ಚಂಬಲ್‌ ಕಣಿವೆಯಲ್ಲಿ ಸತೀಶನ ಆರ್ಭಟ – ಬ್ಯಾಕ್ ಟು ಬ್ಯಾಕ್ ಸಕ್ಸಸ್ನಲ್ಲಿ ಅಭಿನಯ ಚತುರ

0
187

ಪ್ರಾಮಾಣಿಕ ದಕ್ಷ ಅಧಿಕಾರಿ ಡಿ.ಕೆ.ರವಿಯವ್ರ ಜೀವನ ಕಥೆನಾ ಅನ್ನುವ ಹಣೆಪಟ್ಟಿಯೊಂದಿಗೆ ಬಂದ ಸಿನಿಮಾ ಚಂಬಲ್. ಬಿಡುಗಡೆಗೂ ಮುನ್ನ ಅತೀವ ಕೂತುಹಲ ಕೆರಳಿಸಿದ್ದ ಇದೇ ಚಂಬಲ್‌ನ ಕಥೆ ಕೊನೆಗೂ ಅನಾವರಣಗೊಂಡಿದೆ. ಬಯಲಾಗಿದೆ. ಅಷ್ಟಕ್ಕೂ ಚಂಬಲ್‌ನಲ್ಲಿ ನಿಜಕ್ಕೂ ಡಿ.ಕೆ.ರವಿಯ ನೆರಳು ಇದೆಯಾ ಹೀಗೊಂದು ಪ್ರಶ್ನೆಗೆ ಹೌದು ಅನ್ನಲೇಬೇಕು. ಹೌದು, ಚಂಬಲ್ ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯ ಸುತ್ತ ಸುತ್ತುವ ಸಿನಿಮಾ. ಕಡು ಬಡತನದಲ್ಲೇ ಬಾಲ್ಯವನ್ನ ಕಳೆದ ನಾಯಕ ಸುಭಾಶ್ ಅಲಿಯಾಸ್‌ ಸತೀಶ್ ಗೆ ಹಣ ಮುಖ್ಯವಲ್ಲ. ಸತ್ಯವೇ ನನ್ನ ತಾಯಿ ತಂದೆ ಅನ್ನುವ ಮಾತಿನಲ್ಲಿ ನಂಬಿಕೆ ಇಡುವ ಇದೇ ಸುಭಾಶ್, ಸರ್ಕಾರಿ ಕೆಲ್ಸವನ್ನ ದೇವರ ಕೆಲ್ಸವಂತನೇ ಭಾವಿಸುರುತ್ತಾನೆ. ಯಾರ ಒತ್ತಡಕ್ಕೂ ಮಣಿಯದೇ ಭ್ರಷ್ಟರಿಗೆ ಸಿಂಹಸ್ವಪ್ನರಾಗುವ ಇದೇ ಸುಭಾಶ್, ರಾಜಕೀಯದವ್ರ ಭ್ರಷ್ಟತನದ ಮಟ್ಟ ಹಾಕುತ್ತಾನೇ. ಭ್ರಷ್ಟ ಸಮಾಜದ ವಿರುದ್ಧ ಸಮರ ಸಾರುತ್ತಾನೆ. ಕೋಲಾರದ ಮರಳು ಮಾಫಿಯಾ ವಿರುದ್ಧನೂ ಗುಡುಗುತ್ತಾನೆ. ಇನ್ನೂ ನಂತರ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾದಾಗ್ಲೂ ಅಲ್ಲೂ ಇದೇ ಸುಭಾಶ್ ಎಂಬ ಹುಲಿ ಅಬ್ಬರಿಸುತ್ತೆ. ಹೀಗೆ ಭ್ರಷ್ಟರ ವಿರುದ್ಧ ಸುಭಾಶ್ ಸಮರ ಸಾರಿದ ಹೊತ್ತಿನಲ್ಲೇ, ಸಮಾಜಘಾತುಕರ ಸಂಚಿಗೆ ಸುಭಾಶ್ ಉಸಿರು ಚೆಲ್ಲುತ್ತಾನೆ.

