ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತ ಪೈಲ್ವಾನ್ – ಕಿಚ್ಚನ ಖದರ್ಗೆ ಅಭಿಮಾನಿಗಳು ದಿಲ್ ಖುಷ್

0
60

ಪೈಲ್ವಾನ್ ಚಿತ್ರದ ಇನ್ನೆರಡು ಫೋಟೋಗಳು ರಿಲೀಸ್ ಆಗಿವೆ . ಈ ಫೋಟೋದಲ್ಲಿ ಕಿಚ್ಚನ ಖದರ್ ಮತ್ತಷ್ಟು ಹೆಚ್ಚಿಸಿದೆ . ಫೋಟೋ ನೋಡಿದ ಮೇಲಂತೂ ಕಿಚ್ಚನ ಅಭಿಮಾನಿಗಳು ಸಿನಿಮಾ ಬೇಗ ರಿಲೀಸ್ ಮಾಡಿ ಅಂದು ಕಿಟ್ಟಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ .ರಿಲೀಸ್ ಆಗಿರುವ ಹೊಸ ಫೋಟೋದಲ್ಲಿ ಕುಸ್ತಿ ಅಖಾಡದಲ್ಲಿ ಕಿಚ್ಚ ತೊಡೆ ತಟ್ಟಿ ನಿಂತಿದ್ದಾರೆ . ಈ ಫೋಟೋ ಫೇಕ್ ಅನ್ನೋಕೆ ಚಾನ್ಸ್ ಇಲ್ಲವೇ ಇಲ್ಲ . ಫೇಕ್ ಫೋಟೋ ಅಂತ ಅಂದು ಬಾಯ್ ಬಾಯ್ ಬಡ್ಕೊಂಡವರಿಗೆ , ಈ ಫೋಟೋಗಳ ಮೂಲಕ ಸರಿಯಾಗಿ ಉತ್ತರ ಕೊಟ್ಟಿದೆ ಕಿಚ್ಚ ಅಂಡ್ ಟೀಮ್ . ಸದ್ಯ ಈ ಫೋಟೋ ನೋಡಿದ ಕಿಚ್ಚನ ಅಭಿಮಾನಿಗಳು ಫೇಕ್ ಫೋಟೋ ಅಂದವರನ್ನಕಿಚಾಯಿಸಲು ಶುರು ಮಾಡಿದ್ದಾರೆ . ಮೊದಲ ಬಾರಿಗೆ ಜಿಮ್ ಕಡೆ ಮುಖ ಹಾಕಿ ಬೆವರು ಇಳಿಸಿದ ಕಿಚ್ಚ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಬಡಿಸೋದಂತೂ ಪಕ್ಕ .. ಚಿತ್ರ ಯಾವಾಗ ಬರುತ್ತೋ ಅಂತ ಜಾತಕ ಪಕ್ಷಿಹಾಗೆ ಕಾಯುತಿದ್ದ ಅಭಿಮಾನಿಗಳಿಗೆ ಸಧ್ಯಕ್ಕೆ ಫೋಟೋ ಬಿಡುಗಡೆ ಮಾಡಿ ಸಮಾಧಾನ ಮಾಡಿದ್ದಾರೆ . ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. `ಪೈಲ್ವಾನ್’ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ. ಆದ್ದರಿಂದ ಸುದೀಪ್ ಈ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದರು ಈ ವರ್ಷ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಮೊದಲಿಗೆ ಪೈಲ್ವಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದರು ಕಿಚ್ಚ.

LEAVE A REPLY

Please enter your comment!
Please enter your name here