಗಳನ್ನ, ಸಿನಿಪ್ರಿಯರಿಗೆ ಕೊಟ್ಟಿರುವ ಜೇಕಬ್.. ಮಾಸ್ ಹಾಡು.. ಎಲ್ಲರ ಮೂಡು ಹೆಚ್ಚಿಸುವಂತಿದೆ ಅಂದರು. ಇಷ್ಟೇ ಅಲ್ಲ ಹಾಡು ಬಿಡುಗಡೆ ಮಾಡಿದ ಶ್ರೀಮುರಳಿಗೂ ಥ್ಯಾಂಕ್ಸ್ ಅಂದ ನಿರ್ದೇಶಕ ಜೇಕಬ್ ವರ್ಗಿಸ್, ಅಭಿಮಾನಿಗಳಲ್ಲಿ ಹರಸಿ, ಹಾರೈಸಿ ಅನ್ನುವ ಮನವಿಯನ್ನೂ ಮಾಡಿದ್ರು. ಬೇಟೆಗೆ ನಿಂತ್ರೆ ಎಲ್ಲ ಪುಡಿ ಪುಡಿ ಅಂಥಾನೇ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುದ್ರತಾಂಡವವಾಡ್ತಿರುವ ಚಂಬಲ್‌ನ ಇದೇ ಹಾಡಿಗೆ ಪ್ರಭು ಎಸ್.ಆರ್. ಸಂಗೀತ ನಿರ್ದೇಶನವಿದೆ. ಇನ್ನೂ ಕೀರ್ತಿ ಹಾಗೂ ಲೂಯಿಸ್ ಕಿಂಗ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನೂ ಚಂಬಲ್‌ನಲ್ಲಿ ಸತೀಶ್‌ಗೆ ನಾಯಕಿಯಾಗಿ ಸೋನುಗೌಡ ಕಾಣಸಿಗಲಿದ್ದಾರೆ. ಕಿಶೋರ್, ಅಚ್ಯುತ್, ಸೇರಿ ಅನೇಕ ಪ್ರತಿಭಾವಂತರ ದಂಡು ಚಿತ್ರದಲ್ಲಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಚಂಬಲ್‌ಗಿದೆ. ಸದ್ಯ ಮೊದಲ ಹಾಡಿನ ಮೂಲಕ ಸದ್ದು ಮಾಡಲು ಶುರುವಿಟ್ಟುಕೊಂಡಿರುವ ಚಂಬಲ್, ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here