ಚಂದನ್ ಪಾಲಾದ ಗೊಂಬೆ – ಹಸೆಮಣೆ ಏರಿದ ಲಕ್ಷ್ಮಿ ಬಾರಮ್ಮ ನಟಿ – ಬಾಲ್ಯದ ಗೆಳೆಯನ ಕೈ ಹಿಡಿದ ಸೋನು ಗೌಡ ಸಹೋದರಿ

0
1927

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಅಂತಾನೇ ಖ್ಯಾತಿ ಆಗಿರುವ ನೇಹಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗೊಂಬೆ ಇಂದು ಮದುವೆಯ ಬಂಧನಕ್ಕೆ ಒಳಗಾದರು.
ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದುವೆ ಆಗಿದ್ದಾರೆ. ಆಶ್ಚರ್ಯ ಎಂದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಗೊಂಬೆಯನ್ನ ಮದುವೆ ಆಗಿರುವ ನಾಯಕ ಹೆಸರು ಚಂದನ್. ಇವರಿಬ್ಬರದ್ದು ಸುಮಾರ ೧೮ ವರ್ಷದ ಲವ್ ಸ್ಟೋರಿ ಅಂತೇ. ತಮ್ಮ ಇಷ್ಟು ವರ್ಷದ ಪ್ರೇಮ ಕತೆಗೆ ಈಗ ಮದುವೆಯ ಮೂಲಕ ಸುಂದರವಾದ ಅರ್ಥ ನೀಡಿ ಸಪ್ತಪದಿ ತುಳಿದಿದ್ದಾರೆ .
ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದ್ದು ಅಂಬರೀಷ್ ಸುಮಲತಾ ಸೇರಿದಂತೆ ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಧಾರಾವಾಹಿಯ ಕಲಾವಿದರು ಕೂಡ ಮದುವೆಯಲ್ಲಿ ಭಾಗಿ ಆಗಿದ್ದರು. ತಂಗಿಯ ಮದುವೆಯಲ್ಲಿ ಅಕ್ಕ ಸೋನು ಗೌಡ ಹಾಡಿಗೆ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ .

ಗೊಂಬೆಯನ್ನ ಮದುವೆ ಆಗಿರುವ ಚಂದನ್ ಸದ್ಯ ಬ್ಯಾಂಕಾಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೆಲವು ದಿನಗಳ ನಂತ್ರ ಗೊಂಬೆ ಕೂಡ ಬ್ಯಾಂಕಾಕ್ ಗೆ ಪ್ರಯಾಣ ಬೆಳಸಲಿದ್ದಾರೆ. ನೇಹಾ ಅಭಿನಯ ಮಾಡುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಚಿತ್ರೀಕರಣ ಮುಗಿಯುವ ತನಕವೂ ಗೊಂಬೆ ಪಾತ್ರದಲ್ಲಿ ನೇಹಾಗೌಡ ಅವರೇ ಮುಂದುವರೆಯಲಿದ್ದಾರಂತೆ. ನೇಹಾ ಗೌಡ ಹಾಗು ಚಂದನ್ ಅವರಿಗೆ ಮದುವೆಯ ಶುಭಾಶಯಗಳು

LEAVE A REPLY

Please enter your comment!
Please enter your name here