ಗಮನ ಸೆಳೆದ ನನ್ನ ಪ್ರಕಾರ ಫಸ್ಟ್ ಲುಕ್ – ಇದು ಪ್ರೀಯಾಮಣಿ ಅಭಿನಯದ ಸಿನಿಮಾ

0
72

ನನ್ನ ಪ್ರಕಾರ.. ಪ್ರಿಯಾಮಣಿಯನ್ನ ಬಹಳ ದಿನಗಳ ನಂತರ ಕನ್ನಡಿಗರ ಎದುರು ಕರೆತರುತ್ತಿರುವ ಸಿನಿಮಾ. ಆರಂಭದಿಂದ್ಲೂ ಎಲ್ಲರ ಗಮನಸೆಳೆದಿದ್ದ ಸಿನಿಮಾದ ಪೋಸ್ಟರ್‌ನ ರಕ್ಷಿತ್ ಶೆಟ್ಟಿ ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.ವಿನಯ್ ಬಾಲಾಜಿ ಚಿತ್ರದ ನಿರ್ದೇಶಕ. ಇದು ಇವ್ರ ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ವಿನೂತನ ಕಥೆಯನ್ನ ಹೇಳಲು ಸಿದ್ಧವಾಗಿದ್ದಾರೆ ನಿರ್ದೇಶಕರು. ಇನ್ನೂ ಕಿಶೋರ್ ಚಿತ್ರದ ಮತ್ತೊಂದು ಕಳೆ. ಹೌದು, ತಮ್ಮ ಅಭಿನಯದಿಂದ ಎಲ್ಲರನ್ನೂ ಕಾಡುವ ಕಿಶೋರ್ ನನ್ನ ಪ್ರಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮಯೂರಿ ನನ್ನ ಪ್ರಕಾರ ಸಿನಿಮಾದ ಮತ್ತೊಂದು ಸೆಳೆತ. ಕಾರಣ, ಇದೇ ಮೊದಲ ಬಾರಿ ಮಯೂರಿ ಇಲ್ಲಿ ಬೋಲ್ಡಾದ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ವಿಹಾನ್ ಗೌಡ ಇದ್ದಾರೆ. ಸದ್ಯ, ಪೋಸ್ಟರ್ ಮೂಲಕ ಸದ್ದು ಮಾಡ್ತಿರುವ ನನ್ನ ಪ್ರಕಾರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here