ಚಂದನ್ಗೆ ಗಿಫ್ಟ್ ಕೊಟ್ಟು ಮಿಸ್ಸ್ ಯು ಅಂದ ನಿವೇದಿತ ಗೌಡ

0
61

ನಿವೇದಿತಾ ತಮ್ಮ ಪ್ರೀತಿಯ ಗೆಳೆಯನಿಗೆ ವಿಶೇಷ ಊಡುಗೊರೆಯೊಂದನ್ನ ಕೊಟ್ಟಿದಾರೆ. ಚಂದನ್‌ಗೆ ಸ್ಪೆಷಲ್ ಕಾಫಿ ಮಗ್ ಕೊಟ್ಟು ,ಅದರ ಮೇಲೆ ಸ್ವೀಟ್ ಮೆಸೆಜ್ ಬರೆದಿದ್ದಾರೆ. ನಾನು ನಿನ್ನ ತುಂಬಾ ಮಿಸ್ ಮಾಡ್ಕೊತೀನಿ. ನೀನು ನನ್ನ ಪಕ್ಕದಲ್ಲೇ ಇರ್‌ಬೇಕಿತ್ತು ಅನಿಸುತ್ತೆ. ನಿನ್ನ ಪ್ರೀತಿಯ ನಿವಿ ಎಂದು ತಮ್ಮ ಮನಸ್ಸಿನಲ್ಲಿದ್ದ ಎಮೊಷನಲ್ ಸಂದೇಶವನ್ನ ಕಾಫಿ ಮಗ್ ಮೇಲೆ ಬಿಚ್ಚಿಟ್ಟಿದಾರೆ. ಚಂದನ್ ಕೂಡ ಸುಮ್ಮನಿರಲಾಗದೇ ತಮ್ಮ ಇನ್್ಸ ಟಾಗ್ರಾಮ್‌ನಲ್ಲಿ ಈ ಕಥೆಯನ್ನ ಬರೆದುಕೊಂಡಿದ್ದಾರೆ. ನಿವೇದಿತಾ ಗಿಫ್ಟ್ ಪಡೆದ ಚಂದನ್ ಈ ಗಿಫ್ಟ್ ನನಗೆ ಅಮೂಲ್ಯ. ನಾನು ಕೂಡ ನಿನ್ನನ್ನ ಮಿಸ್ ಮಾಡಿಕೊಂಡೆ ಎಂದು ಟಚಿಂಗ್ ರಿಪ್ಲೇ ಕೊಟ್ಟಿದಾರೆ.ಅಷ್ಟಕ್ಕೂ ಈ ರೀತಿ ಪೋಸ್ಟ್‌ಗಳನ್ನ ಚಂದನ್ ಹಾಕ್ತಿರೋದು ಇದೇ ಮೊದಲೇನಲ್ಲ. ನಿವೇದಿತಾ ಹಾಗೂ ಚಂದನ್ ಫ್ರೆಂಡ್‌ಶಿಪ್‌ಗೆ ಕನ್ನಡಿ ಹಿಡಿಯುವಂತಹ ಪೋಸ್ಟ್‌ಗಳು, ಡಬ್ ಸ್ಮಾಶ್‌ಗಳು ಸುಮಾರಿದೆ.

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಮೇಲೂ ಸ್ಪರ್ಧಿಗಳು ಒಳಗಿದ್ದ ಸ್ಪರ್ಧಿಗಳನ್ನ ಮೀಟ್ ಮಾಡೋದು ಕಡಿಮೆನೇ. ಆದರೆ ನಿವೇದಿತಾ ಹಾಗೂ ಚಂದನ್ ಈಗಲೂ ತಮ್ಮ ಫ್ರೆಂಡ್ ಶಿಪ್ ಉಳಿಸಿಕೊಂಡಿದ್ದಾರೆ. ನಿವೇದಿತಾ ಬಗೆಗಿನ ಗಾಸಿಪ್‌ಗಳಿಗೆ ಚಂದನ್ ಸ್ಟ್ರೈಟ್ ಫಾವರ್ಡ್ ಆಗಿ ಹೇಳೊದೇನು ಗೊತ್ತಾ? ನಾನು ಹಾಗೂ ನಿವೇದಿತಾ ಇಬ್ಬರು ಜಸ್ಟ್ ಗುಡ್ ಫ್ರೆಂಡ್ಸ್. ಸದ್ಯಕ್ಕೆ ನನಗೆ ಮದುವೆಯಾಗೋ ಯಾವ ಪ್ಲಾನ್ ಕೂಡ ಇಲ್ಲ. ಮ್ಯೂಸಿಕ್ ಬಗ್ಗೆ ಮಾತ್ರ ಗಮನ ಹರಿಸ್ತೀನಿ ಎಂದು ನಯಾವಾಗಿ ಜಾರಿಕೊಂಡಿದ್ದಾರೆ. ಒಟ್ಟಿನಲ್ಲಿ ಬೆಂಕಿ ಇಲ್ಲದೇ ಹೊಗೆಯಾಡುತ್ತಾ ಅನ್ನೊ ಮಾತಿನಂತೆ ಚಂದನ್ ಹಾಗೂ ನಿವೇದಿತಾರ ಕುಚ್‌ಕುಚ್ ಕಹಾನಿಗೆ ಯಾವಾಗ ತೆರೆ ಬೀಳುತ್ತೆ ಅನ್ನೋದೆ ಬಿಗ್ ಸಸ್ಪೆನ್ಸ್.

LEAVE A REPLY

Please enter your comment!
Please enter your name here