ಗೂಗಲ್ಗೆ ಶಾಕ್ ಕೊಟ್ಟ ರಶ್ಮಿಕ ಮಂದಣ್ಣ – ಸೌಥ್ ಟಾಪ್ ಲಿಸ್ಟ್ನಲ್ಲಿ ಕಿರಿಕ್ ಹುಡುಗಿ

0
90

ಅಬ್ಬಬ್ಬಾ ! ನೋಡ್ರಪ್ಪಾ. ಪಡ್ಡೆ ಹುಡುಗರು ರಶ್ಮಿಕಾರ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್ ಆಗಿರೋಕೆ ಈಗ ದೊಡ್ಡ ಸಾಕ್ಷಿ ಸಿಕ್ಕಿದೆ. ಇತ್ತೀಚೆಗೆ ಗೂಗಲ್ ಟ್ರೆಂಡ್ಸ್ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ, ಈ ವರ್ಷ ಗೂಗಲ್ ಬಳಕೆದಾರರು ಸರ್ಚ್ ಮಾಡೀರೊ ಟಾಪ್ ಐದನೇ ಹಿರೋಯಿನ್ ’ರಶ್ಮಿಕಾ ಮಂದಣ್ಣ’ ಅಂತೆ. ಈ ವಿಷಯ ಕೇಳಿದ ಖುದ್ದು ರಶ್ಮಿಕಾಗೆ ತಲೆ ತಿರುಗಿಬಿಟ್ಟಿತಂತೆ.ಇನ್ನು ರಶ್ಮಿಕಾ ಪಾಲಿಗೆ ಡಬಲ್‌ಧಮಾಕಾ ಅನ್ನೋ ಹಾಗೆ ’ಗೀತ ಗೋವಿಂದಂ’ ಚಿತ್ರ ಈ ವರ್ಷದ ಟಾಪ್ ಗೂಗಲ್ ಸರ್ಚಿಂಗ್ ಸಿನಿಮಾ ಎನಿಸಿಕೊಂಡಿದೆ. ಬರ್ತಾ ಬರ್ತಾ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾನೇ ಬೇಕು ಎನ್ನುವ ಡಿಮ್ಯಾಂಡ್ ಕ್ರಿಯೆಟ್ ಆಗಿರುವ ಬೆನ್ನಲ್ಲೇ ಗೂಗಲ್ ಸರ್ಚ್‌ನಲ್ಲೂ ರಶ್ಮಿಕಾ ಟಾಪಲ್ಲಿರೋ ಸ್ವೀಟ್ ನ್ಯೂಸ್ ಅಭಿಮಾನಿಗಳ ಬಾಯಿಗೆ ಸಕ್ಕರೆ ಹಾಕಿದಂತಾಗಿದೆ.ಈ ವಿಷಯ ಕೇಳಿ ಸಕತ್ ಎಕ್ಸಾಯಟ್ ಆಗಿರುವ ರಶ್ಮಿಕಾ ’ ದಿಸ್ ಇಸ್ ಸಮ್‌ಥಿಂಗ್ ಕೂಲ್, ಥ್ಯಾಂಕ್ಯೂ ಸೋ ಮಚ್’ ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರರಂಗದ ಘಟನುಘಟಿಗಳ ರೇಸ್‌ನಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಗುರುತಿಸಿಕೊಂಡಿರೋ ರಶ್ಮಿಕಾ ಹೆಸರು ಟಾಪ್ ಟ್ರೇಡಿಂಗ್‌ನಲ್ಲಿರೋದು ಎಲ್ಲ ಹೀರೊಯಿನ್‌ಗಳ ಕಣ್ಣುಕುಕ್ಕಿಸಿ ಬಿಟ್ಟಿದೆ.

ಗೂಗಲ್ ಟಾಪ್ ಸರ್ಚಿನಲ್ಲಿರೋ ಚಿರಂಜೀವಿ,ವಿಜಯ್ ದೇವರಕೊಂಡ, ಜಗಪತಿ ಬಾಬು, ಪ್ರಕಾಶ್‌ರೈ ಸಾಲಿಗೆ ಈಗ ಕಿರಿಕ್ ಬೆಡಗಿ ಕಾಲಿಟ್ಟಿರೋದು ನಿಜಕ್ಕೂ ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿದೆ. ಅದರಲ್ಲೂ ಇತ್ತೀಚೆಗೆ ಕನ್ನಡದ ’ಪೊಗರು’ ಸಿನಿಮಾಗೆ ರಶ್ಮಿಕಾ ತೆಗೆದುಕೊಂಡ ಸಂಭಾವನೆ ಕೇಳಿ ಬೇರೆ ಹೀರೊಯಿನ್‌ಗಳು ಫುಲ್ ಸೈಲೆಂಟ್ ಆಗಿಬಿಟ್ಟಿದಾರೆ. ಒಟ್ಟಾರೆಯಾಗಿ ತನ್ನ ಪರ್ಸನಲ್ ಲೈಫ್ ಹಾಗೂ ಸಿನಿಮಾಗಳಿಂದ ಸದಾ ಚಾಲ್ತಿಯಲ್ಲಿರೋ ಈ ’ಕರ್ನಾಟಕದ ಕ್ರಶ್’ ಸಾಧನೆಗಳು ಆಕಾಶ ಮುಟ್ಟುತಿದೆ. ಸದ್ಯದಲ್ಲೇ ರಶ್ಮಿಕಾ ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಗಾಳಿ ಸುದ್ಧಿ ಕೂಡ ಇದೆ. ಸೋ, ಇನ್ನು ನಾವು ಕನ್ನಡದಲ್ಲಿ ರಶ್ಮಿಕಾರನ್ನ ನೋಡೋ ಚಾನ್ಸ್ ಇದೆಯೋ ಇಲ್ಲವೋ ಅನ್ನೋ ಪ್ರಶ್ನೆಗೆ ಗೂಗಲ್ ಸರ್ಚ್ ಮಾಡಿ ಉತ್ತರ ಹುಡುಕಬೇಕು ಅನ್ಸುತ್ತೆ.

LEAVE A REPLY

Please enter your comment!
Please enter your name here