ಗೋಲ್ಡನ್ ಸ್ಟಾರ್ ಎದುರು ಆರ್ಭಟಿಸಲಿದ್ದಾರೆ ಕೆ ಜಿ ಎಫ್ ವಿಲನ್ ಅಯ್ಯಪ್ಪ

0
89

 ಗೋಲ್ಡನ್‌ ಸ್ಟಾರ್ ಗಣೇಶ್‌ ಅಭಿನಯದ ಪ್ರಶಾಂತ್‌ ರಾಜ್‌ ನಿರ್ದೇಶನದ ಸ್ಯಾಂಡಲ್‌ವುಡ್‌ ಮತ್ತೊಂದು ಬಹು ನಿರೀಕ್ಷಿತ ಆರೆಂಜ್‌ ಸಿನಿಮಾ. ಈ ಸಿನಿಮಾ ಇದೇ ವಾರ ರಾಜ್ಯದಾದ್ಯಂತ ಪ್ರೇಕ್ಷಕರೆದುರಿಗೆ ಬರ್ತಿದೆ. ಇದೇ 7ನೇ ತಾರೀಖು ರಿಲೀಸ್‌ ಆಗ್ತಿರೋ ಈ ಸಿನಿಮಾ ಸಿಕ್ಕಾಪಟ್ಟೆ ಸ್ಪೆಷಾಲಿಟಿಗಳಿಂದ ಕೂಡಿದೆ. ಈಗಾಗ್ಲೇ ಟ್ರೈಲರ್‌ ಮತ್ತು ಹಾಡುಗಳಿಂದ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿರೋ ಈ ಸಿನಿಮಾದಲ್ಲಿ ಕೆ.ಜಿ.ಎಫ್‌ ಸಿನಿಮಾದ ವಿಲನ್‌ ಇದ್ದಾರೆ ಅಂದ್ರೆ, ನೀವು ನಂಬ್ಲೇ ಬೇಕು ಹೌದು, ಕೆ.ಜಿ.ಎಫ್‌ ಸಿನಿಮಾದಲ್ಲಿ ಪ್ರಮುಖ ವಿಲನ್‌ ಆಗಿ ಕಾಣಿಸಿಕೊಂಡಿರೋ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಸಹೋದರ ಅಯ್ಯಪ್ಪ ಆರೆಂಜ್‌ ಚಿತ್ರದ ವಿಲನ್‌ ದೇವ್‌ ಗಿಲ್‌ಗೆ ವಾಯ್ಸ್‌ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಯ್ಯಪ್ಪ ವಾಯ್ಸ್‌ ಕೂಡ ಒಂದು ಪ್ಲಸ್‌ ಪಾಯಿಂಟ್‌ ಅಂತೆ. ಡಬ್ಬಿಂಗ್‌ ಮಾಡೋ ಟೈಂನಲ್ಲಿ ಸಿನಿಮಾ ನೋಡಿರೋ ಅಯ್ಯಪ್ಪ ಇದು ಕಂಪ್ಲೀಟ್ ಫ್ಯಾಮಿಲಿ ಎಂಟ್ರಟೈನರ್‌ ಎಲ್ಲಾರೂ ನೋಡಿ ಆನಂದಿಸಬಹುದು ಅಂತ ಹೇಳಿದ್ದಾರೆ.
https://www.youtube.com/watch?v=U3Ohi4eu0FM 

LEAVE A REPLY

Please enter your comment!
Please enter your name here