ಮುಂದೇನಾಯ್ತು. ಸುಭಾಶ್‌ದು ಆತ್ಮಹತ್ಯೆ ಅಂಥ ಬಿಂಬಿಸಿದ್ದಾದ್ರೂ ಹೇಗೆ.. ಸತ್ಯ ಹೊರ ಬರುತ್ತಾ.. ಹೀಗೆ ನಾನಾ ಪ್ರಶ್ನೆಗಳಿಗೆ ನೀವು ಚಿತ್ರಮಂದಿರದಲ್ಲೇ ಉತ್ತರ ಪಡಿಬೇಕು. ಇಲ್ಲಿ ಚಿತ್ರದಲ್ಲಿ ಎಲ್ಲೂ ಡಿ.ಕೆ.ರವಿ ಹೆಸರನ್ನ ಬಳಸಿಲ್ಲ. ಆದ್ರೆ ಸಿನಿಮಾ ನೋಡ್ತಿದ್ದಾಗ ನಿಮಗೆ ಡಿ.ಕೆ.ರವಿ ಅಡಿಗಡಿಗೂ ನೆನಪಾಗ್ತಾರೆ. ಅಷ್ಟರ ಮಟ್ಟಿಗೆ ನಿರ್ದೇಶಕ ಜೇಕಬ್ ವರ್ಗಿಸ್ ಚಿತ್ರದ ಕಥೆಯನ್ನ ಪರಿಣಾಮಕಾರಿಯಾಗಿ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ಧಸೂತ್ರಗಳಿಗೆ ಜೋತುಬೀಳದೇ ತಮ್ಮದೇ ಶೈಲಿಯಲ್ಲಿ ಜೇಕಬ್ ವರ್ಗಿಸ್ ಕಥೆ ಹೇಳಿದ್ದಾರೆ. ಅಂದ ಹಾಗೇ ಚಂಬಲ್‌ನಂಥ ಸಿನಿಮಾ ಇಂದಿನ ದಿನಗಳಲ್ಲಿ ಮಾಡಲು ಎಂಟೆದೇ ಗುಂಡಿಗೆ ಬೇಕು. ಹೀಗಿದ್ದೂ ಅನೇಕ ಸವಾಲುಗಳನ್ನ ಸ್ವೀಕರಿಸಿ ಜೇಕಬ್ ವರ್ಗಿಸ್ ಸಮರ್ಥವಾಗಿ ಚಿತ್ರದ ಕಥೆಯನ್ನ ಹೇಳಿದ್ದಾರೆ. ಎಲ್ಲಿಯೂ ಆಕಳಿಕೆ, ತೂಕಡಿಕೆಗೆ ಅವಕಾಶ ಮಾಡಿಕೊಡ್ದೇ ವರ್ಗಿಸ್ ಕಥೆ ಹೇಳಿರುವ ರೀತಿ ನಿಜಕ್ಕೂ ಮೆಚ್ಚುವಂಥದ್ದೇ. ಇನ್ನೂ ನೀನಾಸಂ ಸತೀಶ್ ಅಭಿನಯದ ಬಗ್ಗೆಯೂ ದೂಸ್ರಾ ಮಾತು ಮಾತನಾಡುವಂಗಿಲ್ಲ. ಸರ್ಕಾರಿ ಅಧಿಕಾರಿಯ ಜೀವನ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ, ಹೋರಾಟ, ಜನಾಭಿಮಾನದ ಪಾತ್ರದಲ್ಲಿ ಪ್ರತಿಯೊಂದು ಘಳಿಗೆಯಲ್ಲೂ ಡಿ.ಕೆ.ರವಿಯನ್ನ ಸತೀಶ್ ನೆನಪಿಸುತ್ತಾರೆ.

ಸಿಂಪಲ್ಲಾಗಿ ಹೇಳಬೇಕಂದ್ರೆ ಇದು ಸತೀಶ್ ವೃತ್ತಿಯ ವಿಶೇಷ ಸಿನಿಮಾ. ಇನ್ನೂ ಚಿತ್ರದಲ್ಲಿನ ಪೋಷಕ ವರ್ಗನೂ ಚಿತ್ರದ ಕಥೆಗೆ ಸೂಕ್ತವಾಗಿದೆ. ಒಂಧರ್ಥದಲ್ಲಿ ತಾರಾಬಳಗದ ಆಯ್ಕೆಯೇ ಚಿತ್ರದ ಮೊದಲ ಸಕ್ಸಸ್. ಅಚ್ಯುತ್ ಕುಮಾರ್, ಸರ್ದಾರ್ ಸತ್ಯ, ರೋಜರ್ ನಾರಾಯಣ್, ಲೂಸಿಯಾ ಪವನ್ ಕುಮಾರ್, ಹಾಗೂ ಶ್ರುತಿ ಗೌಡ ತಮ್ಮ ಅಭಿನಯದಿಂದ ಗಮನಸೆಳೆಯುತ್ತಾರೆ. ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಅತಿಥಿ ಪಾತ್ರದಲ್ಲಿ ಕಿಶೋರ್ ಇರುವಷ್ಟು ಹೊತ್ತು ತಮ್ಮ ಅಭಿನಯದಿಂದ ನಿಮ್ಮನ್ನ ಮಂತ್ರಮುಗ್ದಗೊಳಿಸುತ್ತಾರೆ. ಪೂರ್ಣ ಚಂದ್ರ ತೇಜಸ್ವಿ ಹಾಗೂ ಜ್ಯೂಡಾ ಸ್ಯಾಂಡಿಯ ಸಂಗೀತ ಚಂಬಲ್‌ನ ಮತ್ತೊಂದು ಶಕ್ತಿ. ಒಟ್ನಲ್ಲಿ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿಯ ಸಾವಿನ ಸುತ್ತ ಗಿರಕಿ ಹೊಡೆದ ಅನೇಕ ಪ್ರಶ್ನೆಗಳಿಗೆ ಸಂಶೋಧನೆ ಮಾಡುವ ಮೂಲಕ ಉತ್ತರ ಕೊಡುವ ಯತ್ನವನ್ನ ಇಲ್ಲಿ ಚಿತ್ರತಂಡ ಮಾಡಿದೆ. ನಿಷ್ಠಾವಂತ ಅಧಿಕಾರಿಗಳಿಗೆ ಅರ್ಪಿಸಲಾಗಿರುವ ಚಂಬಲ್‌ನ ನೀವ್ ನೋಡಬೇಕು ಅಂಥ ಅಂದುಕೊಂಡಿದ್ದರೆ, ಇಂದೇ ಹೋಗಿ ನೋಡಿ. ಯಾಕಂದ್ರೆ ಇದು ಅಪರೂಪದ ಸಿನಿಮಾ. ಮಿಸ್ ಮಾಡಿಕೊಳ್ಳಲಾಗದ ಸಿನಿಮಾ. ಚಂಬಲ್ ನೋಡಿ ಪ್ರಚಾರ ತಂಡ ಕೊಡ್ತಿರೋದು 5 ಕ್ಕೆ 4 ಸ್ಟಾರ್ಸ್ ..!

LEAVE A REPLY

Please enter your comment!
Please enter your name here